ವಿಶ್ವದ ಅತ್ಯಂತ ಶ್ರೀಮಂತ ಮುಖೇಶ್ ಅಂಬಾನಿ ಪುತ್ರಿಯ ಲೈಫ್ ಸ್ಟೈಲ್ ಆಕೆಯ ತಾಯಿ ನೀತಾ ಅಂಬಾನಿಯನ್ನು ಮೀರಿಸುವಂತಿದೆ.
ನೀತಾ ಅಂಬಾನಿಯವರು ಧರಿಸುವ ಬಟ್ಟೆ, ಚಪ್ಪಲಿ, ಬ್ಯಾಗ್ ಎಲ್ಲವೂ ಕೂಡ ಅತ್ಯಂತ ದುಬಾರಿ ಬೆಲೆಯದ್ದೆ. ಈ ವಿಷಯದಿಂದಲೇ ನೀತಾ ಅಂಬಾನಿಯವರು ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ಪುತ್ರಿ ಇಶಾ ಅಂಬಾನಿ ತನ್ನ ದುಬಾರಿ ಜೀವನ ಶೈಲಿಯ ಮೂಲಕ ತನ್ನ ತಾಯಿಯನ್ನೂ ಮೀರಿಸುತ್ತಿದ್ದಾರೆ.
ಮುಖೇಶ್ ಅಂಬಾನಿಯವರ ಪುತ್ರಿ ಇಶಾ ಅಂಬಾನಿ ತಮ್ಮ ಪ್ರತಿಭೆಯಿಂದಲೇ ವ್ಯಾಪಾರ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅದಷ್ಟೇ ಅಲ್ಲದೇ ಸ್ಟೈಲ್ ಐಕಾನ್ ಕೂಡ ಆಗಿದ್ದಾರೆ. ತಮ್ಮ ಆಯ್ಕೆಗಳ ಮೂಲಕ ಇಶಾ ಅಂಬಾನಿಯವರು ಜನರನ್ನು ಉಬ್ಬೇರಿಸುವಂತೆ ಮಾಡಿದ್ದಾರೆ. ದುಬಾರಿ ಬೆಎಯ ಬಟ್ಟೆ, ಆಕ್ಸಸರೀಸ್ ಬಳಸುವ ಮೂಲಕ ಗಮನ ಸೆಳೆಯುತ್ತಾರೆ.
ಇತ್ತೀಚೆಗೆ ಇಶಾ ಅಂಬಾನಿಯವರು ಕಲ್ಚರಲ್ ಸೆಂಟರ್ ನ ಆರ್ಟ್ ಹೌಸ್ ಪಅಪ್ ಫೇಮ್, ಲವ್ ಅಂಡ್ ಪವರ್ ನ ಉದ್ಘಾಟನೆಯ ವೇಳೆ ಧರಿಸಿದ್ದ ಬಟ್ಟೆಯ ಬೆಲೆ ಎಲ್ಲೆರೂ ಹುಬ್ಬೇರಿಸುವಂತೆ ಮಾಡಿದೆ. ಕಾರ್ಯಕ್ರಮದಲ್ಲಿ ಇಶಾ ಅಂಬಾನಿಯವರು ಗೋಲ್ಡನ್ ಕಲರ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಅವರು ಧರಿಸಿದ್ದ ಡ್ರೆಸ್ ನ ಬೆಲೆ ಬರೋಬ್ಬರಿ ನಾಲ್ಕು ಲಕ್ಷ ರೂ.
ಈ ಡ್ರೆಸ್ ಅನ್ನು ಸ್ಪ್ಯಾನಿಷ್ ಡಿಸೈನರ್ ಪ್ಯಾಕೋ ರಬನ್ನೆ ಅವರು ವಿನ್ಯಾಸಗೊಳಿಸಿದ್ದಾರೆ.