Mysore
25
overcast clouds
Light
Dark

ದಕ್ಷಿಣ ಭಾರತದಲ್ಲಿ ಡಾಬರ್‌ ಕಂಪನಿಯ ಪ್ರೊಡಕ್ಷನ್‌ ಬ್ರಾಂಚ್‌ ಸ್ಥಾಪನೆ

ನವದೆಹಲಿ : ಭಾರತ ದೇಶದಲ್ಲಿನ ಆಯುರ್ವೇದಿಕ್‌ ಉತ್ಪನ್ನಗಳ ಪ್ರಮುಖ ಕಂಪನಿ ಎಂದೆನಿಸಿರುವ ಡಾಬರ್‌ ಇನ್ನೋಂದು ವರ್ಷದೊಳಗೆ ದಕ್ಷಿಣ ಭಾರತದಲ್ಲಿ ತನ್ನ ಹೊಸ ಪ್ರೊಡಕ್ಷನ್‌ ಬ್ರಾಂಚ್‌ ಸ್ಥಾಪನೆ ಮಾಡಲು ಚಿಂತನೆ ನಡೆಸಿದೆ ಎಂದು ಡಾಬರ್‌ ಕಂಪನಿಯ ಸಿಇಒ ಮೋಹಿತ್‌ ಮಲ್ಹೋತ್ರಾ ತಿಳಿಸಿದ್ದಾರೆ.

ಡಾಬರ್‌ ಕಂಪನಿಯು ದೇಶೀಯ ಮಾರಾಟದಲ್ಲಿ ಶೇ.20ರಷ್ಟು ಪಾಲನ್ನು ದಕ್ಷಿಣ ಭಾರತದಲ್ಲಿ ಹೊಂದಿದೆ. ಈ ಭಾಗದಲ್ಲಿ ಡಾಬರ್‌ ಉತ್ಪನ್ನಗಳ ಮಾರಾಟವು ಕಳೆದ ಐದಾರು ವರ್ಷಗಳ ಅವಧಿಯಲ್ಲಿ ದುಪ್ಪಟ್ಟಾಗಿದೆ.

ಮದ್ಯ ಪ್ರಾಚ್ಯ ಹಾಗೂ ಯುರೋಪ್‌ ನ ಗ್ರಾಹಕರ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಡಾಬರ್‌ ಉತ್ಪನ್ನಗಳ ತಯಾರಿಕೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲಿದ್ದೇವೆ. ಡಾಬರ್‌ ಕಂಪನಿಯು ಇಂದೋರ್‌ ನಲ್ಲಿ ತನ್ನ ಹೊಸ ಘಟಕ ಶುರು ಮಾಡಲು ಸುಮಾರು 350 ಕೋಟಿ ಹಣವನ್ನು ಹೂಡಿಕೆ ಮಾಡಿತ್ತು ಎಂದು ಕಂಪನಿ ತಿಳಿಸಿದೆ.

ಈಗಾಗಲೇ ಡಾಬರ್‌ ಕಂಪನಿಯು ದೇಶಾದ್ಯಂತ 13 ಪ್ರೊಡಕ್ಷನ್‌ ಯುನಿಟ್‌ ಗಳನ್ನು ಹೊಂದಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ಪೂರೈಸಲು ಕಂಪನಿಯ ಮತ್ತೊಂದು ಬ್ರಾಂಚ್‌ ಅನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಲು ತೀರ್ಮಾನಿಸಿದ್ದೇವೆ ಎಂದು ಕಂಪನಿಯ ಸಿಇಒ ಮೋಹಿತ್‌ ಮಲ್ಹೋತ್ರಾ ಹೇಳಿದ್ದಾರೆ.

ಡಾಬರ್‌ ಕಂಪನಿಯು ಭಾರತೀಯ ಬಹುರಾಷ್ಟ್ರೀಯ ಗ್ರಾಹಕ ಸರಕುಗಳ ಪ್ರಸಿದ್ಧ ಕಂಪನಿಯಾಗಿದೆ. ಇದು ಗಾಜಿಯಾಬಾದ್‌ ನಲ್ಲಿ ತನ್ನ ಪ್ರಧಾನ ಕಂಪನಿಯನ್ನು ಹೊಂದಿದೆ. ಇದು ಆಯುರ್ವೇದ, ಔಷಧ ಉತ್ಪನ್ನಗಳನ್ನು ತಯಾರಿಸುವ ಬಹುದೊಡ್ಡ ಕಂಪನಿಯಾಗಿದೆ.

ಈ ಪ್ರಸಿದ್ಧ ಡಾಬರ್‌ ಕಂಪನಿಯನ್ನು 1884 ರಲ್ಲಿ ಕೋಲ್ಕತ್ತಾದಲ್ಲಿ ಡಾ.ಎಸ್.ಕೆ ಬರ್ಮನ್‌ ಅವರು ಸ್ಥಾಪಿಸಿದ್ದರು.ಇವರು ಕೋಲ್ಕತ್ತಾದಲ್ಲಿ ಆಯುರ್ವೇದ ವೈದ್ಯರಾಗಿದ್ದ ಇವರು ತಮ್ಮ ಡಾಬರ್‌ ಕಂಪನಿಯ ಮೂಲಕ ಕಾಲರಾ, ಮಲಬದ್ಧತೆ, ಹಾಗೂ ಮಲೇರಿಯಾದಂತಹ ಮಾರಕ ಖಾಯಿಲೆಗಳಿಗೆ ಆಯುರ್ವೇದ ಔಷಧಿಗಳನ್ನು ತಯಾರಿಸಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ