ಹೊಸದಿಲ್ಲಿ : ಮೋದಿ ಉಪನಾಮ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಘೋಷಿಸಿದ ದಿನಾಂಕದಿಂದ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಮೋದಿ ಸಮುದಾಯಕ್ಕೆ ಅವಮಾನಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ. ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸೆರೆವಾಸಕ್ಕೆ ಒಳಗಾಗುವ ಸಂಸದ ಅಥವಾ ಶಾಸಕ ಆರು ವರ್ಷಗಳ ಕಾಲ ಅನರ್ಹಗೊಳ್ಳುತ್ತಾನೆ ಎಂದು ಜನಪ್ರತಿನಿಧಿ ಕಾಯ್ದೆ ಹೇಳುತ್ತದೆ. ರಾಹುಲ್ ಗಾಂಧಿ ಅವರು ಈ ಹಿಂದೆ ವಿರೋಧಿಸಿದ್ದ ನಿಯಮವೊಂದೇ ಅವರಿಗೆ ಈಗ ಉರುಳಾಗಿ ಪರಿಣಮಿಸಿದೆ. ಮೋದಿ ಉಪನಾಮದಬಗ್ಗೆ ಮಾತನಾಡಿದ್ದರ ಫಲವಾಗಿ ಈಗ ರಾಹುಲ್ ಗಾಂಧಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 (4) ಅನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಈ ತೀರ್ಪನ್ನು ಅಮಾನ್ಯಗೊಳಿಸಲು ಯುಪಿಎ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತ್ತು. ಇದರ ಅಡಿ ಜನಪ್ರತಿನಿಧಿಗಳು ಅನರ್ಹಗೊಳ್ಳುವುದನ್ನು ಮೂರು ತಿಂಗಳ ಕಾಲ ತಡೆಯಲು ಅವಕಾಶವಿತ್ತು. ಆದರೆ 2013ರ ಸೆಪ್ಟೆಂಬರ್ 28ರಂದು ಈ ಬಗ್ಗೆ ಹಿರಿಯ ನಾಯಕ ಅಜಯ್ ಮಾಕೆನ್ ಅವರು ಸುದ್ದಿಗೋಷ್ಠಿ ನಡೆಸುವಾಗ ಬಂದಿದ್ದ ರಾಹುಲ್ ಗಾಂಧಿ, ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದುಹಾಕಿದ್ದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.