Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಹಾಡು ಪಾಡು

Homeಹಾಡು ಪಾಡು

ಅಜಯ್ ಕುಮಾರ್ ಎಂ ಗುಂಬಳ್ಳಿ ಸಣ್ಣತನದಲ್ಲಿ ನಮಗೆ ಎಲ್ಲವೂ ಹುಡುಗಾಟ. ಉದ್ದಿ ಬಯಲು, ಮಾರಿಗುಡಿ ಮೈದಾನ, ಸಮಾಧಿ ಮಾಳ, ಬೇಸಿಗೆಗೆ ನೀರು ಹರಿಯುತ್ತಿದ್ದ ಚಾನಲ್(ಕಾಲುವೆ) ಇತ್ಯಾದಿ. ಅಲ್ಲೆಲ್ಲ ನಾವು ಆಟ ಆಡುತ್ತ ತುಂಟಾಟ ಮಾಡಿ ಬೆಳೆದವರು. ಹಿರಿದಾದ ಬುಡದ ಮಾವಿನ ಮರಕ್ಕೆ …

ಚಿತ್ರಾ ವೆಂಕಟರಾಜು ನಾನು ಧಾರವಾಡದಿಂದ ಚಾಮರಾಜನಗರಕ್ಕೆ ಬಂದಾಗಲೆಲ್ಲಾ ಮರಳಿ ಹೋಗುವಾಗ ಮೈಸೂರಿನ ತಾರಾನಾಥರ ಮನೆಗೆ ಹೋಗಿಯೇ ನಂತರ ರೈಲು ಹತ್ತುತ್ತಿದ್ದೆ. ಹೀಗೆ ಒಮ್ಮೆ ಹೋದಾಗ ಅಲ್ಲಿ ನಾಲ್ಕೈದು ಮಕ್ಕಳು ಕೂತಿದ್ದರು. ಅವರ ಮನೆಯ ಮುಂದೆ ಒಂದು ಕಟ್ಟಡದ ಕಾಮಗಾರಿ ನಡೀತಿತ್ತು. ಅಲ್ಲಿದ್ದ …

ಭಾರತಿ ಬಿ.ವಿ. ನಾನು ಆಗ ನಾಕನೆಯ ಕ್ಲಾಸು. ಸರಕಾರಿ ಶಾಲೆಯ ವಿದ್ಯಾರ್ಥಿನಿ. ನಮ್ಮ ಕಬಿನಿ ಕಾಲೋನಿಯಲ್ಲಿ ಇದ್ದಿದ್ದೇ ಅದೊಂದು ಶಾಲೆ. ನಮ್ಮೂರಿನ ಸಕಲ ಮಕ್ಕಳೂ ಅಲ್ಲೇ ಓದುತ್ತಿದ್ದುದು. ಕಾಲೋನಿಯ ಮಕ್ಕಳನ್ನು ಕಂಡರೆ ಉಳಿದ ಮಕ್ಕಳಿಗೆ ಒಂಥರಾ ಅಂತರ. ಅಪ್ಪ ಒಂದು ಸಲ …

ತಿರುಗುತ್ತಲೇ ಇರುವ ಬುಗುರಿ ಬೆರಗು ಮೂಡಿಸಿ ಬಣ್ಣದ ಬುಗುರಿ ಬಚ್ಚಿಡಲಾಗದ ಸೂರ್ಯನ ಹಾಗೆ ಗಿರಗಿರನೆ ತಿರುಗುತ್ತ ಗೆರೆಯದಾಟಿ ಮರೆತು ಕಕ್ಕುಲಾತಿ ಆಗಾಗ ಹೊಡೆದು ಗುನ್ನ ಮಾಡಿತ್ತು ಘಾಸಿ ವ್ಯಂಗ್ಯ ಕೀಟಲೆಗಳಲಿ ನಗಿಸಿತ್ತು ಸುತ್ತ ನೆರೆದವರ ಆಕಾಶಕ್ಕೆ ನೆಗೆದು ಪಾತಾಳಕ್ಕೂ ಜಿಗಿದು ಬಿಡಿಸಿ …

ಭಾಗ್ಯಜ್ಯೋತಿ ಹಿರೇಮಠ್ ಕನ್ನಡದ ಅನನ್ಯ ಕಥೆಗಾರ ಮೊಗಳ್ಳಿ ಸರ್ ಇಲ್ಲದ ಈ ಸಂದರ್ಭದಲ್ಲಿ ಅನೇಕರು ಮೌನ ಮುರಿದಿದ್ದಾರೆ. ಕೆಲವರು ವ್ರತನಿಷ್ಠರಿದ್ದಾರೆ, ಮತ್ತೂ ಕೆಲವರು ಅಸಹಾಯಕರಾಗಿದ್ದಾರೆ. ಮೇಷ್ಟ್ರನ್ನು ಹತ್ತಿರದಿಂದ ಬಲ್ಲ ನನಗೆ ಅವರೊಳಗಿನ ಸಂಕಟ, ನೋವು, ವಿಷಾದ, ತಾಳ್ಮೆ, ಅವೆಲ್ಲವನ್ನೂ ನಲಿವು ಮಾಡಿಕೊಳ್ಳುವ …

ಮೆಳೇಕಲ್ಲಳ್ಳಿ ಉದಯ ನಾನೂ ಗಣೇಶ್ ಇದ್ದದ್ದು ಮಹಾರಾಜ ಹಾಸ್ಟೆಲಿನ ೧೦೧ನೇ ರೂಮಿನಲ್ಲಿ. ಪ್ರಾರಂಭದಲ್ಲಿ ನಾವು ಚೆನ್ನಾಗಿಯೆ ಸಿಳ್ಳೆ ಹೊಡೆದುಕೊಂಡು ಓಡಾಡುತಿದ್ವಿ. ತೂಕದಲ್ಲಿ ನಾವಿಬ್ಬರೂ ನಲವತ್ತು ಕೇಜಿ ಒಳಗೆ ಇದ್ದುದರಿಂದಲೂ ಹಾಗೂ ಸಿಳ್ಳೆ ಹೊಡೆದುಕೊಂಡು ಓಡಾಡುತ್ತಿದ್ದು ದರಿಂದಲೂ ನಮ್ಮನ್ನು ನಾವೇ ಸಿಳ್ಳೆಕ್ಯಾತರೆಂದು ಕರೆದುಕೊಂಡಿದ್ದೆವು. …

ಎಸ್.ಗಂಗಾಧರಯ್ಯ ಅದು ೧೯೮೭-೮೮ನೆಯ ಇಸವಿ. ನನ್ನ ಎಂ.ಎ. ಕೊನೆಯ ವರ್ಷದ ಪರೀಕ್ಷೆಗಳೆಲ್ಲಾ ಮುಗಿದಿದ್ದವು. ಗಂಗೋತ್ರಿಯ ಓಲ್ಡ್ ಬ್ಲಾಕ್ ಹಾಸ್ಟೆಲಿನಲ್ಲಿ ಕಡೆಯ ದಿನ. ಊರಿಗೆ ಹೊರಡಲೆಂದು ಲಗೇಜು ಪ್ಯಾಕ್ ಮಾಡಿಕೊಂಡು ಇನ್ನೇನು ರೂಮಿನಿಂದ ಆಚೆ ಬರಬೇಕು ಅಷ್ಟರಲ್ಲಿ ಅಲ್ಲಿಗೆ ಮೊಗಳ್ಳಿ ಬಂದ. ‘ಬಾರೋ …

ಸುಕನ್ಯಾ ಕನಾರಳ್ಳಿ ಸುಪ್ರಸಿದ್ಧ ಪರ್ಷಿಯನ್ ಕವಿ ರೂಮಿ ಅಫ್ಘಾನಿಸ್ತಾನದ ಬಾಲ್ಖ್‌ನಲ್ಲಿ ಕ್ರಿ.ಶ.೧೨೦೭ ರಲ್ಲಿ ಹುಟ್ಟಿದ. ಆತ ಒಬ್ಬ ಇಸ್ಲಾಮ್ ಧರ್ಮಶಾಸ್ತ್ರಜ್ಞ ಮತ್ತು ಬೋಧಕನಾಗಿ ಜನರ ಜೊತೆ ಗಾಢವಾಗಿ ಬೆರೆಯುತ್ತಿದ್ದವ. ೧೨೪೪ರಲ್ಲಿ ರೂಮಿ ಒಬ್ಬ ಅಲೆಮಾರಿಯನ್ನು ಹಾದಿಯಲ್ಲಿ ಭೇಟಿಯಾದ. ಆತನ ಹೆಸರು ಶಂಶುದ್ದೀನ್. …

ಅಕ್ಷತಾ ಕನಸು ಹೊತ್ತ ಮಕ್ಕಳಿಗೆ ಮೈಸೂರಿನ ಒಡನಾಡಿಯೆಂದರೆ ಅಮ್ಮನ ಬೆಚ್ಚನೆಯ ಮಡಿಲು. ಇಲ್ಲಿ ಪ್ರತಿಯೊಬ್ಬರದ್ದೂ ಒಂದೊಂದು ಕತೆ, ಭಿನ್ನ ಜೀವನ ಪ್ರೀತಿ. ಎಲ್ಲವೂ ಒಟ್ಟಾಗಿ ಹರಡಿಕೊಂಡಿರುವ ಮರ. ನೆರಳಿನೊಳಗೆ ಕಟ್ಟಿಕೊಳ್ಳುವ ಬದುಕು ನಿರಾಳ. ಕಾಣುವ ಕನಸುಗಳಿಗೆ ಸೂರಾಗಿ, ನಡೆಯುವ ಹೆಜ್ಜೆಗೆ ಆಸರೆಯಾಗಿ …

ರಶ್ಮಿ ಕೋಟಿ ಅದು ಕೇವಲ ಒಂದು ಫೋಟೋ ಅಲ್ಲ, ದೇಶವು ಹತ್ಯಾಕಾಂಡಗಳ ಸುಳಿಯಲ್ಲಿ ಸಿಲುಕಿದ್ದಾಗ, ಆ ಕ್ಷಣ ಮಾತ್ರ ಒಂದು ಅಪರೂಪದ ಜೀವಸೆಲೆಯಂತಿತ್ತು. ‘ಹಿಂದೂಸ್ತಾನ್ ಟೈಮ್ಸ್’ ಛಾಯಾಗ್ರಾಹಕ ಬಾಬುರಾಮ್ ಗುಪ್ತ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆ ಕ್ಷಣ ಇತಿಹಾಸದಲ್ಲಿ ದಾಖಲಾದ ಎಲ್ಲಾ …

Stay Connected​
error: Content is protected !!