Mysore
20
overcast clouds

Social Media

ಭಾನುವಾರ, 19 ಜನವರಿ 2025
Light
Dark

ಐಡಿಯಲ್ ಜಾವಾ ರೋಟರಿ ಶಾಲೆ ಸ್ಥಾಪಿಸಿದ ಶೀಲಾ ಇರಾನಿ ಸ್ಮರಣೆ

ಪರೋಪಕಾರಿ ಮನಸ್ಸನ್ನು ಹೊಂದಿದ್ದ ಶೀಲಾ ಇರಾನಿ ತಮ್ಮ ಸಾಮಾಜಿಕ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿದು ಉಳಿದಿದ್ದಾರೆ. ಶಿಕ್ಷಣ ತಜ್ಞೆ, ಸಂಸದೀಯ ಪಟುವಾಗಿದ್ದ ಶೀಲಾ ಇರಾನಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ನಗರದ ಬೃಂದಾವನ ಬಡಾವಣೆಯಲ್ಲಿರುವ ಚಾಮುಂಡಿ ಮಕ್ಕಳ ಮನೆಯಲ್ಲಿ ಕಳೆದ ಭಾನುವಾರ ನಡೆಸಲಾಯಿತು.
ಹೊಸದಿಲ್ಲಿಯ ಶಿಕ್ಷಕಿ ವೃತ್ತಿಯ ಜತೆಗೆ ಜೀವನ ಪ್ರಾರಂಭಿಸಿದ ಅವರು, ಸೇಂಟ್ ಜಾನ್ಸ್ ಆಂಬುಲೆನ್ಸ್ ಕಾರ್ಪ್ಸ್‌ನಲ್ಲಿ ಸ್ವಯಂಸೇವಕರಾಗಿದ್ದರು. ಅವರ ಸೇವೆಗಾಗಿ ವೈಸ್‌ರಾಯ್ ಪ್ರಮಾಣಪತ್ರವನ್ನೂ ಪಡೆದಿದ್ದರು ಎಂಬುದು ಗಮನಾರ್ಹವಾದದ್ದಾಗಿದೆ.

ಮೈಸೂರು- ರೋಟರಿ ಶಾಲೆ ಆರಂಭ
೧೯೫೧ರಲ್ಲಿ ಮೈಸೂರಿಗೆ ಬಂದ ಅವರು ೧೯೬೮ರಲ್ಲಿ ಐಡಿಯಲ್ ಜಾವಾ ರೋಟರಿ ಶಾಲೆಯನ್ನು ಸ್ಥಾಪಿಸಿದ್ದರು. ಇದು ನಗರದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಬೆಳೆಯಿತು.

ಮೈಸೂರಿನಲ್ಲಿ ಚಾಮುಂಡಿ ಮಕ್ಕಳ ಮನೆಯನ್ನು ನಿರ್ಮಿಸಿದ್ದರು. ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಅವರು ೨೦೦೩ರ ಏಪ್ರಿಲ್ ೧೦ರಂದು ನಿಧನರಾದರು.

ರಾಜಕೀಯ
ಕರ್ನಾಟಕ ವಿಧಾನಸಭೆಗೆ ನಾಮನಿರ್ದೇಶನಗೊಳ್ಳುವ ಮೂಲಕ ೧೯೬೮ರಲ್ಲಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. ೧೯೯೩ ಮತ್ತು ೧೯೯೫ರ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು.

೧೯೯೫ರಲ್ಲಿ ಆಂಗ್ಲೋ?ಇಂಡಿಯನ್ ಕೋಟಾದಲ್ಲಿ ಲೋಕಸಭೆಗೆ ನಾಮನಿರ್ದೇಶನಗೊಂಡರು. ಆಂಗ್ಲೋ-ಇಂಡಿಯನ್ ಅಸೋಸಿೆುೀಂಶನ್‌ನ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.

ಸಾಮಾಜಿಕ ಸೇವೆ
ಶೀಲಾ ಅವರು ಮಾನವೀಯತೆಗೆ ಮಿಡಿಯುವಂತವರಾಗಿದ್ದು, ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುದ್ದರು. ಮೈಸೂರಿನಲ್ಲಿ ಕುಷ್ಠ ರೋಗಿಗಳಿಗೆ ಚಿಕಿತ್ಸೆ, ಅನಾಥಾಶ್ರಮದ ಉಪಾಧ್ಯಕ್ಷರಾಗಿ, ಹಲವಾರು ಆಸ್ಪತ್ರೆಗಳ ಟ್ರಸ್ಟಿಯಾಗಿ ಕೆಲಸ ಮಾಡಿದ್ದರು. ಪಿ.ಕೆ. ಸ್ಯಾನಿಟೋರಿಯಂನ ಮಂಡಳಿಯಲ್ಲಿದ್ದರು.

ಫರೋಖ್ ಜತೆ ವಿವಾಹ
ಉದ್ಯಮಿ ಫರೋಖ್ ಕೆ. ಇರಾನಿ (ಎಫ್.ಕೆ. ಇರಾನಿ) ಅವರನ್ನು ಶೀಲಾ ವಿವಾಹವಾದರು. ಫರೋಖ್ ಅವರು ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ ಸ್ಥಾಪಿಸಿದರು. ಇದು ಜಾವಾ ಮೋಟಾರ್ ಸೈಕಲ್‌ಗಳು ಮತ್ತು ಪ್ರಸಿದ್ಧ ಯಜ್ಡಿ ರೋಡ್ ಕಿಂಗ್ ಬೈಕ್‌ಗಳನ್ನು ಮಾರಾಟ ಮಾಡುವ ಕಂಪನಿಯಾಗಿತ್ತು. ಈ ದಂಪತಿಗೆ ಪುತ್ರರಾದ ರೈಯಾನ್ ಇರಾನಿ, ಕೈರಸ್ ಎಫ್.ಇರಾನಿ ಮತ್ತು ಪುತ್ರಿ ಮೊರ್ವಾರಿಡ್ ಫೆರ್ನಾಂಡಿಸ್ ಇದ್ದಾರೆ.

Tags: