Mysore
18
clear sky

Social Media

ಗುರುವಾರ, 22 ಜನವರಿ 2026
Light
Dark

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ ; ಮನನೊಂದ 22 ವರ್ಷದ ಯವತಿ ಆತ್ಮಹತ್ಯೆ

ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿದ್ದ ಯುವಕ, ಯುವತಿಗೆ ಮಾನಸಿಕ-ದೈಹಿಕ ಹಲ್ಲೆ ನಡೆಸಿದ್ದು, ಆತನ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇಂಜಿನಿಯರಿಂಗ್ ಪದವೀಧರೆ ಹಾಸನ ಮೂಲದ 22 ವರ್ಷದ ಅಚಲ ಬೆಂಗಳೂರಿನ ಪಾಂಡುರಂಗ ನಗರದ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಯುವತಿ ಅಚಲ ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳಾಗಿದ್ದು, ಯುವತಿಯ ಸಾವಿನ ಕುರಿತಂತೆ ನಟಿ ಆಶಿಕಾ ರಂಗನಾಥ್ ‘Gone Too Soon’ ಎಂದು ಪೋಸ್ಟ್ ಮಾಡಿದ್ದಾರೆ.

ತಾನು ಅಚಲಳನ್ನು ಮದುವೆಯಾಗುತ್ತೇನೆಂದು ಆಕೆಯ ಪೋಷಕರನ್ನು ಒಪ್ಪಿಸಿದ್ದ ಮಾಯಾಂಕ್ ಅದೇ ಸಲುಗೆಯಲ್ಲಿ ಆಕೆಯೊಂದಿಗೆ ಲೈಂಗಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದಾನೆ. ಇದಕ್ಕೆ ಒಪ್ಪದ್ದಕ್ಕೆ ಆಕೆಯ ಮೇಲೆ ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಅಚಲ ನೇಣಿಗೆ ಶರಣಾಗಿದ್ದಾಳೆ ಎಂದು ಪೋಷಕರು ಪುಟ್ಟೇನಹಳ್ಳಿ ಠಾಣೆಯಲ್ಲಿ ಮಯಾಂಕ್ ಹಾಗೂ ಆತನ ತಾಯಿ ವಿರುದ್ಧ ದೂರು ನೀಡಿದ್ದಾರೆ.

ಇದನ್ನು ಓದಿ: ಜಾತಿ ಕಾರಣಕ್ಕೆ ಪ್ರಿಯಕರನನ್ನು ಕೊಂದ ಯುವತಿ ಕುಟುಂಬಸ್ಥರು : ಮೃತದೇಹವನ್ನೇ ಮದುವೆಯಾದ ಪ್ರಿಯತಮೆ..!

ಈ ದೂರು ಆಧರಿಸಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಡ್ರಗ್ ಅಡಿಕ್ಟ್ ಆಗಿರುವ ಮಯಾಂಕ್‌ ಹಲವು ಯುವತಿಯೊಂದಿಗೆ ಸಂಬಂಧ ಹೊಂದಿದ್ದ ಎಂಬ ವಿಚಾರ ಅಚಲಗೆ ಗೊತ್ತಾಗಿ ಮನೆಯಲ್ಲಿ ವಿಷಯ ಹೇಳಿದ್ದಳು. ಇದರಿಂದ ಕೋಪಗೊಂಡ ಮಾಯಾಂಕ್ ಪದೇ ಪದೇ ಕಿರುಕುಳ ಹಿಂಸೆ ನೀಡುತ್ತಿದ್ದನು. ಅಲ್ಲದೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸುತ್ತಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಾಯಾಂಕ್ ತನಗೆ ವಂಚಿಸಿರುವ ವಿಷಯ ತಿಳಿದರೂ ಅಚಲಾಗೆ ಆತನ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಹೀಗಾಗಿ ಅಚಲ ಆತನಿಗೆ ಮೆಸೇಜ್ ಮಾಡಿ, ಜೀವನದಲ್ಲಿ ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ. ನೀನು ನನಗೆ ಮೋಸ ಮಾಡಿದರೂ ನಿನ್ನನ್ನು ಮರೆಯಲು ಆಗುತ್ತಿಲ್ಲ. ನನ್ನ ಕನಸುಗಳನ್ನು ನೀನು ನುಚ್ಚು ನೂರು ಮಾಡಿದ್ದೀಯ. ನನಗೆ ನೀನು ಮೋಸ ಮಾಡಿಲ್ಲವಾದರೆ ರಾಘವೇಂದ್ರ ಸ್ವಾಮಿ ಮೇಲೆ ಆಣೆ ಮಾಡು. ನೀನು ಮಾಡಿದ ಮೋಸಕ್ಕೆ ತಕ್ಕ ಬೆಲೆ ಕಟ್ಟಲೇಬೇಕು ಎಂದು ಕೊನೆಯ ಬಾರಿಗೆ ಮೆಸೇಜ್ ಮಾಡಿ, ಆನಂತರದಲ್ಲಿ ನೇಣಿಗೆ ಶರಣಾಗಿದ್ದಾಳೆ.

ಘಟನೆ ನಡೆದು 10 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳ ಬಂಧನಕ್ಕೆ ಮೃತ ಅಚಲ ಪೋಷಕರ ಒತ್ತಾಯಿಸಿದ್ದು, ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:
error: Content is protected !!