ಮೊಬೈಲ್ ಪ್ರಿಯರು ಬಹುದಿನಗಳಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಒನ್‌ಪ್ಲಸ್ 12 ಸ್ಮಾರ್ಟ್ ಫೋನ್ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಇದೇ ಡಿಸೆಂಬರ್ 4 ರಂದು ಕಂಪನಿಯು ತನ್ನ 10 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದೇ ದಿನದಂದು ಒನ್‌ಪ್ಲಸ್ 12 ಸ್ಮಾರ್ಟ್ ಫೋನ್ ಅನ್ನೂ ಕೂಡ ಬಿಡುಗಡೆ ಮಾಡಲು ಕಂಪನಿ ಸಿದ್ಧತೆ ಮಾಡಿಕೊಂಡಿದೆ.
ಬಿಡುಗಡೆಗೂ ಮುನ್ನವೇ ಒನ್‌ಪ್ಲಸ್ 12 ನ ಕೆಲವು ಫೀಚರ್ಸ್ ಗಳು ಮೊಬೈಲ್ ಪ್ರಿಯರನ್ನು ಸೆಳೆಯುತ್ತಿವೆ. ಅಧಿಕೃತವಾಗಿ ಈ ಫೋನಿನ ಫೀಚರ್ಸ್ ನ ಬಗೆಗಿನ ಮಾಹಿತಿ ತಿಳಿದುಬಂದಿಲ್ಲವಾದರೂ ಕೆಲವು ಟಿಪ್‌ಸ್ಟರ್ ಗಳು ಈ ಫೋನಿನ ರಿವ್ಯೂ ನೀಡಿದ್ದಾರೆ.
ರಿವ್ಯೂ ಪ್ರಕಾರ ಈ ಮೊಬೈಲ್ ಪೇಲ್ ಗ್ರೀನ್, ರಾಕ್ ಬ್ಲ್ಯಾಕ್ ಮತ್ತು ವೈಟ್, ಮೂರು ಬಣ್ಣಗಳಲ್ಲಿ ಲಭ್ಯವಿರಲಿದ್ದು, ನಯವಾದ ವಿನ್ಯಾಸದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೋಂದಿರಲಿದೆ, ಪೆರಿಸ್ಕೋಪ್ ಜೂಮ್ ಲೆನ್ಸ್ ಹೊಂದಿರುವ ಈ ಮೋಬೈಲ್ ನಲ್ಲಿ ಟೆಲಿಫೋಟೊ ಲೆನ್ಸ್ ಅಳವಡಿಸಲಾಗಿದೆ. ಇದರಿಂದ ಅತ್ಯುತ್ತಮವಾದ ಫೋಟೋಗಳನ್ನು ಸೆರೆಹಿಡಿಯಲು ಅನುಕೂಲವಾಗುತ್ತದೆ.
ಆರಂಭದಲ್ಲಿ ಈ ಒನ್‌ಪ್ಲಸ್ 12 ಸ್ಮಾರ್ಟ್ ಫೋನ್ ಚೀನಾದಲ್ಲಿ ಬಿಡುಗಡೆಯಾಗಲಿದೆ. ನಂತರ ಜನವರಿಯ ಬಳಿಕ ಗ್ಲೋಬಲ್ ಮಾರ್ಕೆಟ್ ಗೆ ಲಗ್ಗೆ ಇಡಲಿದೆ.
ಕಳೆದ ವರ್ಷ ಭಾರತದಲ್ಲಿ ಒನ್‌ಪ್ಲಸ್ 11 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಕಂಪನಿಯು ಒನ್‌ಪ್ಲಸ್ 12 ಬಿಡುಗಡೆಗೆ ಸಜ್ಜಾಗಿದ್ದು, ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲ.