Mysore
25
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಪ್ರತ್ಯೇಕ ಪ್ರಕರಣ | 11 ಲಕ್ಷ ರೂ.ವಂಚನೆ

ಮೈಸೂರು : ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆನ್‌ಲೈನ್ ವಂಚನೆಗೆ ಒಳಗಾಗಿರುವ ಮೂವರು ಸುಮಾರು ೧೧ಲಕ್ಷ ರೂ. ಗಳನ್ನು ವಂಚಕರ ಖಾತೆಗೆ ಜಮೆ ಮಾಡಿ ಹಣ ಕಳೆದುಕೊಂಡಿದ್ದಾರೆ.

ಮೊದಲನೇ ಪ್ರಕರಣದಲ್ಲಿ ಆಲನಹಳ್ಳಿ ನಿವಾಸಿ ಯುವಕ ಆನ್‌ಲೈನ್ ಮೂಲಕ ಕೆಲಸ ಪಡೆದುಕೊಂಡಿದ್ದಾರೆ. ನಂತರ ಕಂಪೆನಿಯವರು ನೀವು ಮಾಡಿರುವ ಉತ್ತಮ ಕೆಲಸಕ್ಕೆ ಹಣ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ನಂತರ ನೀವು ನಿಮ್ಮ ಖಾತೆಗೆ ಹಣ ಪಡೆದುಕೊಳ್ಳಬೇಕಾದಲ್ಲಿ ಸ್ವಲ್ಪ ಹಣವನ್ನು ಜಮೆ ಮಾಡಬೇಕು ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿದ ಯುವಕ ಹಂತ ಹಂತವಾಗಿ ೨.೦೯ ಲಕ್ಷ ರೂ. ಹಾಕಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

೨ನೇ ಪ್ರಕರಣದಲ್ಲಿ ಹೆಬ್ಬಾಳು ನಿವಾಸಿಯೊಬ್ಬರು ವಾಟ್ಸಾಪ್ ಗ್ರೂಪ್‌ನ ಮೂಲಕ ಬಂದ ಸಂದೇಶವನ್ನು ನಂಬಿ ಆನ್‌ಲೈನ್ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ನಂತರ ಅವರು ಅಲ್ಲಿದ್ದ ಮೊಬೈಲ್ ಸಂಖ್ಯೆಯ ಮೂಲಕ ದುಷ್ಕರ್ಮಿಗಳನ್ನು ಸಂಪರ್ಕಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ದುಷ್ಕರ್ಮಿಗಳು ಅವರಿಗೆ ಸಲಹೆ ನೀಡಿದ್ದಾರೆ. ನಂತರ ಅವರ ಮಾತನ್ನು ನಂಬಿ ಹಂತ ಹಂತವಾಗಿ ೫,೭೦,೯೭೨ ರೂ. ಗಳನ್ನು ಅವರು ಹೇಳಿದ ಖಾತೆಗೆ ಹಾಕಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

೩ನೇ ಪ್ರಕರಣದಲ್ಲಿ ನಗರದ ಕೆ.ಸಿ. ಬಡಾವಣೆ ನಿವಾಸಿ ಮಹಿಳೆಯೊಬ್ಬರು ಟೆಲಿಗ್ರಾಮ್ ವೀಕ್ಷಿಸುತ್ತಿದ್ದ ವೇಳೆ ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ಬಂದಿದೆ. ನಂತರ ಅಲ್ಲಿಯ ಗ್ರೂಪ್‌ಗೆ ಸೇರಿದ್ದಾರೆ.
ಮೊಬೈಲ್ ಮೂಲಕ ಅಲ್ಲಿನ ವ್ಯಕ್ತಿಗಳನ್ನು ಸಂಪರ್ಕಿಸಿದ್ದಾರೆ. ಅವರು ಹೇಳಿದಂತೆ ಹಂತ ಹಂತವಾಗಿ ೩.೪೯ ಲಕ್ಷ ರೂ.ಗಳನ್ನು ಅನಾಮಿಕರು ಹೇಳಿದ ಖಾತೆಗೆ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ನಜರ್‌ಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:
error: Content is protected !!