ಚಾಮರಾಜನಗರ: ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಖ್ಯರಸ್ತೆಯ ಬಳಿ ಇದ್ದ ಭಾರಿ ಮರವೊಂದು ಉರುಳಿ ಬಿದ್ದಿದ್ದು ಕ್ಷಣಾರ್ಧದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರು ಅಪಾಯದಿಂದ ಪಾರಾಗಿದ್ದಾರೆ.
ತಾಲ್ಲೂಕಿನ ಚಂದಕವಾಡಿ ಸಮೀಪವಿರುವ ಸೇತುವೆಯ ಬಳಿ ದೊಡ್ಡ ಮರವೊಂದು ಬೇರು ಸಹಿತ ರಸ್ತೆಗೆ ಬಿದ್ದಿದೆ
ಮರ ಬೀಳುವ ೫ ನಿಮಿಷ ಮುನ್ನ ಶಾಸಕ ಪುಟ್ಟರಂಗಶೆಟ್ಟಿ ಅವರು ಸೇತುವೆ ದಾಟಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಆಂದೋಲನಕ್ಕೆ ಮಾಹಿತಿ ನೀಡಿದರು. ಸದ್ಯ ಸಂಚಾರ ಅಸ್ತವ್ಯಸ್ತವಾಗಿದ್ದು, ಸೇತುವೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸಲಾಗುತ್ತಿದೆ.