ಪ್ರೊ.ಆರ್.ಎಂ.ಚಿಂತಾಮಣಿ
ಅಂಕಣ
ಮೂರು ತಿಂಗಳ ನಂತರ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಒಂಬತ್ತು ವರ್ಷಗಳು ತುಂಬುತ್ತವೆ. ಮುಂದಿನದು ಚುನಾವಣಾ ಹಂತದ ವರ್ಷ. ಯಾವುದೇ ಪೂರ್ವಗ್ರಹವಿಲ್ಲದೆ ವಸ್ತುನಿಷ್ಠವಾಗಿ ಮೋದಿ ಸರ್ಕಾರ ಸಾಧನೆ ಮತ್ತು ಸೋಲುಗಳನ್ನು ವಿಮರ್ಶೆ ಮಾಡಲು ಇದು ಸುಸಮಯ. ಈ ಎರಡು ಅವಧಿಯಲ್ಲಿ ಸರ್ಕಾರ ಹಲವಾರು ತಲಸ್ಪರ್ಶಿ ನಿರ್ಧಾರಗಳನ್ನು ಕೈಗೊಂಡಿದ್ದು, ಅವುಗಳಿಂದ ಸಾಮಾನ್ಯ ಜನರ ಜೀವನ ಉತ್ತಮಗೊಳ್ಳಲು ಸಹಾಯವಾಗಿರುವುದು ನಿಜ. ಕೆಲವು ತೀರ್ಮಾನಗಳು ನಿರೀಕ್ಷಿತ ಪರಿಣಾಮ ಬೀರದಿರುವುದು ಅಷ್ಟೇ ಸತ್ಯ.
ಪ್ರಧಾನಿ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ ಸಿಂಗ್ ೧೯೯೧ರಲ್ಲಿ ಆರ್ಥಿಕ ಸುಧಾರಣೆಗಳನ್ನು ಆರಂಭಿಸಿದ್ದು ಗೊತ್ತೇ ಇದೆ. ಆಗ ಮೂಲ ಸೌಲಭ್ಯಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಸರ್ಕಾರ ಮತ್ತು ಖಾಸಗಿಯವರ ಪಾಲುದಾರಿಕೆಯ ವ್ಯವಸ್ಥೆಯನ್ನು ಆರಂಭಿಸಲಾಯಿತು. ಮುಂದೆ ವಾಜಪೇಯಿ ಸರ್ಕಾರ ಮೂಲಸೌಲಭ್ಯಗಳಿಗೆ ಒತ್ತು ಕೊಟ್ಟು ನ್ಯಾಷನಲ್ ಕ್ವಾಡ್ರಿಲ್ಯಾಟರಲ್‌ನಂತಹ ಬೃಹತ್ ರಸ್ತೆ ನಿರ್ಮಾಣ ಯೋಜನೆ ಆರಂಭಿಸಿತು. ೨೦೦೪ರಲ್ಲಿ ಬಂದ ಮನಮೋಹನ್ ಸಿಂಗ್ ನಾಯಕತ್ವದ ಸರ್ಕಾರ ಅದನ್ನು ಮುಂದುವರಿಸಿತು. ಇಂದಿನ ಮೋದಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ರಸ್ತೆ, ರೈಲು, ಬಂದರು, ವಿಮಾನ ಸಾರಿಗೆ ಮುಂತಾದ ಭೌತಿಕ ಮೂಲ ಸೌಲಭ್ಯಗಳಲ್ಲದೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಲ್ಲೂ ಬೌದ್ಧಿಕ ಮೂಲ ಸೌಲಭ್ಯಗಳನ್ನು ನಿರ್ಮಾಣ ಮಾಡುತ್ತ ಹೆಚ್ಚು ಪ್ರಗತಿ ಸಾಽಸಿದೆ. ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವಕಾಶಗಳು ಸೃಷ್ಟಿಯಾಗಿವೆ ಎಂದೂ ಹೇಳಲಾಗಿದೆ.
‘ಆಧಾರ’ ಮೇಲೆ ‘ತಂತ್ರಜ್ಞಾನ ಸೌಧ’
ಇಂದು ಸಾಮಾನ್ಯ ಜನರ ಬದುಕು ಸುಧಾರಿಸುವಲ್ಲಿ ಮತ್ತು ಸರ್ಕಾರದ ಸೌಲಭ್ಯಗಳನ್ನು ಅರ್ಹ ಬಡವರಿಗೆ ತಲುಪಿಸುವಲ್ಲಿ ‘ಆಧಾರ್’ ಕಾರ್ಡ್ ಮಹತ್ವದ ಪಾತ್ರ ವಹಿಸುತ್ತಿದೆ. ತಂತ್ರಜ್ಞಾನ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗಲೇ ಆಧಾರ್ ಆರಂಭಿಸಿದ್ದು ಸಿಂಗ್ ನಾಯಕತ್ವದ ೨೦೦೯ರ ಯುಪಿಎ ಸರ್ಕಾರ. ನಂದನ್ ನಿಲೇಕಣಿ ಅಧ್ಯಕ್ಷತೆಯ ವಿಶಿಷ್ಟ ಗುರುತಿನ ಚೀಟಿ ಪ್ರಾಽಕಾರ ನಾಗರಿಕರ ವಿಶಿಷ್ಟ ದೈಹಿಕ (ಜೈವಿಕ-ಆಜಿಟಞಛಿಠ್ಟಿಜ್ಚಿo) ಒಳಗೊಂಡ ಆಧಾರ್ ಕಾರ್ಡನ್ನು ೨೦೧೦ರಲ್ಲಿ ಮೊದಲಿಗೆ ಕೊಡಲಾಯಿತು. ೨೦೧೪ರ ಹೊತ್ತಿಗೆ ೬೫.೫ ಕೋಟಿಗೂ ಹೆಚ್ಚು ನಾಗರಿಕರಿಗೆ ಆಧಾರ್ ಕಾರ್ಡ್‌ನ್ನು ಕೊಡಲಾಯಿತು. ಈಗ ೧೩೦ ಕೋಟಿ ಕಾರ್ಡುಗಳಿವೆ. ಮೋದಿ ಸರ್ಕಾರ ಇದಕ್ಕೆ ಕಾಯ್ದೆ ಬೆಂಬಲ ಒದಗಿಸಿ ಇನ್ನಷ್ಟು ಉಪಯುಕ್ತಗೊಳಿಸಿತು. ಇದನ್ನೇ ಮೂಲವಾಗಿಟ್ಟುಕೊಂಡು ಮೋದಿ ಸರ್ಕಾರ ಹಣಕಾಸು, ಕೃಷಿ ಮತ್ತು ಇತರೆ ತಂತ್ರಜ್ಞಾನಗಳ ವ್ಯಾಪಕ ಬಳಕೆಗೆ ಅನುವು ಮಾಡಿಕೊಟ್ಟಿದೆ. ಇಂದು ಕಾರ್ಡ್ ಮತ್ತು ಆಪ್ (ಅmm) ಮೂಲಕ ನಗದು ರಹಿತ ಪಾವತಿ ವೇಗವಾಗಿ ಬೆಳೆಯುತ್ತಿದೆ.
ಮೋದಿ ಸರ್ಕಾರ ೨೦೧೬ರ ಆಗಸ್ಟ್ ತಿಂಗಳಲ್ಲಿ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್(ಯು.ಪಿ.ಐ.) ‘ಆಪ್’ನ್ನು ಕಾರ್ಯರೂಪಕ್ಕೆ ತಂದಿತು. ಇಂದು ಅದಕ್ಕೆ ಪೂರಕವಾದ ಅನೇಕ ಸುರಕ್ಷಿತ ಆಪ್‌ಗಳು ಬಂದಿದೆ. ೨೦೨೧-೨೨ರಲ್ಲಿ ೭,೪೦೦ ಕೋಟಿ ರೂ. ವ್ಯವಹಾರಗಳಲ್ಲಿ ೧೨೬ ಲಕ್ಷ ಕೋಟಿ ರೂ.ಗಳ ಮೌಲ್ಯದ ನಗದು ರಹಿತ ಹಣ ಪಾವತಿಯಾಗಿದ್ದು ವರದಿಯಾಗಿದೆ. ಈ ಹಣಕಾಸು ವರ್ಷದಲ್ಲಿ ಫೆಬ್ರವರಿ ಆರಂಭದವರೆಗೆ ಈ ಮಾರ್ಗದಿಂದ ೧೧೩ ಲಕ್ಷ ಕೋಟಿ ರೂ. ಮೌಲ್ಯದ ೬,೮೦೦ ಕೋಟಿ ರೂ. ವ್ಯವಹಾರಗಳು ವರದಿಯಾಗಿವೆ.
ಹಣಕಾಸು ಒಳಗೊಳ್ಳುವಿಕೆಯ (ಊಜ್ಞಿZಜಿZ ಐoಜಿಟ್ಞ) ಭಾಗವಾಗಿ ಯುಪಿಎ ಸರ್ಕಾರ ೨೦೦೬-೦೭ರಲ್ಲಿಯೇ ಎಲ್ಲರೂ ಬ್ಯಾಂಕ್ ಖಾತೆಗಳ ಮೂಲಕ ವ್ಯವಹರಿಸಬೇಕೆಂಬ ಉದ್ದೇಶದಿಂದ ಬಡವರು ‘ಝೀರೋ ಬ್ಯಾಲೆನ್ಸ್’ ಬ್ಯಾಂಕ್ ಉಳಿತಾಯ ಖಾತೆ ತೆರೆಯಬೇಕೆಂಬ ಯೋಜನೆ ಆರಂಭಿಸಿತು. ಇದು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ (ಮಧ್ಯವರ್ತಿಗಳಿಲ್ಲದೆ) ತಲುಪಿಸಬಹುದೆಂಬುದಲ್ಲದೆ ಜನರಲ್ಲಿ ಬ್ಯಾಂಕಿಂಗ್ ಸೌಲಭ್ಯ ಬಳಸಿಕೊಂಡು ಉಳಿತಾಯ ಮನೋಭಾವ ಹೆಚ್ಚಿಸಲು ಉಪಯುಕ್ತವೆಂದು ಹೇಳಲಾಗಿತ್ತು. ಮೋದಿ ಸರ್ಕಾರ ಇದಕ್ಕೆ ಇನ್ನಷ್ಟು ಶಕ್ತಿ ತುಂಬಿ ‘ಪಿಎಂ ಜನ್-ಧನ್’ ಎಂಬ ಹೊಸ ಹೆಸರಿನಲ್ಲಿ ಹೆಚ್ಚು ಪ್ರಚಾರದೊಂದಿಗೆ ಜಾರಿಗೊಳಿಸಿತು. ಇದು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಖಾತೆಗಳು ಹೆಚ್ಚಾಗಿ ಬ್ಯಾಂಕ್ ಮೂಲಕ ವ್ಯವಹಾರಗಳು ಹೆಚ್ಚಾಗಿವೆ. ಮೋದಿಯವರೇ ಹೇಳಿರುವಂತೆ ‘ಜನ್-ಧನ್ ಆಧಾರ್ ಮತ್ತು ಮೊಬೈಲ್’ (ಜಾಮ್) ಹಳ್ಳಿಗರಿಗೆ ಒಂದು ವರವಾಗಿದೆ.
ಆಹಾರ ಭದ್ರತೆ ಕಾಯ್ದೆ, ಗರೀಬ ಕಲ್ಯಾಣ ಅನ್ನ
ಹಳ್ಳಿ ಮತ್ತು ಪಟ್ಟಣಗಳಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಆಹಾರ ಪದಾರ್ಥಗಳನ್ನು ಕೊಳ್ಳುವ ಶಕ್ತಿ ಕಡಿಮೆ ಇದ್ದು ಅವರಲ್ಲಿ ಅಪೌಷ್ಟಿಕತೆಯನ್ನು ತೊಲಗಿಸಲು ಮನಮೋಹನ್ ಸಿಂಗ್ ಸರ್ಕಾರ ತಜ್ಞರ ಸಲಹೆ ಮೇರೆಗೆ ೨೦೧೩ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿತು. ಇದರಂತೆ ಹಳ್ಳಿಗಳಲ್ಲಿ ಶೇ.೫೦ ಮತ್ತು ನಗರಗಳಲ್ಲಿ ಶೇ.೨೫ರಷ್ಟು ಅರ್ಹ ಕುಟುಂಬಗಳಿಗೆ ಸಾರ್ವಜನಿಕ ವಿತರಣಾ ಪ್ರಣಾಳಿಕೆಯ ಮೂಲಕ ತೀರಾ ಕಡಿಮೆ ಬೆಲೆಗಳಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವ ಕಾರ್ಯವನ್ನು ಆರಂಭಿಸಲಾಯಿತು. ಇದು ಉಪಯುಕ್ತವಾಗಿ ಪರಿಣಮಿಸಿತು. ಇದರ ಲಾಭ ಸುಮಾರು ೮೦ ಕೋಟಿ ಜನರಿಗೆ ತಲುಪುತ್ತಿತ್ತು.
ಮೋದಿ ಸರ್ಕಾರ ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿತು. ಅಲ್ಲದೆ ಕೋವಿಡ್ ಸಮಯದಲ್ಲಿ ಇದರ ಆಧಾರದಲ್ಲಿಯೇ ಹೊಸ ಕಲ್ಯಾಣ ಯೋಜನೆಗೆ ದಾರಿಯಾಯಿತು. ಅಂದಿನ ಲಾಕ್‌ಡೌನ್ ಮತ್ತು ಇತರೆ ನಿರ್ಬಂಧಗಳಿಂದಾಗಿ ಉದ್ಯೋಗ ಕಳೆದುಕೊಂಡು ಕಷ್ಟದಲ್ಲಿರುವವರಿಗೆ ಮತ್ತು ನಿರಾಶ್ರಿತರಾದ ವಲಸೆ ಕಾರ್ಮಿಕರಿಗೆ ಆಹಾರ ಭದ್ರತೆ ಒದಗಿಸಲು ಮೋದಿಯವರು ‘ಪ್ರಧಾನಮಂತ್ರಿ ಗರೀಬ ಕಲ್ಯಾಣ ಅನ್ನ’ ಯೋಜನೆ ಆರಂಭಿಸಿ ಏಪ್ರಿಲ್ ೨೦೨೦ ರಿಂದ ಡಿಸೆಂಬರ್ ೩೧, ೨೦೨೨ರವರೆಗೆ ೮೦ ಕೋಟಿ ಸದಸ್ಯರಿರುವ ಕುಟುಂಬಗಳಿಗೆ ಪುಕ್ಕಟೆ ಆಹಾರಧಾನ್ಯಗಳು ಮತ್ತು ಇತರೆ ಅವಶ್ಯಕತೆಗಳನ್ನು ವಿತರಿಸಿರುವುದು ಪ್ರಶಂಸನಾರ್ಹ. ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಭರವಸೆ ಸಿಕ್ಕಿತು.
ಇದೇ ರೀತಿ ಗ್ರಾಮೀಣ ನಿರುದ್ಯೋಗ ಮತ್ತು ಅರೆ ಉದ್ಯೋಗ ನಿವಾರಿಸಲು ಸಿಂಗ್ ಕಾಲದಲ್ಲಿ ೨೦೦೫ರಲ್ಲಿ ಜಾರಿಯಾಗಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭದ್ರತಾ ಕಾಯ್ದೆಯು ಕೋವಿಡ್ ಅವಽಯಲ್ಲಿ ಗ್ರಾಮೀಣರನ್ನು ನಿರುದ್ಯೋಗದಿಂದ ರಕ್ಷಿಸಲು ಈ ಸರ್ಕಾರಕ್ಕೆ ಉತ್ತಮ ಸಾಧನವಾಯಿತು. ಈ ನರೇಗಾ ಯೋಜನೆಗಾಗಿ ಕೇಂದ್ರ ಸರ್ಕಾರ ೨೦೨೦-೨೧ ಮತ್ತು ೨೦೨೧-೨೨ ರಲ್ಲಿ ಗರಿಷ್ಟ ಒಂದು ಲಕ್ಷ ಕೋಟಿ ರೂ.ಗಳಷ್ಟು ಖರ್ಚು ಮಾಡಿ ಜನರನ್ನು ರಕ್ಷಿಸಿದ್ದಲ್ಲದೆ ಹಳ್ಳಿಗಳಲ್ಲಿ ಸಾರ್ವಜನಿಕ ಆಸ್ತಿಗಳೂ ನಿರ್ಮಾಣವಾಗಿವೆ.
ಹಳ್ಳಿ ಮತ್ತು ಪಟ್ಟಣಗಳಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಆಹಾರ ಪದಾರ್ಥಗಳನ್ನು ಕೊಳ್ಳುವ ಶಕ್ತಿ ಕಡಿಮೆ ಇದ್ದು ಅವರಲ್ಲಿ ಅಪೌಷ್ಟಿಕತೆಯನ್ನು ತೊಲಗಿಸಲು ಮನಮೋಹನ್ ಸಿಂಗ್ ಸರ್ಕಾರ ತಜ್ಞರ ಸಲಹೆ ಮೇರೆಗೆ ೨೦೧೩ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿತು. ಇದರಂತೆ ಹಳ್ಳಿಗಳಲ್ಲಿ ಶೇ.೫೦ ಮತ್ತು ನಗರಗಳಲ್ಲಿ ಶೇ.೨೫ರಷ್ಟು ಅರ್ಹ ಕುಟುಂಬಗಳಿಗೆ ಸಾರ್ವಜನಿಕ ವಿತರಣಾ ಪ್ರಣಾಳಿಕೆಯ ಮೂಲಕ ತೀರಾ ಕಡಿಮೆ ಬೆಲೆಗಳಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಪ್ರಮಾಣದಲ್ಲಿ ಆಹಾರಧಾನ್ಯಗಳನ್ನು ವಿತರಿಸುವ ಕಾರ್ಯವನ್ನು ಆರಂಭಿಸಲಾಯಿತು.
ಒಂದು ಮಾತು: ಆರ್ಥಿಕ ನೀತಿ ಅರ್ಥ ವ್ಯವಸ್ಥೆಯ ಉನ್ನತೀಕರಣಕ್ಕಾಗಿ ನಿರಂತರವಾಗಿ ಮುಂದುವರಿಯುತ್ತಿರುತ್ತದೆ.