ಬೆಂಗಳೂರು : ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ವಿರುದ್ಧ ಎನ್‌ಸಿಆರ್ ದಾಖಲಾಗಿದ್ದು, ಇದರಿಂದ ಸಂತೋಷ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.
ಇತ್ತೀಚೆಗೆ ಹುಲಿ ಉಗುರು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಹಳ್ಳಿಕಾರ್ ಒಡೆಯಾ ಎಂದೇ ಖ್ಯಾತಿ ಪಡೆದಿರುವ ವರ್ತೂರು ಸಂತೋಷ್ ವಿರುದ್ಧ ಪ್ರಾಣಿ ದಯಾಸಂಘ ಪ್ರಕರಣ ದಾಖಲಿಸಿದ್ದಾರೆ.
ಸಂತೋಷ್ ಸಾಕಿದ್ದ ಹಸುಗಳನ್ನು ಸಾಗಾಣೆ ಮಾಡುವ ವೇಳೆ ನಿಯಮ ಪಾಲಿಸಿಲ್ಲ ಎಂಬ ಕಾರಣದಿಂದ ಪ್ರಾಣಿ ದಯಾ ಸಂಘ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಠಾಣೆಯಲ್ಲಿ ವರ್ತೂರು ಸಂತೋಷ್ ವಿರುದ್ಧ ಎನ್‌ಸಿಆರ್ ದಾಖಲಿಸಲಾಗಿದೆ.
ಒಂದು ವೇಳೆ ಎನ್‌ಸಿಆರ್ ಎಫ್‌ಐಆರ್ ಆಗಿ ಬದಲಾದರೆ ವರ್ತೂರು ಸಂತೋಷ್‌ಗೆ ಸಂಕಷ್ಟ ಎದುರಾಗಲಿದೆ.