Mysore
23
overcast clouds
Light
Dark

ತಮಿಳುನಾಡು: ಖಾಸಗಿ ಬಸ್‌-ಲಾರಿ ಡಿಕ್ಕಿ; 4 ಸಾವು, ಹಲವು ಮಂದಿಗೆ ಗಾಯ

ತಮಿಳುನಾಡು: ಖಾಸಗಿ ಬಸ್‌ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಿಂದಾಗಿ ನಾಲ್ಕು ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿದ ಚೆಂಗಲ್‌ಪಟ್ಟು ಜಿಲ್ಲೆಯ ಮಧುರಂತಕಂ ಬಳಿ ಸಂಭವಿಸಿದೆ.

ಈ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿ ಮಾಡಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಲಾರಿಯರನ್ನು ಓವರ್‌ಟೇಕ್‌ ಮಾಡಲು ಮುಂದಾದ ಖಾಸಗಿ ಬಸ್‌, ಲಾರಿಯ ಹಿಂಭಾಗಕ್ಕೆ ಗುದ್ದಿದೆ. ಮತ್ತು ಈ ಖಾಸಗಿ ಬಸ್‌ಗೆ ಸರ್ಕಾರಿ ಬಸ್‌ ಡಿಕ್ಕೆ ಹೊಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ಪೆಟ್ಟಾದ ಗಾಯಳುಗಳನ್ನು ಚೆಂಗಲ್‌ಪಟ್ಟು ಸರ್ಕಾರಿ ಅಸ್ಪತೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದು ಪಡಲಂ ಪೊಲೀಸರು ತಿಳಿಸಿದ್ದಾರೆ.

https://x.com/ANI/status/1790919703071953402

Tags: