ಬೆಂಗಳೂರು : ರಾಜ್ಯ ಕೆಎಸ್ಸಾರ್ಟಿಸಿ ಮುಡಿಗೆ ಪ್ರತಿಷ್ಠಿತ ಮತ್ತೆರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಅತ್ಯುತ್ತಮ ಉದ್ಯೋಗದಾತ ಮತ್ತು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಉತ್ಕೃಷ್ಟ ಕೊಡುಗೆಗಾಗಿ ಏಷ್ಯನ್ ಲೀಡರ್ ಶಿಪ್ ಮತ್ತು ಮಿಡಲ್ ಈಸ್ಟ್ ಲೀಡರ್ ಶಿಪ್-2023 ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 11ರಂದು ತಾಜ್ ದುಬೈನಲ್ಲಿ ನೆರವೇರಲಿದೆ.
ವಿಶ್ವದ ಮಾನವ ಸಂಪನ್ಮೂಲ ವೃತ್ತಿಪರರು ಹಾಗೂ ವಿಶ್ವ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಸಂಸ್ಥೆ ಪ್ರತಿಷ್ಠಾಪಿತ ಪ್ರಶಸ್ತಿ ಇದಾಗಿರುತ್ತದೆ.