Mysore
25
overcast clouds
Light
Dark

ಯಥಾಸ್ಥಿತಿ ಕಾಯ್ದುಕೊಂಡ ರೆಪೋ ದರ

ನವದೆಹಲಿ : ಆರ್‌ಬಿಐ ನಿರೀಕ್ಷೆಯಂತೆ ರೆಪೋ ದರ ಯಥಾಸ್ಥಿತಿ ಕಾಯ್ದುಕೊಳ್ಳು ನಿರ್ಧರಿಸಿದೆ ಎಂದು ಆರ್‌ಬಿಐ (ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ತಿಳಿಸಿದ್ದಾರೆ.

ಮೂರು ದಿನಗಳ ಎಂಪಿಸಿ ಸಭೆ ಬಳಿಕ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಕ್ತಿಕಾಂತ್‌ ದಾಸ್‌ ಅವರು ಮಧ್ಯಮ ಆರ್ಥಿಕ ಸ್ಥಿರತೆ ಹಾಗೂ ಆರ್ಥಿಕ ಬೆಳವಣಿಗೆಯ ಬಗ್ಗೆ ನಿಗಾ ಇರಿಸಲಾಗಿದೆ. ಹಣದುಬ್ಬರವನ್ನೂ ಕೂಡ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ತುರ್ತು ಸಂದರ್ಭದಲ್ಲಿ ವಿಶೇಷ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗ ಆರ್‌ಬಿಐ (ಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ) ನಿರೀಕ್ಷೆಯಂತೆ ರೆಪೋ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲು ನಿರ್ದರಿಸಲಾಗಿದೆ. ಹಾಗಾಗಿ ಬಡ್ಡಿ ದರವನ್ನು ಶೇ.6.5 ರಲ್ಲಿ ಮುಂದುವರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ಮೂಲಕ ಸತತ ಐದನೇ ಬಾರಿಗೆ ರೆಪೋ ದರ ಶೇ. 6.5 ರ ದರದ ಮಟ್ಟದಲ್ಲಿಯೇ ಇದೆ.

ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುವ ಎಂಪಿಸಿ ಸಭೆಯಲ್ಲಿ ರೆಪೋ ದರ ಮಾತ್ರವಲ್ಲದೇ ಸ್ಟಾಂಡಿಂಗ್‌ ಡೆಪಾಸಿಟ್‌ ಫೆಸಿಲಿಟಿ ಹಾಗೂ ಮಾರ್ಜಿನಲ್‌ ಸ್ಟ್ಯಾಂಡಿಂಗ್‌ ಫೆಸಿಲಿಟಿ ದರವನ್ನು ಕ್ರಮವಾಗಿ ಶೇ. 6.25 ಮತ್ತು ಶೇ. 6.7 ರಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕುವ ಸಲುವಾಗಿ ಪ್ರಮುಖ ಅಸ್ತ್ರವೆನ್ನಲಾದ ವಿತ್‌ ಡ್ರಾವಲ್‌ ಆಫ್‌ ಅಕಮಡೇಶನ್‌ ನ ಕ್ರಮವನ್ನು ಮುದುವರೆಸಲು ನಿರ್ಧರಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ