ರಾಜ್ಯದಲ್ಲಿ ಚುನಾವಣಾ ಬಿಸಿ ರಂಗೇರಿದೆ. ಮತ್ತೊಂದೆಡೆ ಬಿಜೆಪಿಯಲ್ಲಿ ಟಿಕೆಟ್ ಸಿಗದ ನಾಯಕರ ಬಂಡಾಯ ಬೆಂಕಿ ತಾಂಡವವಾಡುತ್ತಿದೆ. ಈ ಸಮಯದಲ್ಲಿ ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮಾಡಿರುವ ಟ್ವಿಟ್‌ವೊಂದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ತೇಜಸ್ವಿನಿ ಅನಂತಕುಮಾರ್ “ಮಾತು ಬೆಳ್ಳಿ ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ಮೌನ ಮಾತ್ರ ಬಂಗಾರ. ಏನಂತಿರಿ? ಎಂದು ಪ್ರಶ್ನಿಸುವ ಮೂಲಕ ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಅದರಲ್ಲೊಬ್ಬ ಈ “ನಂದಿನಿ ವಿಚಾರದಲ್ಲಿ ನಿಮ್ಮ ಹಾಗೂ ನಿಮ್ಮ ಪಕ್ಷದವರ ಮೌನ ನೋಡುತ್ತಿದ್ದೇವೆ. ಆ ಮೌನ ಬೆಳ್ಳಿಯೂ ಅಲ್ಲ ಬಂಗಾರವೂ ಅಲ್ಲ. ಇನ್ನು ವಯಕ್ತಿಕ ವಿಚಾರದಲ್ಲಿ ನಿಮ್ಮಿಷ್ಟಕ್ಕೆ ಮೌನ ಬಂಗಾರವಾಗಬಹುದು” ಎಂದು ಹೇಳಿದ್ದಾನೆ.
ಮತ್ತೋರ್ವ “ಮೌನವಾಗಿ ಕೆಲಸ ಮಾಡುತಿದ್ದ ಸಾಧಕ ಡಾ ಮನಮೋಹನ್ ಸಿಂಗ್ ಅವರಿಗೆ ತಮ್ಮ ಪಕ್ಷ ಮಾಡಿದ ಅವಮಾನಗಳನ್ನು ನೆನೆಯಿರಿ. ಬರೇ ಮಾತೊಂದು ಬಿಟ್ಟು ಬೇರೆ ನಕ್ಕು ಉಪಯೋಗವಿಲ್ಲದ ಮೋದಿಯನ್ನು ಐಟಿ ಲ್ ಯೂಸ್ ಮಾಡಿ ದೊಡ್ಡ ಸಾಧಕ ಅಂತ ಬಿಂಬಿಸಲಾಗುತ್ತಿದೆ ಅಲ್ಲವೇ..?? ಈಗ ನೀವೇ ನಿರ್ಧಾರ ಮಾಡಿ ರಾಜಕೀಯದಲ್ಲಿ ಬಂಗಾರ ಬೇಕೋ ಅಥವಾ ಬೆಳ್ಳಿಯೋ ಎಂದು ಕಾಮೆಂಟ್ ಬರೆದಿದ್ದಾನೆ.
ಮಗದೊಬ್ಬ “ ಸ್ವಲ್ಪ ಕಾಯಬೇಕಾಗಬಹುದು. ನಾವೆಲ್ಲ ಬಯಸುವ ಒಳ್ಳೆಯ ಫಲಿತಾಂಶ. ನಿಮಗೆ ಸಿಕ್ಕೇ ಸಿಗುತ್ತದೆ. ಚಿಂತೆ ಬೇಡ. ನಾವೆಲ್ಲ ಜೊತೆಯಾಗಿ ಇದ್ದೇವೆ. ಎಂದು ಕಾಮೆಂಟ್ ಮಾಡಿದ್ದಾರೆ.
ರಾಜ್ಯದಲ್ಲಿ ದಿ. ಅನಂತ್ ಕುಮಾರ್ ಬಿಜೆಪಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಕೊಡುಗೆಗಳನ್ನು ನೆನೆದು ಉನ್ನತ ಸ್ಥಾನವನ್ನು ಬಿಜೆಪಿ ನೀಡಬಹುದು ಎಂದು ನಿರೀಕ್ಷಿಸಿದ್ದರು. ಸದ್ಯ ತೇಜಸ್ವಿನಿ ಅನಂತ್‌ಕುಮಾರ್ ಅವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹುದ್ದೆಯನ್ನು ನೀಡಿದೆ.