ಮೈಸೂರು : ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ರಾಮೇಗೌಡ (69 ) ಅವರು ಕೆಲವೇ ನಿಮಿಷಗಳ ಹಿಂದಷ್ಟೆ ನಿಧನರಾದರೆಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಮಧುಮೇಹಿಯಾಗಿದ್ದ ರಾಮೇಗೌಡ ಅವರು ತಾಲೂಕಿನ ಸಿದ್ದರಾಮಯ್ಯ ಹುಂಡಿಯಲ್ಲಿ ವಾಸವಿದ್ದು ಅನಾರೋಗ್ಯದಿಂದ ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
ಮೃತ ರಾಮೇಗೌಡ ಅವರು ಪತ್ನಿ ರುಕ್ಮಿಣಿ ಮಕ್ಕಳಾದ ರವಿ ರಘು ಮಗಳು ನಾಗರತ್ನ (ಬೋರಮ್ಮ) ಸೇರಿದಂತೆ ಕುಟುಂಬ ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಹೊಸಹಳ್ಳಿಯ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿವೆ.