Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬನ್ನೇರುಘಟ್ಟದಲ್ಲಿ ಗಂಧ ಚೋರರ ಮೇಲೆ ಶೂಟೌಟ್ : ಓರ್ವನ ಸಾವು

ಬನ್ನೇರುಘಟ್ಟ : ಬೆಂಗಳೂರು ದಕ್ಷಿಣ ಭಾಗದ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಶ್ರೀಂಗಧದ ಮರ ಕಳ್ಳತನ ಮಾಡುತ್ತಿದ್ದವರ ಮೇಲೆ ಫಾರೆಸ್ಟ್​ಗಾರ್ಡ್​​ ಫೈರಿಂಗ್​ ಮಾಡಿದ್ದು ಒಬ್ಬ ಸಾವನ್ನಪ್ಪಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ಮೃತನ ಗುರುತು ಪತ್ತೆಯಾಗಿದ್ದು. 40 ವರ್ಷದ ತಿಮ್ಮರಾಯಪ್ಪ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಈತ ಮಾಲೂರು ತಾಲ್ಲೂಕಿನ ಮಾಸ್ತಿ ಸಮೀಪದ ನಟ್ಟೂರಹಳ್ಳಿ ನಿವಾಸಿ. ಇನ್ನು ಇದೇ ಗಂಧದ ಮರ ಕಳ್ಳತನದ ಪ್ರಕರಣದಲ್ಲಿ ಕಳ್ಳರ ಬಗ್ಗೆ ಮಹತ್ವದ ಸುಳಿವು ಕೊಟ್ಟಿರುವುದು ಮರದ ಬಳಿ ತಿಂದು ಉಗಿದಿದ್ದ ಗುಟ್ಕಾ ಪ್ಯಾಕೆಟ್ ಗಳು

ಗಂಧದ ಚೋರರು ಗುಟ್ಕಾ ತಿಂದು, ನೀರಿನ‌ ಬಾಟಲ್ ಅಲ್ಲೇ ಬಿಸಾಡಿದ್ದರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ವಸ್ತುಗಳು ಇರುತ್ತಿರಲಿಲ್ಲ. ಆದರೆ ಗಂಧದ ಮರದ ಬುಡದಲ್ಲಿ‌ ಬಿದ್ದಿದ್ದ ಗುಟ್ಕಾ ಪ್ಲಾಸ್ಟಿಕ್ ಕವರ್​ ಪೊಲೀಸರ ಗಮನ ಸೆಳೆದಿತ್ತು. ಕಲ್ಕೆರೆ ಸ್ಟೇಟ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಗಂಧದ ಮರ ಕಳ್ಳತನ ನಡೆದಿತ್ತು. ಗಂಧದ ಮರ ಕಳ್ಳತನ ಪ್ರಕರಣಗಳು ಒಂದೂವರೆ ತಿಂಗಳಿಂದ ನಡೆದಿತ್ತು. ಗಂಧದ ಮರ ಕಳ್ಳರ ಬೆನ್ನುಹತ್ತಿತ್ತು. ಆದರೆ ನಿನ್ನೆ ರಾತ್ರಿ ಹತ್ತು ಘಂಟೆಯಿಂದ ವಾಚ್ ಮಾಡಲಾಗುತ್ತಿತ್ತು. ಬೀಟ್ ಫಾರೆಸ್ಟರ್ ಈ. ವಿನಯ್ ಕುಮಾರ್, ಪಿ.ಸಿ.ಬಿ ವಾಚರ್ ಗಳಾದ ಮೈಕಲ್, ಯಡಿಯೂರ ಕಾಡಿನಲ್ಲಿ ವಾಚ್ ಮಾಡುತ್ತಿದ್ದರು.

ಕಲ್ಕೆರೆ ಸ್ಟೇಟ್ ಫಾರೆಸ್ಟ್ ಜೇಡಿಮರ ವೃತ್ತದ ಬಳಿ ಬಂದಾಗ ಮರ ಕಡಿಯುತ್ತಿದ್ದುದು ಗಮನಕ್ಕೆ ಬಂದಿದೆ. ಕಳೆದ ರಾತ್ರಿ‌ ಸಿಬ್ಬಂದಿ ಬೀಟ್ ಹಾಕುವ ವೇಳೆ ಕ್ಲ್ಯೂ ಸಿಕ್ಕಿತ್ತು. ವಿಮಲ್ ಗುಟ್ಕಾ ಹಾಗೂ ನೀರಿನ ಬಾಟಲುಗಳು ಮರದ ಬಳಿ ಸಿಕ್ಕಿತ್ತು. ಸಿಬ್ಬಂದಿ ಇದೇ ಮಾಹಿತಿ ಕಲೆ ಹಾಕಿ, ಮರಗಳ್ಳರ ಸುಳಿವು ಹಿಡಿದಿದ್ದರು.

ಇತ್ತೀಚೆಗೆ ಗಂಧದ ಮರಗಳು ಕಳ್ಳತನ ಆಗಿದ್ದವು. ಕಳ್ಳರನ್ನು ಬಂಧಿಸಲು ಸಿಬ್ಬಂದಿ ಇಡಿ ರಾತ್ರಿ ಕಾಡಿನಲ್ಲಿ ಓಡಾಡಿದ್ದರು. ಆಗ ಮರ ಕೊಯ್ಯುತ್ತಿರುವ ಶಬ್ದ ಕೇಳಿಸಿದೆ. ಕೂಡಲೇ ಫಾರೆಸ್ಟ್ ಗಾರ್ಡ್ ವಿನಯ್ ಹಾಗೂ ತಂಡ ಸ್ಥಳಕ್ಕೆ ಹೋಗಿತ್ತು. ಅರಣ್ಯ ಸಿಬ್ಬಂದಿಯನ್ನು ನೋಡುತ್ತಿದ್ದಂತೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಆಗ ಸಿಬ್ಬಂದಿ ಪಂಪ್ ಆಕ್ಷನ್ ಸ್ಲೈಡ್ ಗನ್ ಮೂಲಕ ಫೈರಿಂಗ್ ಮಾಡಿದ್ದಾರೆ. ಗನ್ ಮೂಲಕ ಹಾರಿದ್ದ ಗುಂಡು ತಿಮ್ಮರಾಯಪ್ಪನಿಗೆ ತಗುಲಿದೆ. ಹೊಟ್ಟೆ ಭಾಗಕ್ಕೆ ಗುಂಡು ಬಿದ್ದು ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ. ಒಬ್ಬ ಕೆಳಗೆ ಬೀಳುತ್ತಿದ್ದಂತೆ, ಇನ್ನೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ