Mysore
22
overcast clouds
Light
Dark

ವಿಶ್ವದ ಮೊದಲ ಎಐ ಲ್ಯಾಪ್ ಟಾಪ್‌ ಪರಿಚಯಿಸಲಿದೆ ಸ್ಯಾಮ್‌ಸಂಗ್

ಎಲೆಕ್ಟ್ರಾನಿಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪನಿಯು ವಿಶ್ವದಲ್ಲಿಯೇ ಮೊದಲ ಬಾರಿಗೆ ಕೃತಕ ಬುದ್ದಿಮತ್ತೆ ಲ್ಯಾಪ್‌ಟಾಪ್‌ ಅನ್ನು ಪರಿಚಯಿಸಲಿದೆ.

ಈ ಕೃತಕ ಬುದ್ದಿಮತ್ತೆ ಲ್ಯಾಪ್‌ಟಾಪ್‌ ಶೀಘ್ರದಲ್ಲಿಯೇ ಗ್ಯಾಲಕ್ಸಿ ಬುಕ್‌ 4 ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲಕ್ಸಿ ಬುಕ್‌ 4 ಲ್ಯಾಪ್‌ಟಾಪ್ ಅನ್ನು ಇದೇ ಡಿಸೆಂಬರ್‌ 15 ರಂದು ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತಾದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಗ್ಯಾಲಕ್ಸಿ ಬುಕ್‌ 4 ಲ್ಯಾಪ್‌ಟಾಪ್‌ ಇಂಟೆಲ್‌ ಕೋರ್‌ ಅಲ್ಟ್ರಾ 7155H ಚಿಪ್‌ಸೆಟ್ ಪ್ರೊಸೆಸರ್‌ ಹೊಂದಿದೆ. ಇದು ಅತ್ಯಂತ ವೇಗದ ಕಾರ್ಯಕ್ಷಮತೆಯೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಈ ಲ್ಯಾಪ್‌ಟಾಪ್‌ ನಲ್ಲಿ ಇಂಟರ್ನೆಟ್‌ ಸಂಪರ್ಕ ಇಲ್ಲದೇ ಅನೇಕ ಕೆಲಸಗಳನ್ನು ಮಾಡಬಹುದಾಗಿದೆ.

ಇದು ಸ್ಯಾಮ್‌ಸಂಗ್‌ ಗೊಸ್‌ ಎಂಬ ಕೃತಕ ಬುದ್ದಿಮತ್ತೆಯಿಂದ ಕಾರ್ಯನಿರ್ವಹಿಸಲಿದೆ. ಇದರಲ್ಲಿನ ಸಿಪಿಯುನಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರ ಸಹಾಯದಿಂದ ಎಐ ವೇಗವಾಗಿ ಕೆಲಸ ನಿರ್ವಹಿಸುತ್ತದೆ.

ಈ ಗ್ಯಾಲಕ್ಸಿ ಬುಕ್‌ 4 ಲ್ಯಾಪ್‌ಟಾಪ್‌ 32 GB ರ್ಯಾಮ್‌ ಹಾಗೂ 1T B ವರೆಗೆ ಆನ್‌ ಬೋರ್ಡ್‌ ಸಂಗ್ರಹಣೆಯನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ