ಹೊಸದಿಲ್ಲಿ : ಆರ್ಥಿಕ ಪರಿಸ್ಥಿತಿ ಮತ್ತು ರೂಪಾಯಿ ಕುಸಿತವನ್ನು ಗಂಭೀರವಾಗಿ ಪರಿಗಣಿಸಬೇಕು. ರೂಪಾಯಿ ಮೌಲ್ಯದ ಸ್ಥಿರವಾದ ಕುಸಿತವು ಹಣದುಬ್ಬರ, ಚಾಲ್ತಿ ಖಾತೆ ಕೊರತೆ ಮತ್ತು ಬಡ್ಡಿದರಗಳ ಮೇಲೆ ಪರಿಣಾಮ ಬೀರುತ್ತದೆ. ರೂಪಾಯಿ ಕುಸಿತ ತಡೆಯಲು ಈ ಕ್ಷಣದಲ್ಲಿ ಸರಕಾರಕ್ಕೆ ದೇಶದಲ್ಲಿ ಲಭ್ಯವಿರುವ ಎಲ್ಲ ಬುದ್ಧಿವಂತಿಕೆ ಮತ್ತು ಅನುಭವದ ಅಗತ್ಯವಿದೆ. ದೇಶದ ಹಿತಾಸಕ್ತಿ ಹೊಂದಿರುವ ಪ್ರಖ್ಯಾತ ವೃತ್ತಿಪರರ ಗುಂಪನ್ನು ನಾನು ಸೂಚಿಸಿದ್ದೇನೆ. ಆ ಗುಂಪಿನ ಮಾರ್ಗದರ್ಶನವನ್ನು ಪಡೆದರೆ ರೂಪಾಯಿ ಮೌಲ್ಯದ ಕುಸಿತ ತಪ್ಪಲಿದೆ,” ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಹೊಸದಿಲ್ಲಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿಯುತ್ತಲೇ ಇದೆ. ಇದನ್ನು ತಪ್ಪಿಸಲು ಏನು ಮಾಡಬೇಕು ಎಂಬ ಬಗ್ಗೆ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದಾರೆ.