Light
Dark

ಶಾಲೆಯ ತಡೆಗೋಡೆ ಕುಸಿದು ವಿದ್ಯಾರ್ಥಿ ಸಾವು

ರಾಮನಗರ : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತಡೆಗೋಡೆ ಕುಸಿದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ರಾಮನಗರ ತಾಲೂಕಿನ ಹೊಸೂರು ಗೊಲ್ಲಳ್ಳಿ ಗ್ರಾಮದ ವಸತಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿ ಕೌಶಿಕ್(12)‌ ಮೃತ ರ್ದುದೈವಿ. 6ನೇ ತರಗತಿ ಓದುತ್ತಿದ್ದ ಕೌಶಿಕ್, ಬೆಳಗ್ಗೆ ಸ್ನಾನಕ್ಕೆ ತೆರಳಿದ್ದಾಗ ನೀರಿನ ಟ್ಯಾಂಕ್​ಗೆ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿದು ಈ ದುರ್ಘಟನೆ ನಡೆದಿದೆ. ಘಟನೆಗೆ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ರಾಮನಗರ ಎಸ್​​ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದಯಾನಂದ್ ಸಾಗರ್ ಆಸ್ಪತ್ರೆಯಲ್ಲಿರ ಕೌಶಿಕ್ ಮೃತದೇಹ ಇಡಲಾಗಿದೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ‌ ಹಿಂದೆ ವಿದ್ಯಾರ್ಥಿಗಳು ಹಲವು ಬಾರಿ ಮನವಿ‌ ಮಾಡಿದ್ದರೂ, ಶಾಲಾ ಮಂಡಳಿ ಮಾತ್ರ ಇದಕ್ಕೆ ಕ್ಯಾರೆ ಎಂದಿರಲಿಲ್ಲ. ಇದೀಗ ಬೆಳಿಗ್ಗೆ ಸ್ನಾನಕ್ಕೆ ತೆರಳಿದಾಗ ಮೈಮೇಲೆ ಗೋಡೆ ಬಿದ್ದಿದೆ. ಇದರಿಂದ ಕೌಶಿಕ್ ತಲೆ ಮೇಲೆ ಬಲವಾದ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದು, ಈ ವೇಳೆ ಕೌಶಿಕ್ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ