ಕನ್ನಡ ಎಂಬ ಕಾಮನಬಿಲ್ಲು ಕನ್ನಡವು ನನಗೆ ಒಲಿದಿದೆ ಎಂಬುದಕ್ಕೂ ಹೆಚ್ಚಾಗಿ ನಾನು ಅದಕ್ಕೆ ಒಲಿದಿದ್ದೇನೆಂಬುದು ಹೆಚ್ಚು ಸರಿಯೆನಿಸುತ್ತದೆ. ಅದು ನನ್ನನ್ನು ಒಲಿಸಿಕೊಂಡಿದೆಯೆಂಬುದು ಇನ್ನಷ್ಟು ಸರಿಯೆನಿಸುತ್ತದೆ ಅದೇನು ಮಾಯೆಯೋ, ಕನ್ನಡವೆಂಬುದು ನನ್ನೊಳಗೆ ಎಲ್ಲ ಕಾಲಕ್ಕೂ ಇತ್ತು. ಒಡನೊಡನೆಂದೋ ಒಡನಾಗಿತ್ತು. ಎದೆಯನ್ನೆಂದೋ ಹೊಕ್ಕು ಉಳಿದಿತ್ತು. …










