ಬೆಂಗಳೂರು: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ದಾಖಲೆಯ ಶೇ.74.67ರಷ್ಟು ಫಲಿತಾಂಶ ಪ್ರಕಟಗೊಂಡಿದೆ.
ಎಂದಿನಂತೆ ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳೇ ಫಲಿತಾಂಶದಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.
2022-23ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಇದೇ ಮೊದಲ ಬಾರಿ ಶೇ 74.67 ಫಲಿತಾಂಶ ಲಭ್ಯವಾಗಿದೆ.
7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 524209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 80.72 ವಿದ್ಯಾರ್ಥಿನಿಯರು ಹಾಗೂ ಬಾಲಕರು ಶೇ 69.05 ಸಾಧಿಸಿದ್ದಾರೆ.
ಅತಿ ಹೆಚ್ಚು ಅಂಕ ಗಳಿಸಿದವರು
ಕಲಾವಿಭಾಗ
ತಬಸುಮ್ ಶೇಕ್, ಎನ್ಎಂಕೆಆರ್ ವಿ ಮಹಿಳಾ ಕಾಲೇಜು ಜಯನಗರ ಬೆಂಗಳೂರು– 593 ಅಂಕಗಳು
ವಾಣಿಜ್ಯ ವಿಭಾಗ
ಅನನ್ಯ ಕೆ.ಎ, ಅಳ್ವಾಸ್ ಕಾಲೇಜು, ಮೂಡಬಿದರೆ 600 ಅಂಕಗಳು
ವಿಜ್ಞಾನ ವಿಭಾಗ
ಕೌಶಿಕ್ ಎಸ್, ಜ್ಞಾನಗಂಗೊತ್ರಿ ಕಾಲೇಜು ಶ್ರೀನಿವಾಸಪುರ ಕೋಲಾರ ಅಂಕಗಳು– 596
ಸುರಭಿ ಎಸ್, ಆರ್ ವಿ ಪಿಯು ಕಾಲೇಜು ಬೆಂಗಳೂರು ಅಂಕಗಳು– 596
ಬೆಂಗಳೂರಿನ ಎನ್‍ಎಂಕೆಆರ್ ವಿ ಕಾಲೇಜಿನ ವಿದ್ಯಾರ್ಥಿನಿ ತಬಸ್ಸುಮ್ ಶೇಖ್ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 593 ಅಂಕಗಳನ್ನು ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಆಳ್ವಾಸ್ ಕಾಲೇಜಿನ ಅನನ್ಯ.ಕೆ.ಎ 600ಕ್ಕೆ 600 ಅಂಕಗಳು ಹಾಗೂ ವಿಜ್ಞಾನ ವಿಭಾಗದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕಾಲೇಜಿನ ಗಂಗೋತ್ರಿ ಪಿಯು ಕಾಲೇಜಿನ ಎಸ್.ಎಂ.ಕೌಶಿಕ್ 600 ಅಂಕಗಳಿಗೆ 596 ಅಂಕ ಪಡೆದು ಮೊದಲ ರ್ಯಾಂಕ್ ಗಳಿಸಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷ ಡಾ.ರಾಮಚಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ರಿತ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದರು.
ಪರೀಕ್ಷೆಗೆ ಹಾಜರಾದ 7,02,067 ವಿದ್ಯಾರ್ಥಿಗಳ ಪೈಕಿ 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದರೆ, ಉಡುಪಿ 2ನೇ ಸ್ಥಾನ, ಕೊಡುಗು 3ನೇ ಸ್ಥಾನ ಪಡೆದರೆ, ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.
ಯಾವುದೇ ಸರ್ಕಾರಿ ಕಾಲೇಜಿನಲ್ಲಿ ಈ ಬಾರಿ ಶೂನ್ಯ ಫಲಿತಾಂಶ ದಾಖಲಾಗದೆ ಇರುವುದು ವಿಶೇಷವಾಗಿದೆ. 42 ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದರೆ 05 ಅನುದಾನಿತ, 73 ಅನುದಾನರಹಿತ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಕಲಾವಿಭಾಗದಲ್ಲಿ 2,20,300 ವಿದ್ಯಾರ್ಥಿಗಳ ಪೈಕಿ 1,34,876 (ಶೇ.61.22) ವಿದ್ಯಾರ್ಥಿಗಳು ಉತ್ತೀರ್ಣರಾದರೆ, ವಾಣಿಜ್ಯ ವಿಭಾಗದಲ್ಲಿ 2,40,146 ವಿದ್ಯಾರ್ಥಿಗಳ ಪೈಕಿ 1,82,246 ವಿದ್ಯಾರ್ಥಿಗಳು(ಶೇ.75.89), ವಿಜ್ಞಾನ ವಿಭಾಗದಲ್ಲಿ 2,41,616 ವಿದ್ಯಾರ್ಥಿಗಳಲ್ಲಿ 2,07,087( ಶೇ.85.71) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ ಹಾಜರಾದ 6,07,489 ಹೊಸ ವಿದ್ಯಾರ್ಥಿಗಳ ಪೈಕಿ 4,79,746 ವಿದ್ಯಾರ್ಥಿಗಳು ಉತ್ತೀರ್ಣರಾದರೆ, ಪುನಾವರ್ತಿತ 69,870 ವಿದ್ಯಾರ್ಥಿಗಳಲ್ಲಿ 36,833 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 24,708 ಖಾಸಗಿ ವಿದ್ಯಾರ್ಥಿಗಳ ಪೈಕಿ 10,630 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 3,52,166 ಬಾಲಕಿಯರಲ್ಲಿ 2,82,602 (ಶೇ.80.25) ಬಾಲಕಿಯರು ಉತ್ತೀರ್ಣರಾದರೆ, 3,49,901 ಬಾಲಕರಲ್ಲಿ 2,41,607(ಶೇ.69.05) ಬಾಲಕರು ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶÀಕ್ಕೆ ಹೋಲಿಸಿದರೆ ಈ ಬಾರಿಯೂ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೇ ಭೇಷ್ ಎನಿಸಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ 1,60,260 ಪರೀಕ್ಷೆಗೆ ಹಾಜರಾದವರಲ್ಲಿ 1,19,860 ವಿದ್ಯಾರ್ಥಿಗಳು(ಶೇ.74.89) ಉತ್ತೀರ್ಣರಾದರೆ ನಗರಪ್ರದೇಶದಲ್ಲಿ 5,41,807 ವಿದ್ಯಾರ್ಥಿಗಳ ಪೈಕಿ 4,04,349(ಶೇ.74.63) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ 2,20,305 ವಿದ್ಯಾರ್ಥಿಗಳ ಪೈಕಿ 1,34,876(ಶೇ.61.22) ವಿದ್ಯಾರ್ಥಿಗಳು ಉತ್ತೀರ್ಣರಾದರೆ, ವಾಣಿಜ್ಯ ವಿಭಾಗದಲ್ಲಿ 2,40,146 ವಿದ್ಯಾರ್ಥಿಗಳ ಪೈಕಿ 1,82,246(ಶೇ 75.89) ಹಾಗೂ ವಿಜ್ಞಾನ ವಿಭಾಗದಲ್ಲಿ 2,41,616 ವಿದ್ಯಾರ್ಥಿಗಳ ಪೈಕಿ 2,07,087 (ಶೇ.85.71) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 1,09,509 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿ ಪಡೆದಿದ್ದರೆ, 2,45,315 ವಿದ್ಯಾರ್ಥಿಗಳು ಶೇ.85ಕ್ಕಿಂತ ಕಡಿಮೆ ಹಾಗೂ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದು ಪ್ರಥಮ ದರ್ಜೆ ಪಡೆದಿದ್ದಾರೆ.
90,014 ವಿದ್ಯಾರ್ಥಿಗಳ ಪೈಕಿ ಶೇ.60ಕ್ಕಿಂತ ಕಡಿಮೆ ಹಾಗೂ 50ಕ್ಕಿಂತ ಹೆಚ್ಚು ಅಂಕ ಪಡೆದು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, 77,371 ವಿದ್ಯಾರ್ಥಿಗಳು ಶೇ.50ಕ್ಕಿಂತ ಕಡಿಮೆ ಅಂಕ ಪಡೆದು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶೇ.63.68 ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶೇ.82.30 ಫಲಿತಾಂಶ ಬಂದಿದೆ.
1083 ವಿದ್ಯಾರ್ಥಿಗಳು ಕನ್ನಡ ವಿಭಾಗದಲ್ಲಿ 100ಕ್ಕೆ ನೂರರಷ್ಟು ಅಂಕ ಪಡೆದರೆ, ಇಂಗ್ಲಿಷ್ ವಿಭಾಗದಲ್ಲಿ 2, ಹಿಂದಿ 33, ಉರ್ದು 28, ಸಂಸ್ಕøತ 1250 ನೂರರಷ್ಟು ಅಂಕ ಪಡೆದಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲೇ ಉತ್ತಮ ಫಲಿತಾಂಶ ಬಂದಿದೆ.
42 ಸರ್ಕಾರಿ ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದರೆ ಯಾವುದೇ ಸರ್ಕಾರಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿಲ್ಲ. ಅನುದಾನಿತ 10 ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದರೆ, 5 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
264 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ 100ಕ್ಕೆ ನೂರರಷ್ಟು ಫಲಿತಾಂಶ ಬಂದಿದ್ದರೆ 73 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಒಂದು ವಿಭಜಿತ ಪದವಿಪೂರ್ವ ಕಾಲೇಜಿನಲ್ಲಿ 100ಕ್ಕೆ ನೂರು ಫಲಿತಾಂಶ ಬಂದಿದೆ.
ಉತ್ತರಪತ್ರಿಕೆ ಸ್ಕ್ಯಾನಿಂಗ್ ಪಡೆಯಲು ಏ.27 ಕೊನೆಯ ದಿನವಾಗಿದ್ದರೆ, ಮರುಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ8 ಕೊನೆಯ ದಿನವಾಗಿದೆ.
ಶೇಕಡವಾರು ಫಲಿತಾಂಶ
ಕಲಾ ವಿಭಾಗ – 61.22
ವಾಣಿಜ್ಯ ವಿಭಾಗ -75.89
ವಿಜ್ಞಾನ ವಿಭಾಗ -85.71
ಒಟ್ಟು ಫಲಿತಾಂಶ ಶೇ.74.67
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು -7,02,067
ತೇರ್ಗಡೆಯಾದವರು – 5,24,209
ಉತ್ತರ ಪತ್ರಿಕೆಗಳ ಮೌಲ್ಯಮಾಪನ – 65
ಬಾಲಕಿಯರು – ಶೇ. 80.25
ಬಾಲಕರು – ಶೇ.69.05
ಪ್ರದೇಶವಾರು ಫಲಿತಾಂಶ
ಗ್ರಾಮಾಂತರ ಪ್ರದೇಶ – ಶೇ.74.79
ನಗರಪ್ರದೇಶ -ಶೇ.62.18
ವರ್ಗವಾರು ಫಲಿತಾಂಶ
ಪರಿಶಿಷ್ಟ ಜಾತಿ -ಶೇ.64.44
ಪರಿಶಿಷ್ಟ ಪಂಗಡ – ಶೇ.65.62
ಸಿ-1 ಶೇ.5037
2-3 ಶೇ.77.89
2-ಬಿ ಶೇ.72.42
3-ಎ ಶೇ.82.40
3-ಬಿ ಶೇ.79.50
ಸಾಮಾನ್ಯ ವರ್ಗ -ಶೇ. 79.95
ಮಾಧ್ಯಮವಾರು ಫಲಿತಾಂಶ
ಕನ್ನಡ – ಶೇ.63.68
ಇಂಗ್ಲಿಷ್ -ಶೇ.82.30
ವಿವಿಧ ಶ್ರೇಣಿ
ಉನ್ನತ ಶ್ರೇಣಿ ( ಶೇ.85ಕ್ಕಿಂತ ಹೆಚ್ಚು ) -1,90,509
ಪ್ರಥಮ ದರ್ಜೆ 2,47,315
ದ್ವಿತೀಯ ದರ್ಜೆ – 9,00,14
ತೃತೀಯ ದರ್ಜೆ – 77,371
ವಿಷಯವಾರು 100ಕ್ಕೆ ನೂರು ಅಂಕ
ಕನ್ನಡ – 1,083
ಇಂಗ್ಲಿಷ್ -02
ಹಿಂದಿ -33
ಉರ್ದು -28
ಸಂಸ್ಕøತ -1250
ವಿವಿಧ ಕಾಲೇಜುಗಳ ಫಲಿತಾಂಶ
ಸರ್ಕಾರಿ ಪದವಿಪೂರ್ವ ಕಾಲೇಜು- ಶೇ.63.63
ಅನುದಾನಿತ ಪದವಿಪೂರ್ವ ಕಾಲೇಜು- ಶೇ.71.23
ಅನುದಾನರಹಿತ ಪದವಿಪೂರ್ವ ಕಾಲೇಜು- ಶೇ.83.71
ಕಾರ್ಪೋರೇಷನ್ ಪದವಿಪೂರ್ವ ಕಾಲೇಜು- ಶೇ. 56.05
ವಿಭಜಿತ ಪದವಿಪೂರ್ವ ಕಾಲೇಜು- ಶೇ.80.06
ಶೇ.100ರಷ್ಟು ಫಲಿತಾಂಶ
ಸರ್ಕಾರಿ ಪದವಿಪೂರ್ವ ಕಾಲೇಜು -42
ಅನುದಾನಿತ ಪದವಿಪೂರ್ವ ಕಾಲೇಜು-10
ಅನುದಾನರಹಿತ ಪದವಿಪೂರ್ವ ಕಾಲೇಜು -264
ವಿಭಜಿತ ಪದವಿಪೂರ್ವ ಕಾಲೇಜು -01
ಶೂನ್ಯ ಫಲಿತಾಂಶ
ಅನುದಾನಿತ ಪದವಿಪೂರ್ವ ಕಾಲೇಜು-5
ಅನುದಾನರಹಿತ ಪದವಿಪೂರ್ವ ಕಾಲೇಜು -73
ಯಾವ ದರ್ಜೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಡಿಸ್ಟಿಂಕ್ಷನ್ – 1,09,509
ಪ್ರಥಮ ದರ್ಜೆ – 2,47,315
ದ್ವಿತೀಯ ದರ್ಜೆ – 90,014
ತೃತೀಯ ದರ್ಜೆ – 77,371
ಜಿಲ್ಲಾವಾರು ಫಲಿತಾಂಶ
ದಕ್ಷಿಣ ಕನ್ನಡ – ಶೇ.95.33
ಉಡುಪಿ -ಶೇ.95.24
ಕೊಡಗು – ಶೇ.90.55
ಉತ್ತರ ಕನ್ನಡ – ಶೇ.89.74
ವಿಜಯಪುರ- ಶೇ.84.69
ಚಿಕ್ಕಮಗಳೂರು- ಶೇ.83.28
ಹಾಸನ – ಶೇ.83.14
ಶಿವಮೊಗ್ಗ – ಶೇ.83.13
ಬೆಂಗಳೂರು ಗ್ರಾಮಾಂತರ – ಶೇ.83.04
ಬೆಂಗಳೂರು ದಕ್ಷಿಣ- ಶೇ.82.30
ಬೆಂಗಳೂರು ಉತ್ತರ- ಶೇ.82.25
ಚಾಮರಾಜನಗರ – ಶೇ.81.92
ಮೈಸೂರು- ಶೇ.79.89
ಕೋಲಾರ – ಶೇ.79.20
ಬಾಗಲಕೋಟೆ- ಶೇ.78.79
ಚಿಕ್ಕೋಡಿ- ಶೇ. 78.76
ರಾಮನಗರ- ಶೇ.78.12
ಬೀದರ್ – ಶೇ.78
ಚಿಕ್ಕಬಳ್ಳಾಪುರ – ಶೇ. 77.77
ಮಂಡ್ಯ- ಶೇ.77.47
ದಾವಣಗೆರೆ – ಶೇ.75.72
ಕೊಪ್ಪಳ- ಶೇ.74.8
ತುಮಕೂರು – ಶೇ.74.50
ಹಾವೇರಿ – ಶೇ.74.13
ಬೆಳಗಾವಿ- ಶೇ.73.98
ಧಾರವಾಡ – ಶೇ.73.54
ಬಳ್ಳಾರಿ- ಶೇ.69.55
ಚಿತ್ರದುರ್ಗ- ಶೇ.69.50
ಕಲಬುರಗಿ – ಶೇ.69.37
ಗದಗ- ಶೇ.66.91
ರಾಯಚೂರು- ಶೇ.66.21
ಯಾದಗಿರಿ- ಶೇ.62.98