Mysore
23
light rain

Social Media

ಸೋಮವಾರ, 12 ಜನವರಿ 2026
Light
Dark

ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆಯ ವಿವಾದ; ಮೇಲೆದ್ದ ೩ನೇ ಬಣ

ಬೆಂಗಳೂರು ಡೈರಿ 

ಆರ್.ಟಿ.ವಿಠ್ಠಲಮೂರ್ತಿ 

ಕಳೆದ ವಾರ ದಿಲ್ಲಿಯ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಸಂದೇಶ ರವಾನೆಯಾಗಿದೆ. ಈ ಸಂದೇಶವನ್ನು ರವಾನಿಸಿದವರು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಅಂದ ಹಾಗೆ ಇಂತಹದೊಂದು ಸಂದೇಶ ಕಾಂಗ್ರೆಸ್ ವರಿಷ್ಠರಿಗೆ ತಲುಪುವ ಮುನ್ನ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ದಿಲ್ಲಿಗೆ ಹೋಗಿದ್ದರಲ್ಲದೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಮನಸ್ಸಿನ ಮಾತುಗಳನ್ನು ಹೇಳಿ ಬಂದಿದ್ದರು. ಅದೆಂದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಯಾವ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬಾರದು. ಹಾಗೊಂದು ವೇಳೆ ಅಧಿಕಾರ ಹಂಚಿಕೆ ಒಪ್ಪಂದದ ಹೆಸರಿನಲ್ಲಿ ಅವರನ್ನು ಇಳಿಸುವುದೇ ಆದರೆ ಯಾವ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಯಾಗಬಾರದು ಎಂಬುದು. ಹಾಗೆಯೇ ಮುಂದುವರಿದ ಈ ನಾಯಕರು: ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಲು ವರಿಷ್ಠರು ನಿರ್ಧರಿಸಿದರೆ ನಾವು ಅರವತ್ತರಷ್ಟು ಮಂದಿ ಸಚಿವರು, ಶಾಸಕರು ಪಕ್ಷ ತೊರೆಯುತ್ತೇವೆ ಅಂತಲೂ ಹೇಳಿ ಬಂದರು.

ಯಾವಾಗ ಈ ಇಬ್ಬರು ನಾಯಕರು ವರಿಷ್ಠರಿಗೆ ಈ ಮೆಸೇಜು ತಲುಪಿಸಿ ಬಂದರೋ ಇದಾದ ಕೆಲವೇ ದಿನಗಳಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೂ ಒಂದು ಸಂದೇಶ ತಲುಪಿಸಿದ್ದಾರೆ. ಅದರ ಪ್ರಕಾರ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ವರಿಷ್ಠರು ನಿರ್ಧರಿಸಿದರೆ ಸಿದ್ದರಾಮಯ್ಯ ಬೆಂಬಲಿಗರ ಪಡೆ ಮಾತ್ರವಲ್ಲ, ಮೂಲ ಕಾಂಗ್ರೆಸ್ಸಿಗರ ಪಡೆಯೊಂದು ಪಕ್ಷ ತೊರೆಯಲು ಅಣಿಯಾಗಲಿದೆ. ಅರ್ಥಾತ್, ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ಹೊರಟರೆ ರಾಜ್ಯದಲ್ಲಿ ಪಕ್ಷ ಮೂರು ಹೋಳುಗಳಾಗಲಿದೆ.

ಈ ಪೈಕಿ ಸಿದ್ದರಾಮಯ್ಯ ಪಡೆ ಒಂದು ಹೋಳಾದರೆ, ಮೂಲ ಕಾಂಗ್ರೆಸ್ಸಿಗರ ಪಡೆ ಮತ್ತೊಂದು ಹೋಳು. ಉಳಿದಂತೆ ಡಿ.ಕೆ.ಶಿವಕುಮಾರ್ ನೇತೃತ್ವದ್ದು ಮೂರನೇ ಹೋಳು. ಈ ಪೈಕಿ ಸಿದ್ದರಾಮಯ್ಯ ಪಡೆಯಲ್ಲಿ ಅರವತ್ತರಷ್ಟು ಶಾಸಕರಿದ್ದರೆ, ಮೂಲ ಕಾಂಗ್ರೆಸ್ಸಿಗರ ಪಡೆಯಲ್ಲಿ ಅರವತ್ತೈದರಷ್ಟು ಶಾಸಕರಿದ್ದಾರೆ. ಉಳಿದಂತೆ ಡಿಕೆಶಿ ಬಣದಲ್ಲಿ ಹದಿನೈದರಷ್ಟು ಶಾಸಕರಿದ್ದಾರೆ ಎಂಬುದು ಪರಮೇಶ್ವರ್ ಅವರ ಸಂದೇಶದ ಕ್ಲೆ ಮ್ಯಾಕ್ಸ್. ಯಾವಾಗ ಡಾ.ಜಿ.ಪರಮೇಶ್ವರ್ ಅವರ ಈ ಸಂದೇಶ ತಲುಪಿತೋ ಇದಾದ ನಂತರ ದಿಲ್ಲಿಯ ಕಾಂಗ್ರೆಸ್ ನಾಯಕರಲ್ಲಿ ಒಂದು ತಳಮಳ ಶುರುವಾಗಿದೆ. ಕಾರಣ ಒಂದು ವೇಳೆ ಇಂತಹ ಎಚ್ಚರಿಕೆಯ ಸಂದೇಶ ನಿಜ ಆಗುವುದಾದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಉರುಳುವುದು ಸ್ಪಷ್ಟ.

ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಬಹುತೇಕ ರಾಜ್ಯಗಳನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಬಿಜೆಪಿ, ಸಹಜವಾಗಿಯೇ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ದುರ್ಬಲಗೊಳಿಸಲು ಬಯಸುತ್ತಿದೆ. ಅದರ ಈ ಬಯಕೆಗೆ ಸವಾಲಾಗಿರುವ ರಾಜ್ಯವೆಂದರೆ ಕರ್ನಾಟಕ ಮಾತ್ರ. ಉಳಿದಂತೆ ತೆಲಂಗಾಣ, ಹಿಮಾಚಲ ಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅವುಗಳ ಶಕ್ತಿ ಕಡಿಮೆ. ಅರ್ಥಾತ್, ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸೈನ್ಯವನ್ನು ಅಣಿಗೊಳಿಸಲು ಕರ್ನಾಟಕವೇ ಮೂಲ ನೆಲೆ. ಈ ನೆಲೆ ಇರುವ ಕಾರಣಕ್ಕಾಗಿಯೇ ತೆಲಂಗಾಣ ಸೇರಿದಂತೆ ಕೆಲವೆಡೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಯಿತು.

ಆದರೆ ಇನ್ನು ಮುಂದಿನ ದಿನಗಳು ಅಷ್ಟು ಸರಳವಾಗಿಲ್ಲ. ಹತ್ತಿರದಲ್ಲೇ ಇರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಸೈನ್ಯವನ್ನು ಮುನ್ನಡೆಸಲು ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವೇ ಶಕ್ತಿ ತುಂಬಬೇಕು. ಆದರೆ ದಿನ ಕಳೆದಂತೆ ಆಂತರಿಕ ಸಂಘರ್ಷದಲ್ಲಿ ಹೆಚ್ಚೆಚ್ಚು ಮುಳುಗುತ್ತಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಂಕಷ್ಟದಲ್ಲಿದೆ. ಸಂಖ್ಯಾಬಲದ ದೃಷ್ಟಿಯಿಂದ ಅದಕ್ಕೆ ತೊಂದರೆ ಕಾಣಿಸುತ್ತಿಲ್ಲವಾದರೂ ನಾಯಕತ್ವಕ್ಕೆ ಸಂಬಂಧಿಸಿದ ಗೊಂದಲ ಅದನ್ನು ಹೆಚ್ಚೆಚ್ಚು ತಲ್ಲಣ ಗೊಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅದು ಅಧಿಕಾರ ಹಂಚಿ ಕೆಯ ವಿಷಯದಲ್ಲಿ ಸ್ಪಷ್ಟವಾಗಿರಬೇಕು. ಅರ್ಥಾತ್, ನಾಯಕತ್ವದ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂದು ಅದು ಸ್ಪಷ್ಟವಾಗಿ ಹೇಳಿದರೆ ಸದ್ಯಕ್ಕೆ ಅದರ ಗೊಂದಲ ನಿವಾರಣೆಯಾಗುತ್ತದೆ.

ಆದರೆ ಈ ವಿಷಯದಲ್ಲಿ ಅದಕ್ಕೆ ಸ್ಪಷ್ಟತೆಯಿಲ್ಲ. ಹೀಗಾಗಿ ಮೊದಲರ್ಧ ಅವಧಿಗೆ ಸಿದ್ದರಾಮಯ್ಯ ಸಿಎಂ. ಎರಡನೇ ಅವಧಿಗೆ ಡಿಕೆಶಿ ಸಿಎಂ ಎಂಬ ಮಾತು ಈಗಲೂ ಚಾಲನೆಯಲ್ಲಿದೆ. ಪರಿಣಾಮವಾಗಿ ಈ ಗೊಂದಲಕ್ಕೆ ತೆರೆ ಬೀಳುವ ಲಕ್ಷಣ ಕಾಣುತ್ತಿಲ್ಲ. ಈಗಿನ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ನಾಯಕತ್ವ ಬದಲಿಸುವ ಇಚ್ಚೆ ರಾಹುಲ್ ಗಾಂಧಿ ಅವರಿಗಿಲ್ಲ. ಆದರೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ನಾಯಕತ್ವ ಬದಲಾವಣೆಯ ವಿಷಯದಲ್ಲಿ ಉತ್ಸುಕರಾಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಧಿಕಾರ ಹಂಚಿಕೆಯ ಮಾತು ಕಾಂಗ್ರೆಸ್ ಪಕ್ಷವನ್ನು ತಲ್ಲಣಗೊಳಿಸುವುದು ನಿಶ್ಚಿತ. ಹೀಗಾಗಿಯೇ ಪರಿಸ್ಥಿತಿಯನ್ನು ಊಹಿಸಿರುವ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಮತ್ತು ಡಾ.ಜಿ. ಪರಮೇಶ್ವರ್ ಅವರಂತಹ ನಾಯಕರು ಮುಂದಿನ ಸಂಘರ್ಷಕ್ಕೆ ಅಣಿಯಾಗುತ್ತಿದ್ದಾರೆ ಮತ್ತು ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಬಣವಲ್ಲ ಬದಲಿಗೆ ಮೂರು ಬಣಗಳಿವೆ ಅಂತ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇಂತಹ ಎಚ್ಚರಿಕೆಯನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದರೆ ಸರಿ. ಇಲ್ಲವೇ ಪರಿಸ್ಥಿತಿ ವಿಕೋಪಕ್ಕೆ ಹೋಗುವುದು ಗ್ಯಾರಂಟಿ. ವಸ್ತುಸ್ಥಿತಿ ಎಂದರೆ ಇಂತಹ ಸನ್ನಿವೇಶ ಎದುರಾಗಲಿದೆ ಎಂಬುದನ್ನು ಊಹಿಸಿರುವ ಬಿಜೆಪಿ ವರಿಷ್ಠರು ನೆಮ್ಮದಿಯಾಗಿದ್ದಾರೆ. ಅಷ್ಟೇ ಅಲ್ಲ, ರಾಜ್ಯ ಬಿಜೆಪಿಯ ಗೊಂದಲದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಾಂಗ್ರೆಸ್ ಮೇಲೆ ಗಮನ ನೆಟ್ಟಿದ್ದಾರೆ. ಅದರರ್ಥ ಅದು ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಪರ್ಯಾಯ ಸರ್ಕಾರ ರಚಿಸಲು ಉತ್ಸುಕವಾಗಿದೆ ಅಂತಲ್ಲ. ಬದಲಿಗೆ ಸರ್ಕಾರವನ್ನು ಉರುಳಿಸಿ ಮಧ್ಯಂತರ ವಿಧಾನಸಭಾ ಚುನಾವಣೆಗೆ ಹೋಗಲು ಅಣಿಯಾಗುತ್ತಿದೆ. ಇದು ದಿಲ್ಲಿಯ ಕಾಂಗ್ರೆಸ್ ನಾಯಕರಿಗೂ ಗೊತ್ತು. ಆದರೆ ಸೋನಿಯಾ ಗಾಂಽ, ಪ್ರಿಯಾಂಕ್ ಗಾಂಽ ಅವರಿಗೆ ಇದನ್ನು ವಿವರಿಸಿ ಹೇಳುವುದು ಅವರಿಗೆ ಕಷ್ಟವಾಗುತ್ತಿದೆ. ಪರಿಣಾಮ ಇದುವರೆಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿದ್ದ ವಾದರೆ, ಈಗ ಮೂರನೆಯ ಬಣ ಮೇಲೆದ್ದು ನಿಲ್ಲತೊಡಗಿದೆ. ಇದೇ ಸದ್ಯದ ವಿಶೇಷ ಬೆಳವಣಿಗೆ.

ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಬಹುತೇಕ ರಾಜ್ಯಗಳನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಬಿಜೆಪಿ, ಸಹಜವಾಗಿಯೇ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ದುರ್ಬಲಗೊಳಿಸಲು ಬಯಸುತ್ತಿದೆ. ಅದರ ಈ ಬಯಕೆಗೆ ಸವಾಲಾಗಿರುವ ರಾಜ್ಯವೆಂದರೆ ಕರ್ನಾಟಕ ಮಾತ್ರ. ಉಳಿದಂತೆ ತೆಲಂಗಾಣ, ಹಿಮಾಚಲ ಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅವುಗಳ ಶಕ್ತಿ ಕಡಿಮೆ. ಅರ್ಥಾತ್, ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸೈನ್ಯವನ್ನು ಅಣಿಗೊಳಿಸಲು ಕರ್ನಾಟಕವೇ ಮೂಲ ನೆಲೆ.

Tags:
error: Content is protected !!