Mysore
14
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ನೈರ್ಮಲ್ಯದ ತಾಣವಾದ ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆ

ಶಿಮಾರಂಜನ ಎಂ.ಆರ್‌. ಪತ್ರಿಕೋದ್ಯಮ ವಿಭಾಗ , ಮಹಾರಾಣಿ ಮಹಿಳಾ ಕಲ ಕಾಲೇಜು, ಮೈಸೂರು

ಎಲ್ಲಿ ನೋಡಿದರಲ್ಲಿ ಕಸದ ರಾಶಿ. ತರಕಾರಿ ಮಾರುಕಟ್ಟೆಯ ಸುತ್ತ ಕೊಳೆತ ತರಕಾರಿಗಳ ಗುಡ್ಡೆ. ಅದನ್ನು ತಿಂನ್ನಲು ಬಂದ ಹಸುಗಳು ತರಕಾರಿಗಳನ್ನು ಎಳೆದು ತಂದು ರಸ್ತೆ ಮಧ್ಯೆ ಚಲ್ಲಾಡಿರುವ ದೃಶ್ಯ. ಇವೆಲ್ಲವೂ ಕಂಡು ಬಂದಿದ್ದು ನಗರದ ಎಂಜಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ.

ಈ ರಸ್ತೆಯಲ್ಲಿ ದಿನನಿತ್ಯ ಸಂಚಾರಿಸುವ ವಾಹನ ಸವಾರರಿಗೆ ಇದರಿಂದ ಬಾರಿ ಸಮಸ್ಯೆಯಾಗುತ್ತಿದೆ. ರಾತ್ರಿ ಇಡೀ ಜಾನುವಾರುಗಳು ತರಕಾರಿಗಳನ್ನು ತಿನ್ನುತ್ತಾ ಎಳೆದು ತಂದು ರಸ್ತೆಯ ಮಧ್ಯ ಬಿಸಾಡಿರುತ್ತವೆ. ಇದರಿಂದಾಗಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಗುತ್ತಿದೆ.ಇನ್ನು ತರಕಾರಿ ಮಾರಾಟ ಮಾಡುವವರು ಮುಂಜಾನೆ ವೇಳೆ ರಸ್ತೆ ಮಧ್ಯದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿ ಅಲ್ಲೇ ತರಕಾರಿ ಮಾರಾಟ ಮಾಡುತ್ತಾರೆ. ಅಲ್ಲದೇ ರಸ್ತೆಯ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ.

ಈ ಕುರಿತು ಹತ್ತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯೆಗೆ ಹಿಡಿದ ಕೈಗನ್ನಡಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆಯವರು ಈ ದಿನನಿತ್ಯದ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಲ್ಪಿಸುವ ಮೂಲಕ ಸಾರ್ವಜನಿಕರ ಕೊರತೆಯನ್ನು ನೀಗಿಸಲು ಮುಂದಾಗಬೇಕಿದೆ.

Tags:
error: Content is protected !!