ದೇಶಗಳ ಸಂಪತ್ತು (Wealth Of Nations) ಎಂದೇ ಪ್ರಸಿದ್ಧವಾಗಿರುವ ಸ್ಮಿತ್‌ರ ಪುಸ್ತಕ ‘An Enquiry into Wealth of Nations’’ (ದೇಶಗಳ ಸಂಪತ್ತಿನ ಬಗ್ಗೆ ಒಂದು ಅಧ್ಯಯನ)೧೭೭೬ರಲ್ಲಿ ಪ್ರಕಟವಾಯಿತು. ಇದು ಆಧುನಿಕ ಅರ್ಥಶಾಸ ಅಧ್ಯಯನದಲ್ಲಿ ಮೊದಲ ಶಾಸ್ತ್ರೀಯ ಗ್ರಂಥವಾಗಿತ್ತು. ಇದೇ ಕಾರಣದಿಂದ ಆಡಮ್ ಸ್ಮಿತ್‌ರವರನ್ನು ಆಧುನಿಕ ಅರ್ಥಶಾಸದ ಪಿತಾಮಹ (Father of Modern Economics )ಎಂದು ಕರೆಯಲಾಯಿತು. ಹೀಗಾಗಿ ಅರ್ಥಶಾಸ್ತ್ರ ದೃಷ್ಟಿಕೋನದಲ್ಲಿಯೇ ಚರ್ಚೆಗಳು ಮತ್ತು ವಿಮರ್ಶೆಗಳು ಮುಂದುವರಿದವು.
‘ವೆಲ್ತ್ ಆ- ನೇಷನ್ಸ್ ’ ಆಧಾರ ಗ್ರಂಥವಾಯಿತು. ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ (Market Economy)‘ಕಾಣದ ಕೈ’ (Invisible Hand) ಅರ್ಥಾತ್ ಲಾಭದ ಪಾತ್ರದ ಬಗ್ಗೆ ಸ್ಮಿತ್‌ರವರು ವಿವರಿಸಿದ್ದಾರೆ. ದೇಶಗಳ ಸಂಪತ್ತಿನ ವೃದ್ಧಿಯಲ್ಲಿ ಮಾರುಕಟ್ಟೆ ವ್ಯವಸ್ಥೆಯ ಮಹತ್ವವನ್ನು ಪುಸ್ತಕದಲ್ಲಿ ತಿಳಿಸಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ಕೆಲವು ವಿಮರ್ಶಕರು ಇದೊಂದು ಕೆಟ್ಟ ವಿಜ್ಞಾನವೆಂದು (Dismal Science) ಎಂದು ಜರಿದಿದ್ದೂ ಉಂಟು. ಹಾಗೆಂದ ಮಾತ್ರಕ್ಕೆ ಸ್ಮಿತ್‌ರವರ ಅಭಿಪ್ರಾಯ ಗಳಿಗೆ ಮತ್ತು ಪುಸ್ತಕಕ್ಕೆ ಮನ್ನಣೆ ಇರಲಿಲ್ಲವೆಂದಲ್ಲ. ಪುಸ್ತಕವು ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಆಯಾಮಗಳಲ್ಲಿ ಹೊಸ ಚಿಂತನೆಗಳಿಗೆ ಮೂಲ ವಸ್ತುಗಳನ್ನು ಒದಗಿಸುತ್ತದೆ ಎಂದು ಅನೇಕ ತಜ್ಞರು (ತತ್ವ ಶಾಸಜ್ಞರೂ ಸೇರಿದಂತೆ) ಅಭಿಪ್ರಾಯ ಪಟ್ಟಿದ್ದಾರೆ. ಇಂದಿಗೂ ನಾಳೆಯೂ ಅರ್ಥ ಶಾಸದ ಪ್ರಾಮುಖ್ಯತೆ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ .
ಥಿಯರಿ ಆಫ್ ಮಾರಲ್ ಸೆಂಟಿಮೆಂಟ್ಸ್:
ಆಡಮ್ ಸ್ಮಿತ್ ರವರ ಇನ್ನೊಂದು ಪುಸ್ತಕ ‘Theory Of Moral Sentiments’ (ನೈತಿಕ ಭಾವನೆಗಳ ಸಿದ್ಧಾಂತ) ೧೭೫೯ ರಲ್ಲಿಯೇ ಪ್ರಕಟವಾಗಿತ್ತು. ಇದು ನೀತಿ ಶಾಸ್ತ್ರಕ್ಕೆ ಸಂಬಂಧಪಟ್ಟದ್ದೆಂದು ಮೇಲ್ನೋಟಕ್ಕೇ ತಿಳಿಯುತ್ತದೆ. ಇದರ ಬಗ್ಗೆ ಚರ್ಚೆ ತತ್ವ ಶಾಸ್ತ್ರಜ್ಞರಲ್ಲಿಯೇ ನಡೆಯುತ್ತಿರ ಬಹುದು. ಮುಂದಿನ ದಿನಗಳಲ್ಲಿ ಹೊರ ಬಂದ ‘ವೆಲ್ತ್ ಆಫ್ ನೇಷನ್ಸ್’ ಪುಸ್ತಕದ ಬಗ್ಗೆ ಪರ ಮತ್ತು ವಿರೋಧಗಳು ಹೆಚ್ಚಾಗಿದ್ದರಿಂದ ವ್ಯಾಪಕ ಪ್ರಚಾರ ಸಿಕ್ಕಿತ್ತು. ಇದರಿಂದಾಗಿ ಆಡಮ್ ಸ್ಮಿತ್ ರವರು ಅರ್ಥಶಾಸಜ್ಞರೆಂದೇ ಗುರುತಿಸಲ್ಪಟ್ಟರು. ಮುಂದಿನ ತಲೆ ಮಾರುಗಳಲ್ಲಿಯೂ ಇದೇ ಅಭಿಪ್ರಾಯ ಬೇರೂರಿತು. ಅವರಲ್ಲಿರುವ ನೈತಿಕ ತತ್ವ ಶಾಸಜ್ಞ ಬೆಳಕಿಗೆ ಬರಲೇ ಇಲ್ಲ. ಹತ್ತೊಂಬತ್ತನೇ ಶತಮಾನದ ಕೊನೆಯವರೆಗೆ ಸ್ಮಿತ್‌ರವರ ಮೊದಲನೇ ಪುಸ್ತಕ ಮತ್ತು ಎರಡನೆಯ ಪುಸ್ತಕಗಳಲ್ಲಿಯ ಸಾಮ್ಯತೆಗಳ ಎಳೆಗಳನ್ನು ಚಿಂತಕರು ಮತ್ತು ಸಂಶೋಧಕರು ಗುರುತಿಸದೇ ಹೋದರು. ಅವರೆಲ್ಲ ಮೊದಲ ಪುಸ್ತಕದಲ್ಲಿ ಭಾವನಾತ್ಮಕವೆನ್ನಬಹುದಾದ ನೈತಿಕತೆಯ ಬಗ್ಗೆ ಪ್ರತಿಪಾದನೆ ಇದೆ ಮತ್ತು ಇದಕ್ಕೆ ವಿರುದ್ಧವಾಗಿ ಅಥವಾ ಹೊಂದಿಕೊಳ್ಳಲಾರದಂತಹ ವ್ಯಕ್ತಿ ಕೇಂದ್ರಿತ ಲಾಭ ಅಥವಾ ಬಂಡವಾಳ ಶಾಹಿ ವ್ಯವಸ್ಥಯ ಬಗ್ಗೆ ಎರಡನೆಯದರಲ್ಲಿ ವಿವರಿಸಲಾಗಿದೆ ಎಂದು ಭಾವಿಸಿದ್ದರು. ಎರಡೂ ಪುಸ್ತಕಗಳು ಒಂದಕ್ಕೊಂದು ವಿರುದ್ಧ ಚಿಂತನೆಗಳನ್ನು ಹೊಂದಿದ್ದವು ಎಂಬುದೇ ಅಂದಿನ ಪ್ರಬಲ ಕಲ್ಪನೆಯಾಗಿತ್ತು. ಇದರಿಂದಾಗಿ ಜಗತ್ತಿನ ಶ್ರೇಷ್ಠ ದಾರ್ಶನಿಕರಾದ ಸಾಕ್ರೆಟಿಸ್, ಅರಿಸ್ಟಾಟಲ್, ಮುಂತಾದವರ ಸಾಲಿನಲ್ಲಿಯೇ ನಿಲ್ಲಬಹುದಾಗಿದ್ದ ಆಡಮ್ ಸ್ಮಿತ್‌ರವರು ಅಲ್ಲಿಯವರೆಗೆ ವಂಚಿತರಾದರು.
ಇದನ್ನು ಓದಿ: ಶೀಘ್ರದಲ್ಲೇ ದೊರೆಯಲಿದೆ ಶುದ್ಧ ಕುಡಿಯುವ ನೀರು
ಹೊಸ ಸಂಶೋಧನೆಗೆ ದಾರಿ:
೧೯೨೦ರ ದಶಕದಲ್ಲಿ ಪ್ರಸಿದ್ಧ ಅರ್ಥಶಾಸಜ್ಞ ಜೇಕಬ್ ವೈನರ್( JacobVine) ಅಮೆರಿಕದ ಸುಪ್ರಸಿದ್ಧ ಚಿಕಾಗೋ ಸ್ಕೂಲ್ ಆ- ಇಕನಾಮಿಕ್ಸ್ ಸ್ಥಾಪನೆ ಮಾಡುವವರೆಗೆ ಈ ತಪ್ಪು ಕಲ್ಪನೆಗಳು ಅಥವಾ ಅಪೂರ್ಣತೆ ಅಥವಾ ಅಪರಿಪಕ್ವತೆ ಮುಂದುವರಿದವು. ವೈನರ್‌ರವರ ನಾಯಕತ್ವದಲ್ಲಿ ಹೊಸ ಸಂಶೋಧನೆಗಳು ಬರಲಿಕ್ಕೆ ಆರಂಭವಾದ ಮೇಲೆ ಸ್ಮಿತ್‌ರಲ್ಲಿದ್ದ ತತ್ವ ಶಾಸ್ತ್ರಜ್ಞ ಹೊರಬರಲಾರಂಭಿಸಿದ. ಮತ್ತು ಅದರ ಸಮಾಜ ಮುಖಿ ಚಿಂತನೆಗಳಿಗೆ ಮಾನ್ಯತೆ ದೊರೆಯಲಾರಂಭಿಸಿತು. ಈ ಪ್ರಕ್ರಿಯೆ ಚುರುಕುಗೊಳ್ಳುತ್ತಾ ಮುಂದುವರಿದು ಸ್ಮಿತ್‌ರವರ ಎರಡೂ ಪುಸ್ತಕಗಳಲ್ಲಿಯೂ ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸಾಮ್ಯತೆಗಳು ವ್ಯಾಪಕವಾಗಿ ಪ್ರಕಾಶಗೊಂಡವು.
೧೯೭೦ರಲ್ಲಿ ಇಂಗ್ಲೆಂಡಿನ ಗ್ಲಾಸ್ಗೊ ನಗರದಲ್ಲಿ (ಸ್ಮಿತ್‌ರವರು ಅಧ್ಯಯನ ಮಾಡಿದ ಸ್ಥಳ ಮತ್ತು ವಿಶ್ವವಿದ್ಯಾನಿಲಯ )ಆಡಮ್ ಸ್ಮಿತ್‌ರವರ ಸಮಗ್ರ ಕೃತಿಗಳ ಸಂಪುಟ ಪ್ರಕಟಣೆಯ ನಂತರ ದೊಡ್ಡ ಬಲ ಬಂದಿತು. ಜರ್ಮನಿಯ ವಿಶ್ವವಿದ್ಯಾನಿಲಯಗಳು ಮೊದಲಿದ್ದ ತಮ್ಮ ತಪ್ಪು ಕಲ್ಪನೆಗಳನ್ನು ತಿದ್ದಿಕೊಂಡವು. ಆಡಮ್ ಸ್ಮಿತ್‌ರವರನ್ನು ಇಂದು ನೀತಿ ಶಾಸಜ್ಞ ಅಥವಾ ತತ್ವ ಶಾಸಜ್ಞ ಎಂದೂ ಜಗತ್ತು ಒಪ್ಪಿಕೊಳ್ಳುವಂತಾಗಿದೆ. ಇದು ವಾಸ್ತವವೂ ಹೌದು. ಸ್ಮಿತ್‌ರವರ ಸಮಕಾಲೀನ ಮತ್ತು ಮಿತ್ರ ಡೇವಿಡ್ ಹ್ಯೂಮ್ ಹೇಳುವ ಒಂದು ಮಾತು ಅರ್ಥಪೂರ್ಣವಾಗಿದೆ. ಅವರ ಪ್ರಕಾರ ಸುಸ್ಥಿರ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಾದರೆ ವ್ಯಕ್ತಿಯ ಸ್ವಂತದ ಮೇಲಿನ ಪ್ರೀತಿ ಮತ್ತು ಸಾಮಾಜಿಕ ಜವಾಬ್ದಾರಿ ಅಥವಾ ಇತರರನ್ನು ಅರಿತು ಜತೆಯಲ್ಲಿ ನಡೆಯುವ ಹೊಣೆಗಾರಿಕೆ ಇವೆರಡರ ಸಮರ್ಪಕ ಮಿಶ್ರಣವಾಗಿರಬೇಕು. ಇದನ್ನೇ ಸ್ಮಿತ್‌ರವರ ‘ಕಾಣದ ಕೈ’ ಗೂ ಅನ್ವಯಿಸಬಹುದು. ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲ ಭಾಗೀದಾರರಿಗೆ (ಲ್ಯಾಂಡ್, ಲೇಬರ್, ಕ್ಯಾಪಿಟಲ್ ಮತ್ತು ಆರ್ಗನೈಜೇಶನ್) ಸಲ್ಲುವ ಪ್ರತಿ-ಲವೇ ‘ಕಾಣದ ಕೈ’ ಅಥವಾ ಲಾಭ, ಬಾಡಿಗೆ, ಕೂಲಿ ಮತ್ತು ಬಡ್ಡಿ ಎಂದೂ ಅರ್ಥೈಸಬಹುದು. ಎಲ್ಲರೂ ತಮಗೆ ಹೆಚ್ಚು ಸಿಗಬೇಕೆಂದು ಕೇಳುವುದರಲ್ಲಿ ತಪ್ಪೇನಿಲ್ಲ. ಸರ್ಕಾರ, ಸರ್ಕಾರಿ ಸಂಸ್ಥೆಗಳು, ಮತ್ತು ಸಾಮಾಜಿಕ ಸಂಸ್ಥೆಗಳು ಸೂಕ್ತ ಪ್ರಮಾಣವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಪ್ರಮಾಣಗಳು ನ್ಯಾಯಸಮ್ಮತವಾಗಿರಬೇಕು.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಸಾಂಖ್ಯಿಕ ಅಧ್ಯಯನ ಮತ್ತು ಕಾಯ್ದೆ ಸಹ ಪ್ರಾಧ್ಯಾಪಕರಾಗಿರುವ ಅಂತಾರಾ ಹಲದರವರ ಪ್ರಕಾರ ನಾವು ಇಂದು ಆಡಮ್ ಸ್ಮಿತ್‌ರನ್ನೂ ಮತ್ತು ನೈತಿಕ ಅರ್ಥ ವ್ಯವಸ್ಥೆಯನ್ನೂ ಕಳೆದುಕೊಂಡು ಹುಡುಕುತ್ತಿದ್ದೇವೆ. ನೈತಿಕತೆ ಮತ್ತು ಮಾರುಕಟ್ಟೆ ಅರ್ಥ ವ್ಯವಸ್ಥೆ (Market Economy) ನಡುವೆ ವಾಸ್ತವವಾಗಿ ವಿರೋಧಾಭಾಸಗಳಿಲ್ಲ. ಎಲ್ಲೋ ಮಾಹಿತಿ ಅಥವಾ ಅರ್ಥ ಮಾಡಿಕೊಳ್ಳುವಲ್ಲಿ ಕೊರತೆಯಿಂದ ಕಂದಕ ನಿರ್ಮಾಣವಾಗಿದ್ದರೆ ಅದನ್ನು ಸರಿಪಡಿಸಬೇಕು. ಮಾನವಾಭಿವೃದ್ಧಿಯಲ್ಲಿ ಎರಡೂ ಅವಿಭಾಜ್ಯ ಅಂಗಗಳು.
” ‘ವೆಲ್ತ್ ಆ- ನೇಷನ್ಸ್’ ಪುಸ್ತಕದ ಬಗ್ಗೆ ಪರ ಮತ್ತು ವಿರೋಧಗಳು ಹೆಚ್ಚಾಗಿದ್ದರಿಂದ ವ್ಯಾಪಕ ಪ್ರಚಾರ ಸಿಕ್ಕಿತ್ತು. ಇದರಿಂದಾಗಿ ಆಡಮ್ ಸ್ಮಿತ್‌ರವರು ಅರ್ಥಶಾಸ್ತ್ರಜ್ಞರೆಂದೇ ಗುರುತಿಸಲ್ಪಟ್ಟರು. ಮುಂದಿನ ತಲೆ ಮಾರುಗಳಲ್ಲಿಯೂ ಇದೇ ಅಭಿಪ್ರಾಯ ಬೇರೂರಿತು. ಅವರಲ್ಲಿರುವ ನೈತಿಕ ತತ್ವ ಶಾಸ್ತ್ರಜ್ಞ ಬೆಳಕಿಗೆ ಬರಲೇ ಇಲ್ಲ.”
-ಪ್ರೊ.ಆರ್.ಎಂ.ಚಿಂತಾಮಣಿ





