ಹೊಸದಿಲ್ಲಿ : ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಆಶ್ಚರ್ಯಕರವಾದ ಬೆಳವಣಿಗೆ ಸಾಧಿಸಿದ್ದು, ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ GDP ಶೇಕಡಾ 8.2 ರಷ್ಟು ಹೆಚ್ಚಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಇದು ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಶೇಕಡಾ 5.6 ರಿಂದ ಶೇ. 8.2ಕ್ಕೆ ಪ್ರಬಲ ಜಿಗಿತವಾಗಿದೆ ಮತ್ತು ಗರಿಷ್ಟ ಬೆಳವಣಿಗೆಯಾಗಿದೆ.
ರಾಷ್ಟ್ರೀಯ ಅಂಕಿಅಂಶ ಕಚೇರಿ(NSO) ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ತೋರಿಸಿರುವ ಆರ್ಥಿಕ ಬೆಳವಣಿಗೆಯು ಅರ್ಥಶಾಸ್ತ್ರಜ್ಞರು ಮಾಡಿದ ಅಂದಾಜುಗಳನ್ನು ಮೀರಿಸಿದೆ.
ಮೊದಲ ತ್ರೈಮಾಸಿಕದಲ್ಲಿ(ಏಪ್ರಿಲ್-ಜೂನ್) ನೈಜ GDPಯಲ್ಲಿ ಶೇ. 7.8 ರಷ್ಟು ಹೆಚ್ಚಳವಾಗಿತ್ತು. ಈಗ ಎರಡನೇ ತ್ರೈಮಾಸಿಕದಲ್ಲಿ GDP ಶೇಕಡಾ 8.2 ರಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿಯ(NSO) ಇತ್ತೀಚಿನ ದತ್ತಾಂಶ ಬಹಿರಂಗಪಡಿಸಿದೆ.
ಇದಕ್ಕೂ ಮೊದಲು 2024ರ ಜನವರಿ – ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ. 8.4ರಷ್ಟು ಗರಿಷ್ಠ ಬೆಳವಣಿಗೆ ಕಂಡಿತ್ತು. ಇದೀಗ ಮತ್ತೆ ಶೇ. 7.8ರಷ್ಟು ಬೆಳವಣಿಗೆಯೊಂದಿಗೆ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.





