Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ಆ.21ರಿಂದ ಸೆ.2 ವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

ಬೆಂಗಳೂರು : ಎರಡನೇ ಬಾರಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಉಪನ್ಯಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ಕುರಿತು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆ.21ರಿಂದ ಸೆಪ್ಟೆಂಬರ್ 2ರವರೆಗೆ 2ನೇ ಬಾರಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ.

ಕರ್ನಾಟಕ ಶಾಲಾ ವತಿಯಿಂದ 2022-23ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಅನ್ನು ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಲಾಗುವುದು. 2022-23ನೇ ಸಾಲಿನಲ್ಲಿ ಹಾಗೂ ಅದಕ್ಕಿಂತ ಹಿಂದಿನ ಸಾಲುಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಪರೀಕ್ಷೆಗೆ ನೋಂದಾಯಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ.

ಎರಡನೇ ಬಾರಿ ಪೂರಕ ಪರೀಕ್ಷೆಯನ್ನು ನಡೆಸುವ ಪಿಯು ಮಂಡಳಿಯ ನಿರ್ಧಾರವು ಈಗಾಗಗಲೇ ಪೂರಕ ಪರೀಕ್ಷೆಯನ್ನು ಬರೆದ ಮತ್ತು ಹಿಂದಿನ ವಾರ್ಷಿಕ ಮತ್ತು ಪೂರಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಹೊಸ ಅವಕಾಶವು ಅವರಿಗೆ ಮತ್ತೆ ಪರೀಕ್ಷೆ ಬರೆಯಲು ಮತ್ತು ಅವರ ಅಂಕಗಳನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ.

ಈ ಹಿಂದೆ ಮೇ 23 ರಿಂದ ಜೂನ್ 2 ರವರೆಗೆ ನಡೆದ ಪೂರಕ ಪರೀಕ್ಷೆಗಳಲ್ಲಿ ಒಟ್ಟು 1,57,756 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ, 50,478 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ ಮತ್ತು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರೈಸುವ ಅವಕಾಶವನ್ನು ಪಡೆದುಕೊಂಡಿದ್ದರು.

ಕಳೆದ ಪೂರಕ ಪರೀಕ್ಷೆಗಳಲ್ಲಿ ವಿಭಿನ್ನ ರೀತಿಯ ಸ್ಟ್ರೀಮ್‍ಗಳಲ್ಲಿ ವಿಭಿನ್ನ ಉತ್ತೀರ್ಣ ಶೇಕಡಾವಾರುಗಳನ್ನು ಫಲಿತಾಂಶಗಳನ್ನು ಪ್ರಕಟಿಸಿದೆ. ಕಲಾ ವಿಭಾಗದಲ್ಲಿ ಶೇ.32.23ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇ.38.60ರಷ್ಟು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ಸ್ಟ್ರೀಮ್ 32.00% ರಷ್ಟು ತೇರ್ಗಡೆ ಹೊಂದಿದ್ದರು. ಎರಡನೇ ಸಲದ ಪೂರಕ ಪರೀಕ್ಷೆಯ ಘೋಷಣೆಯೊಂದಿಗೆ, ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಲು ಮತ್ತು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಈ ಎರಡನೇ ಅವಕಾಶವನ್ನು ಬಳಸಿಕೊಳ್ಳಬಹುದು.

ವೇಳಾಪಟ್ಟಿ :
ಆ.21ರಂದು ಕನ್ನಡ, ಆರೇಬಿಕ್
ಆ.22 ಐಚ್ಛಿಕ ಕನ್ನಡ, ಕೆಮಿಸ್ಟ್ರಿ, ಬೇಸಿಕ್ ಮ್ಯಾಥ್ಸ್
ಆ.23 ಸಮಾಜ, ಎಲೆಕ್ಟ್ರಾನಿಕ್ಸ್,ಕಂಪ್ಯೂಟರ್ ಸೈನ್ಸ್
ಆ.24 ಲಾಜಿಕ್, ಹಿಂದೂಸ್ಥಾನಿ ಮ್ಯೂಸಿಕ್, ಬ್ಯುಸಿನೆಸ್ ಸ್ಟಡೀಸ್
ಆ.25 ಇತಿಹಾಸ, ಸ್ಟಾಟಸ್ಟಿಕ್ಸ್.
ಆ.26 ಇನರ್ಮೇಷನ್ ಟೆಕ್ನಾಲಜಿ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇಸ್, ಬ್ಯೂಟಿ ಆಂಡ್ ವೆಲ್ನೆಸ್.
ಆ.28 ಜಿಯೋಗ್ರಾಫಿ, ಸೈಕಾಲಜಿ, ಫಿಜಿಕ್ಸ್.
ಆ.29 ಅಕೌಂಟ್ಸ್, ಜಿಯಾಲಜಿ, ಎಜುಕೇಷನ್, ಹೋಂ ಸೈನ್ಸ್.
ಆ.30 ಪೆÇಲಿಟಿಕಲ್ ಸೈನ್ಸ್, ಮ್ಯಾಥಮೆಟಿಕ್ಸ್
ಆ.31 ಹಿಂದಿ
ಸೆಪ್ಟೆಂಟರ್ 1ರಂದು ಎಕನಾಮಿಕ್ಸ್, ಬಯಾಲಜಿ.
ಸೆ.2ರಂದು ತಮಿಳ್, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!