Mysore
21
overcast clouds
Light
Dark

ಯಾವಾಗ ಬಿಡುಗಡೆಯಾಗಲಿದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ?

ದಕ್ಷಿಣ ಕೊರಿಯಾ ಮೂಲದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪನಿಯ ಸ್ಮಾರ್ಟ್‌ ಫೋನ್‌ ಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಹಾಗಾಗಿ ಸ್ಯಾಮ್‌ಸಂಗ್‌ ತನ್ನ ಎಸ್‌ ಸರಣಿಯ ಸ್ಮಾರ್ಟ್‌ ಫೋನ್‌ ಗಳನ್ನು ದೊಡ್ಡ ಮಟ್ಟದಲ್ಲಿಯೇ ಲಾಂಚ್‌ ಮಾಡುತ್ತಾ ಬರುತ್ತಿದೆ. 
ಸ್ಯಾಮ್‌ಸಂಗ್‌ ಕಂಪನಿಯು 2023 ರ ಆರಂಭದಲ್ಲಿ S23 ಸರಣಿಯನ್ನು ಲಾಂಚ್‌ ಮಾಡಿತ್ತು. ಈ ಸ್ಮಾರ್ಟ್‌ ಫೋನ್‌ ಈಗಲೂ ಕೂಡ ಟ್ರೆಂಡಿಂಗ್‌ ನಲ್ಲಿದೆ.
ವರ್ಷಕ್ಕೊಂದು S ಸರಣಿಯ ಮೊಬೈಲ್‌ ಲಾಂಚ್‌ ಮಾಡುವ ಸ್ಯಾಮ್‌ಸಂಗ್‌ ಮುಂಬರುವ 2024 ರ ಫೆಬ್ರವರಿಯಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿಯನ್ನು ಬಿಡುಗಡೆ ಮಾಡಲು ಕಂಪನಿಯು ಸಿದ್ಧತೆ ನಡೆಸಿದೆ. 
ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24  ನಲ್ಲಿ 200 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಇರಲಿದೆ ಎಂದು ಹೇಳಲಾಗುತ್ತಿದೆ.
ಈ ವರ್ಷದ (2023) ಆರಂಭದಲ್ಲಿ ಬಿಡುಗಡೆಯಾದ ಟಾಪ್‌ ಎಂಡ್‌ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ ಫೋನ್‌ ನ ಕ್ಯಾಮೆರಾ ಕೂಡ ಅದ್ಭುತವಾದ ಕ್ಲಾರಿಟಿ ಹೊಂದಿತ್ತು. ಇದು 200 ಮೆಗಾಪಕ್ಸೆಲ್‌ ನ ಸ್ಯಾಮ್‌ಸಂಗ್ isocell hp2 ಸೆನ್ಸಾರ್‌ ಒಳಗೊಂಡಿತ್ತು.
ಸ್ಯಾಮ್‌ಸಂಗ್‌ ನಿಂದ ಎಐ ಲ್ಯಾಪ್‌ಟಾಪ್‌ : ಸ್ಯಾಮ್‌ಸಂಗ್‌ ಕಂಪನಿಯು ವಿಶ್ವದಲ್ಲಿಯೇ ಮೊದಲ ಬಾರಿಗೆ ಕೃತಕಬುದ್ದಿಮತ್ತೆ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಗ್ಯಾಲಕ್ಸಿ ಬುಕ್‌ 4 ಲ್ಯಾಪ್‌ಟಾಪ್ ಅನ್ನು ಇದೇ ಡಿಸೆಂಬರ್‌ 15 ರಂದು ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತಾದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಈ ಗ್ಯಾಲಕ್ಸಿ ಬುಕ್‌ 4 ಲ್ಯಾಪ್‌ಟಾಪ್‌ ಇಂಟೆಲ್‌ ಕೋರ್‌ ಅಲ್ಟ್ರಾ 7155H ಚಿಪ್‌ಸೆಟ್ ಪ್ರೊಸೆಸರ್‌ ಹೊಂದಿದೆ. ಇದು ಅತ್ಯಂತ ವೇಗದ ಕಾರ್ಯಕ್ಷಮತೆಯೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಈ ಲ್ಯಾಪ್‌ಟಾಪ್‌ ನಲ್ಲಿ ಇಂಟರ್ನೆಟ್‌ ಸಂಪರ್ಕ ಇಲ್ಲದೇ ಅನೇಕ ಕೆಲಸಗಳನ್ನು ಮಾಡಬಹುದಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ