ನವದೆಹಲಿ: ಹೊಸವರ್ಷದ ಸಂಭ್ರಮದಲ್ಲಿದ್ದ ಜನತೆ ತೈಲ ಮಾರುಕಟ್ಟೆ ಕಂಪನಿ ಶಾಕ್ ನೀಡಿದ್ದು, ನೂತನ ವರ್ಷದ ಮೊದಲ ದಿನವೇ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವನ್ನು 25 ರೂ.ಗೆ ಹೆಚ್ಚಳ ಮಾಡಿದೆ. ನೂತನ ಪರಿಷ್ಕೃತ ದರ ಭಾನುವಾರದಿಂದಲೇ ಜಾರಿಗೆ ಬಂದಿದೆ.
ಇದಲ್ಲದೆ ವರ್ಷಾರಂಭದಲ್ಲಿ ಟೋಲ್ ತೆರಿಗೆ, ಬ್ಯಾಂಕ್ ಲಾಕರ್ ಸೇರಿದಂತೆ ಹಲವು ನಿಯಮಗಳು ಕೂಡ ಬದಲಾಗಿದ್ದು, ಜನಸಾಮಾನ್ಯರ ಜೇಬಿಗೆ ಹೊರೆ ಬೀಳಲಿದೆ.
ಕಾರು ಖರೀದಿಯು ಕೂಡ ದುಬಾರಿಯಾಗಲಿದೆ. ಕ್ರೆಡಿಟ್ ಕಾರ್ಡ್ ನಿಯಮಗಳಲ್ಲೂ ದೊಡ್ಡ ಬದಲಾವಣೆಯಾಗಲಿದೆ. ವಾಹನಗಳ ದರವನ್ನು ಹೆಚ್ಚಿಸಲಾಗಿದ್ದು, ಮಾರುತಿ, ಸುಜುಕಿ, ಹೊಂಡೈ, ಮೋಟಾರ್, ಟಾಟಾ ಮೋಟಾರ್ಸ್, ಮರ್ಸಿಡಿಸ್ ಬೆಂಜ್, ಆಡಿ, ರೆನಾಲ್ಟ್, ಎಂಜಿ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳು ದರ ಹೆಚ್ಚಿಸಿವೆ.
ಲಾಕರ್ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಜಿಎಸ್ಟಿ ನಿಯಮಗಳಲ್ಲೂ ಕೂಡ ಬದಲಾವಣೆಯಾಗಿದೆ, ವಾರ್ಷಿಕ 5 ಕೋಟಿಗೂ ಹೆಚ್ಚು ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಇನ್ವಾಯ್ಸ್ಗಳನ್ನು ಉತ್ಪಾದಿಸುವುದು ಅಗತ್ಯವಾಗಿದೆ. ಪ್ರತಿ ಫೋನ್ ತಯಾರಕರು ಆಮದು ಮತ್ತು ರಫ್ತು ಕಂಪನಿಗಳಿಗೆ ಇಎಂಇಐ ಸಂಖ್ಯೆಯನ್ನು ನೊಂದಾಯಿಸಬೇಕಾಗಿದೆ.
ಕಳೆದ ಸೆಪ್ಟೆಂಬರ್ 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 91.50 ಪೈಸೆ ಇಳಿಕೆ ಮಾಡಿದ್ದವು. ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಿಸುತ್ತವೆ.