Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಆ್ಯಪಲ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಇರಬೇಕಾದ ಅರ್ಹತೆ ಏನು ?

ಪ್ರತಿಷ್ಠಿತ ಮೊಬೈಲ್‌ ತಯಾರಕ ಕಂಪನಿ ಆ್ಯಪಲ್ ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಹಲವರ ಕನಸಾಗಿರುತ್ತೆ. ಅಂತೆಯೇ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಯಾವೆಲ್ಲಾ ಅರ್ಹತೆಗಳಿರಬೇಕು. ವಿದ್ಯಾಭ್ಯಾಸ ಏನಿರಬೇಕು ಎಂಬ ಗೊಂದಲಗಳಿರುತ್ತವೆ. ಈ ಎಲ್ಲಾ ಗೊಂದಲಗಳಿಗೆ ಕಂಪನಿಯ ಸಿಇಒ ಟಿಮ್‌ ಕುಕ್‌ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಆಪಲ್‌ ಕಂಪನಿಯ ಸಿಇಒ ಟಿಮ್‌ ಕುಕ್‌ ಅವರಿಗೆ ಸಂದರ್ಶನಕಾರರು ನಿಮ್ಮ ಕಂಪನಿಯಲ್ಲಿ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ ? ಉದ್ಯೋಗ ಪಡೆದುಕೊಳ್ಳಬೇಕಾದರೆ ಏನು ಮಾಡಬೇಕು ? ಎಂಬ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿದ ಟಿಮ್‌ ಕುಕ್‌ ನಮ್ಮ ಕಂಪನಿಯ ನೇಮಕಾತಿ ಪ್ರಕ್ರಿಯೆಯು ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸೃಜನಶೀಲತೆ, ಕುತೂಹಲದಂತಹ ಗುಣಲಕ್ಷಣಗಳ ಮೇಲೆ ನಿಗಧಿಯಾಗಿರುತ್ತದೆ. ನಮ್ಮ ಕಂಪನಿಯು ಒನ್ ಪ್ಲಸ್‌ ಥ್ರೀ ಕಲ್ಪನೆಯಲ್ಲಿ ಕೆಲಸ ನಿರ್ವಹಿಸುತ್ತದೆ. ನಿಮ್‌ ಹಾಗೂ ನನ್ನ ಕಲ್ಪನೆ ಒಟ್ಟಿಗೆ ಸೇರಿದಾಗ ವಯಕ್ತಿಕ ಆಲೋಚನೆಗಳಿಗಿಂ ಉತ್ತಮವಾಗಿರುತ್ತದೆ. ಇದನ್ನು ಕಂಪನಿಯು ಬಲವಾಗಿ ನಂಬಿದೆ.

ನಮ್ಮ ಕಂಪನಿಯು ಪದವಿ ಹೊಂದಿರುವ ಹಾಗೂ ಪದವಿ ಹೊಂದಿಲ್ಲದವರನ್ನೂ ಕೂಡ ಕೆಲಸಕ್ಕೆ ನೇಮಿಸಿಕೊಂಡಿದೆ. ಕೋಡಿಂಗ್‌ ಪ್ರತಿಯೊಬ್ಬರಿಗೂ ಮೌಲ್ಯಯುತವಾದ ಪರಿಗಳಿಸಿದ್ದರೂ ಕೂಡ ಆ್ಯಪಲ್ ಕೋಡಿಂಗ್‌ ಪರಿಣತಿ ಹೊಂದಿರುವ ಆಥವಾ ತಮ್ಮ ನಿತ್ಯದ ಕೆಲಸದಲ್ಲಿ ನಿಯಮಿತವಾಗಿ ಕೋಡಿಂಗ್‌ ಬಳಸುವ ವ್ಯಕ್ತಿಗಳನ್ನೂ ಸಹ ನೇಮಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಆ್ಯಪಲ್ ಕಂಪನಿಯು ಇತ್ತಿಚೆಗಷ್ಟೆ ಐ ಫೋನ್‌ 15 ಸರಣಿಯನ್ನು ತಂತ್ರಜ್ಞಾನದೊಂದಿಗೆ ಲಾಚ್‌ ಮಾಡಿತ್ತು. ಇದರಲ್ಲಿ 48 ಎಂಪಿ ಮುಖ್ಯ ಕ್ಯಾಮೆರಾವನ್ನು ಹೊಂದಿತ್ತು. ಇದು ಐ ಫೋನ್‌ 14 ಹಾಗೂ ಐ ಫೋನ್‌ 14 ಪ್ಲಸ್‌ ಗಿಂತ ನವೀಕರಣ ಪಡೆದಿದೆ. ಇದರಲ್ಲಿ ಮೊದಲ ಬಾರಿಗೆ ಯುಎಸ್‌ ಬಿ ಟೈಪ್‌ ಸಿ ಪರಿಚಯಿಸಿರುವುದು ಮತ್ತೊಂದು ದೊಡ್ಡ ಬದಲಾವಣೆಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ