Mysore
23
overcast clouds

Social Media

ಶುಕ್ರವಾರ, 03 ಜುಲೈ 2026
Light
Dark

ಪತಿಯ ಶವದ ಮುಂದೆ ಅಳುತ್ತಲೇ ಪ್ರಾಣಬಿಟ್ಟ ಪತ್ನಿ : ಹಾಸನದಲ್ಲಿ ಹೃದಯವಿದ್ರಾವಕ ಘಟನೆ

ಹಾಸನ : ಅಳುತ್ತಲೇ ಪತಿಯ ಶವದ ಮುಂದೆ ಪತ್ನಿ ಪ್ರಾಣ ಬಿಟ್ಟ ಹೃದಯವಿದ್ರಾವಕ ಘಟನೆ ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದಲ್ಲಿ ಇಂದು ನಡೆದಿದೆ.

ರವೀಶ್ (39) ಹಾಗೂ ಪ್ರಮೀಳಾ (32) ಮೃತ ದಂಪತಿ. ನಿನ್ನೆ (ಮೇ.5) ರಾತ್ರಿ ರವೀಶ್​ ಹೃದಯಾಘಾತದಿಂದ ಮೃತಪಟ್ಟಿದ್ದ. ಇಂದು ಬೆಳಗ್ಗೆ ಪತಿಯ ಶವದ ಮುಂದೆ ಅಳುತ್ತಲೇ ಪತ್ನಿ ಪ್ರಮೀಳಾ ಕೊನೆಯುಸಿರೆಳೆದಿದ್ದಾಳೆ.

ಒಂದೆಡೆ ದಂಪತಿ ಸಾವಿನಲ್ಲೂ ಒಂದಾದರೆ, ಇನ್ನೊಂದೆಡೆ  ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪಾಲಕರ ಶವಗಳ ಮುಂದೆ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ದಂಪತಿ ಸಾವಿಗೆ ಗ್ರಾಮಸ್ಥರು ಕೂಡ ಕಂಬನಿ ಮಿಡಿದಿದ್ದಾರೆ.

ಬೇಲೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಂಪತಿಯ ಅಂತಿಮ ಸಂಸ್ಕಾರ ಇಂದು ನಡೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!