Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

ಈ ಜೀವ ಈ ಜೀವನ | ಡಾ. ಉದಯ್ ಮೋದಿ ಎಂಬ ಮುಂಬೈಯ ‘ಟಿಫಿನ್ ಡಾಕ್ಟರ್’

ಪಂಜು ಗಂಗೊಳ್ಳಿ

ಹದಿಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ಶ್ರಾವಣ್ ಟಿಫಿನ್ ಸೇವಾ’ ಪ್ರತಿದಿನ ೫೦೦ ಜನರಿಗೆ ಊಟಗಳನ್ನು ಕಳಿಸುತ್ತಿದೆ!

ಉದಯ್ ಮೋದಿ ಊಟ ಕಳಿಸುವ ೫೦೦ ಜನ ಹಿರಿಯ ನಾಗರಿಕರಲ್ಲಿ ಒಬ್ಬರ ಮಗ ಮುಂಬೈ ಹೈ ಕೋರ್ಟ್ ಲಾರ್ಯ. ಮೋದಿ ಅವರಿಗೆ ಫೋನ್ ಮಾಡಿ ಆತನ ತಂದೆಯ ಊಟದ ಖರ್ಚಿನ ಬಾಬತ್ತು ಏನಾದರೂ ಹಣ ಕಳಿಸಿದರೆ ತನಗೊಂದಿಷ್ಟು ಅನುಕೂಲವಾಗುತ್ತದೆ ಎಂದಾಗ ಆ ಮಗರಾಯ, ‘ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಅವರಿಗೆ ಊಟ ಕಳಿಸಿ ಅಂತ ನಾನು ನಿಮಗೆ ಹೇಳಿದ್ದೇನೆಯೇ?’ ಎಂದು ಇವರಿಗೇ ತಿರುಗಿಸಿ ಕೇಳಿದ!

ಡಾ ಉದಯ್ ಮೋದಿ ಮುಂಬೈಯ ಬಯಾಂರ್ದ (ಪ.) ಎಂಬಲ್ಲಿನ ೫೩ ವರ್ಷ ಪ್ರಾಯದ ಒಬ್ಬ ಸಾಮಾನ್ಯ ಆಯುರ್ವೇದ ವೈದ್ಯರು. ೨೦೦೮ರ ಆಗಸ್ಟ್ ತಿಂಗಳ ಒಂದು ದಿನ ಅವರು ತಮ್ಮ ಕ್ಲಿನಿಕ್ನಲ್ಲಿ ಕುಳಿತ್ತಿದ್ದಾಗ ೭೫ ರ ಆಸುಪಾಸಿನ ಪ್ರಾಯದ ದಂಪತಿಗಳಿಬ್ಬರು ಒಳಬರುತ್ತಾರೆ. ಅವರಿಗೆ ಚಿಕಿತ್ಸೆ ನೀಡುತ್ತ ಅವರೊಂದಿಗೆ ಮಾತಾಡುವಾಗ, ಅವರಿಗೆ ಮೂವರು ಗಂಡು ಮಕ್ಕಳಿದ್ದು ಯಾರೂ ಅವರನ್ನು ನೋಡಿಕೊಳ್ಳದೆ ಅವರಿಗೆ ಒಂದು ಹೊತ್ತಿನ ಅನ್ನಕ್ಕೂ ಗತಿಯಿಲ್ಲ ಎಂಬುದು ಅವರಿಗೆ ತಿಳಿದು ಬರುತ್ತದೆ. ಅದನ್ನು ಆ ದಂಪತಿಗಳು ಬಹಳ ಸಂಕೋಚದಿಂದ ಅವರೊಂದಿಗೆ ಹೇಳಿಕೊಂಡರು. ದಂಪತಿಗಳ ಪರಿಸ್ಥಿತಿ ತಿಳಿದು ಮರುಗಿದ ಉದಯ್ ಮೋದಿ, ಮರುದಿನದಿಂದ ಅವರಿಗೆ ತನ್ನ ಮನೆಯಿಂದ ಊಟ ಕಳಿಸಲು ಪ್ರಾರಂಭಿಸಿದರು. ಆಗ ಅವರ ಪತ್ನಿ ಅಂತಹವರು ಅಕ್ಕಪಕ್ಕ ಇನ್ನೂ ಬಹಳಷ್ಟು ಜನರು ಇರಬಹುದು ಎಂದು ಹೇಳಿದಾಗ, ಉದಯ್ ಮೋದಿ ಅಂತಹವರು ಯಾರದರೂ ಇದ್ದರೆ ತಮ್ಮನ್ನು ಸಂಪರ್ಕಿಸುವಂತೆ ಪೋರ್ಸ್ಟ ಹಾಕಿಸುತ್ತಾರೆ, ಮತ್ತು ದಿನಪತ್ರಿಕೆಗಳಲ್ಲಿ ಪ್ಯಾಂಪ್ಲೆಟ್ ಸಿಕ್ಕಿಸಿ ಹಂಚುತ್ತಾರೆ. ಆ ಮೂಲಕ ಅಂತಹ ೧೧ ಜನ ಹಿರಿಯ ನಾಗರಿಕರು ಪತ್ತೆಯಾದರು.

ಪ್ರಾರಂಭದ ೧೫ ದಿನ ಮೋದಿಯವರ ಪತ್ನಿಯೇ ಅಡುಗೆ ಮಾಡಿ, ಪ್ಯಾಕ್ ಮಾಡಿದರು. ಆದರೆ, ದಿನೇದಿನೇ ಸಂಖ್ಯೆ ಹೆಚ್ಚಲು ಪ್ರಾರಂಭಿಸಿದಾಗ ಡಾ ಉದಯ್ ಮೋದಿ ಅದಕ್ಕಾಗಿ ಪ್ರತ್ಯೇಕ ಅಡುಗೆ ಮನೆ, ಅಡುಗೆಯವರು, ಡೆಲಿವರಿ ಬಾಯ್ಗಳು, ಕೆಲಸಗಾರರು, ವಾಹನಗಳ ವ್ಯವಸ್ಥೆ ಮಾಡಿ, ಪೂರ್ತಿ ಚಟುವಟಿಕೆಯನ್ನು ಒಂದು ಟ್ರಸ್ಟ್ ಮೂಲಕ ನಿರ್ವಹಿಸಲು ಪ್ರಾರಂಭಿಸಿದರು. ಅದಕ್ಕೆ ‘ಶ್ರಾವಣ್ ಟಿಫಿನ್ ಸೇವಾ’ ಎಂಬ ಹೆಸರನ್ನು ಕೊಟ್ಟರು. ೧೩ ವರ್ಷಗಳ ಹಿಂದೆ ಪ್ರಾರಂಭಗೊಂಡ ‘ಶ್ರಾವಣ್ ಟಿಫಿನ್ ಸೇವಾ’ ಇಂದು ಪ್ರತಿದಿನ ೫೦೦ ಜನರಿಗೆ ಊಟಗಳನ್ನು ಕಳಿಸುತ್ತಿದೆ. ಇದಕ್ಕಾಗಿ ಎರಡು ಅಡುಗೆ ಮನೆ, ಇಬ್ಬರು ಅಡುಗೆಯವರು, ೨೦ ಡೆಲಿವರಿ ಬಾಯ್ಗಳಿದ್ದಾರೆ. ಎರಡರಲ್ಲಿ ಒಂದು ಅಡು

ಗೆ ಮನೆಯನ್ನು ಸಿಹಿಮೂತ್ರ ಖಾಯಿಲೆ ಇರುವವರಿಗೆ ವಿಶೇಷ ರೀತಿಯ ಟಿಫಿನ್ ತಯಾರಿಸಲು ಮೀಸಲಾಗಿರಿಸಿದ್ದಾರೆ.

ಉದಯ್ ಮೋದಿ ಇದಕ್ಕಾಗಿ ತಮ್ಮನ್ನು ಎಷ್ಟು ಗಂಭೀರ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆಂದರೆ, ಟಿಫಿನ್ ಡೆಲಿವರಿಗೆ ಹೋಗುವ ಮೊದಲು ತಾವು ಅದನ್ನು ತಿಂದು ನೋಡಿ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ಪ್ರತಿ ಊಟದಲ್ಲಿ ಎಂಟು ಚಪಾತಿ, ಅನ್ನ, ಪಲ್ಯ, ದಾಲ್ (ತೊವೆ) ಇರುತ್ತದೆ. ಪ್ರತೀದಿನ ತಿಂದದ್ದೇ ತಿಂದು ಬೇಸರ ಬಾರದಿರಲಿ ಎಂದು ಪ್ರತೀವಾರ ಟಿಫಿನ್ನ ಮೆನು ಬದಲಾಯಿಸುತ್ತಾರೆ. ಪ್ರತೀ ಭಾನುವಾರ ಏನಾದರೂ ಸಿಹಿ ಅಥವಾ ಐಸ್ಕ್ರೀಮ್ ಇರುತ್ತದೆ. ತೀರಾ ವಯಸ್ಸಾಗಿ ಹಲ್ಲು ಉದುರಿದವರಿಗಾಗಿ ಮೆತ್ತಗಿನ ಆಹಾರ ಕಳಿಸುತ್ತಾರೆ. ಒಂದು ದಿನವೂ ರಜೆ ಇಲ್ಲ. ಯಾರಿಗೂ ಯಾವುದೇ ಕಾರಣಕ್ಕೂ ಒಂದು ದಿನವೂ ಟಿಫಿನ್ ಮಿಸ್ ಆಗುವಂತಿಲ್ಲ. ಏಕೆಂದರೆ, ಆ ಹಿರಿಯರು ಸಂಪೂರ್ಣವಾಗಿ ಮೋದಿಯವರು ಕಳಿಸಿಕೊಡುವ ಈ ಊಟವನ್ನು ಅವಲಂಬಿಸಿರುವುದರಿಂದ ಊಟ ತಪ್ಪಿದರೆ ಆವತ್ತು ಅವರು ಉಪವಾಸ ಬೀಳಬೇಕಾಗುತ್ತದೆ. ಕೋವಿಡ್ ಹಿನ್ನೆಲೆಯ ಲಾಕ್ ಡೌನ್ ಸಮಯದಲ್ಲೂ ಉದಯ್ ಮೋದಿಯವರು ಒಂದು ದಿನವೂ ಊಟ ತಪ್ಪದಂತೆ ನೋಡಿಕೊಂಡಿದ್ದರು. ಅದಕ್ಕಾಗಿ ಅವರು ತಾವೇ ಸ್ವತಃ ಬೆಳಗ್ಗಿನ ನಸುಕಿನ ಹೊತ್ತು ಕೆಲಸಗಾರರರೊಂದಿಗೆ ಕಿರಾಣಿ ಅಂಗಡಿಗಳ ಎದುರು ಸಾಮಾನು ಖರೀದಿಸಲು ಸಾಲು ನಿಲ್ಲುತ್ತಿದ್ದರು. ದಿನನಿತ್ಯದ ಊಟವಲ್ಲದೆ ನವರಾತ್ರಿ, ದೀಪಾವಳಿ, ಸ್ವಾತಂತ್ಯೋತ್ಸವದ ದಿನಗಳಂದು ಹಬ್ಬದ ಊಟಗಳನ್ನು ತಯಾರಿಸಿ ಕಳಿಸುತ್ತಾರೆ. ಪ್ರತಿಯೊಬ್ಬ ಹಿರಿಯರ ಜನ್ಮದಿನವನ್ನು ತಿಳಿದುಕೊಂಡು ಆವತ್ತು ಅವರಿಗಾಗಿ ವಿಶೇಷ ಊಟದ ವ್ಯವಸ್ಥೆ ಮಾಡುತ್ತಾರೆ.

‘ಶ್ರಾವಣ್ ಟಿಫಿನ್ ಸೇವಾ’ದ ಪ್ರತಿತಿಂಗಳ ಖರ್ಚು ಸುಮಾರು ೩ ಲಕ್ಷ ರುಪಾಯಿ. ಈ ಹಣವನ್ನು ಉದಯ್ ಮೋದಿ ತನ್ನ ವೈದ್ಯ ವೃತ್ತಿ, ಕೆಲವು ಹಿತೈಷಿಗಳು ಕೊಡುವ ದೇಣಿಗೆಯಲ್ಲದೆ ತಾನು ಹಿಂದಿ ಮತ್ತು ಗು

ಜರಾತಿ ಟಿವಿ ಧಾರವಾಹಿಗಳಲ್ಲಿ ಪಡೆಯುವ ಸಂಭಾವನೆಯಿಂದ ಸರಿದೂಗಿಸುತ್ತಾರೆ. ಇವರ ಇಬ್ಬರು ಮಕ್ಕಳು ಆಯುಷಿ ಮತ್ತು ಅರುಣ್ ಪ್ರತಿ ತಿಂಗಳು ತಾವು ಉಳಿಸಿದ ಪುಡಿಗಾಸನ್ನು ತಂದೆಗೆ ನೀಡುತ್ತಾರೆ. ಈ ಮಕ್ಕಳು ಬಾಲ್ಯದಲ್ಲಿ ತಂದೆಗೆ ಹಣದ ಹೊರೆ ಹೇರಬಾರದೆಂದು ತಮಗೆ ಆಟಿಕೆ ಬೇಕು, ಬಟ್ಟೆ ಬೇಕು ಎಂದು ಬೇಡಿಕೆ ಇಡುತ್ತಿರಲಿಲ್ಲ. ಹಸಿವೆಯ ಜೊತೆ ಆರೋಗ್ಯ ಸಮಸ್ಯೆಯನ್ನೂ ನೋಡಿಕೊಳ್ಳುತ್ತಾರೆ. ಅಗತ್ಯವುಳ್ಳವರಿಗೆ ನಡೆಯಲು ಸಹಾಯಕವಾಗಲು ಊರುಗೋಳುಗಳನ್ನು ನೀಡುತ್ತಾರೆ. ಅವರಿಗೆ ನಿಯಮಿತವಾಗಿ ಸ್ಯಾನಿಟೈರ್ಸ, ಮಾಸ್ಕ್, ಔಷಧಿಗಳನ್ನು ಕಳಿಸುತ್ತ ಅವರ ಆರೋಗ್ಯದ ಮೇಲೂ ನಿಗಾ ಇರಿಸಿದ್ದರು. ಇವರು ಊಟ ಕಳಿಸುವ ೫೦೦ ಜನರಲ್ಲೀ ಒಬ್ಬರಿಗೂ ಕೋವಿಡ್ ಸೋಂಕು ತಗಲಿಲ್ಲ ಎಂಬುದು ಒಂದು ವಿಶೇಷ.

ಉದಯ್ ಮೋದಿ ಊಟ ಕಳಿಸುವ ೫೦೦ ಜನ ಹಿರಿಯ ನಾಗರಿಕರಲ್ಲಿ ಒಬ್ಬರ ಮಗ ಮುಂಬೈ ಹೈ ಕೋರ್ಟ್ ಲಾರ್ಯ. ಮೋದಿ ಅವರಿಗೆ ಫೋನ್ ಮಾಡಿ ಆತನ ತಂದೆಯ ಊಟದ ಖರ್ಚಿನ ಬಾಬತ್ತು ಏನಾದರೂ ಹಣ ಕಳಿಸಿದರೆ ತನಗೊಂದಿಷ್ಟು ಅನುಕೂಲವಾಗುತ್ತದೆ ಎಂದಾಗ ಆ ಮಗರಾಯ, ‘ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಅವರಿಗೆ ಊಟ ಕಳಿಸಿ ಅಂತ ನಾನು ನಿಮಗೆ ಹೇಳಿದ್ದೇನೆಯೇ?’ ಎಂದು ಇವರಿಗೇ ತಿರುಗಿಸಿ ಕೇಳಿದ!

ಗುಜರಾತಿನ ಸೌರಾಷ್ಟ್ರದ ಅಮ್ರೇಲಿ ಎಂಬಲ್ಲಿ ಜನಿಸಿದ ಉದಯ್ ಮೋದಿ, ಜಾಮ್ ನಗರದಲ್ಲಿ ಆಯುರ್ವೇದ ವೈದ್ಯ ತರಬೇತಿ ಪಡೆದು ಮುಂಬೈಗೆ ಬಂದು ೨೫ ವರ್ಷಗಳ ಹಿಂದೆ ಬಯಂದರ್ನಲ್ಲಿ ಕ್ಲಿನಿಕ್ ತೆರೆದರು. ನಿರಾಶ್ರಿತರಾಗಿ ಏಕಾಂಗಿ ಬದುಕು ನಡೆಸುತ್ತಿರುವ ಈ ಹಿರಿಯ ಜೀವಿಗಳ ಕೊನೆಯ ಕೆಲವು ದಿನಗಳಾದರೂ ಶಾಂತಯುತವಾಗಿರಲಿ ಎಂಬುದಷ್ಟೇ ನನ್ನ ಈ ಸೇವೆಯ ಮುಖ್ಯ ಧ್ಯೇಯ ಎಂದು ಉದಯ್ ಮೋದಿ ಹೇಳುತ್ತಾರೆ. ಪ್ರತೀದಿನ ಊಟ ಕಳಿಸಬೇಕಾದವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅದಕ್ಕಾಗಿ ‘ದಿಖ್ರಾ ನು ರ್ಘ’ ಎಂಬ ಒಂದು ಸುಸಜ್ಜಿತ ವೃದ್ಧಾಶ್ರಮವನ್ನು ನಿರ್ಮಿಸುವ ಸಲುವಾಗಿ ಬಯಂರ್ದ ನ ಉತ್ತಾನ್ ಎಂಬಲ್ಲಿ ೨೫,೦೦೦ ಚದರಡಿ ಜಾಗವನ್ನು ಖರೀದಿಸಿ, ಅದರಲ್ಲಿ ಕಟ್ಟಡ ರಚನೆಯನ್ನು ಪ್ರಾರಂಬಿಸಿದ್ದಾರೆ. ಅದಕ್ಕಾಗಿ ಅವರು ಹೆಚ್ಚಿನ ಹಣಕ್ಕಾಗಿ ಕ್ರೌಡ್ ಫಂಡಿಂಗ್ ಮೊರೆ ಹೋಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ