Mysore
20
overcast clouds
Light
Dark

ಬೆಂಗಳೂರು ಬಂದ್​ಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಓಲಾ-ಊಬರ್

ಬೆಂಗಳೂರು : ರಾಜ್ಯದಲ್ಲಿ ಕಾವೇರಿಗಾಗಿಹೋರಾಟ ಜೋರಾಗಿದೆ. ಬೆಂಗಳೂರು ಬಂದ್, ಕರ್ನಾಟಕ ಬಂದ್ ಯಾವಾಗ ಮಾಡಬೇಕೆಂಬ ಗೊಂದಲದಲ್ಲಿ ಸಂಘಟನೆಗಳು ಸಿಲುಕಿಕೊಂಡಿವೆ. ಈಗಾಗಲೇ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಸೇರಿದಂತೆ ಕೆಲ ಸಂಘಟನೆಗಳು ಈಗಾಗಲೇ ನಾಳೆ ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದ್ದು, ಇದಕ್ಕೆ ಹಲವು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ. ಇದರ ಮಧ್ಯೆ ಆಟೋ, ಓಲಾ ಹಾಗೂ ಊಬರ್ ಸಂಘಟನೆಗಳು ಬೆಂಗಳೂರು ಬಂದ್​ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿವೆ.

ನಾಳೆ ಬೆಂಗಳೂರು ಬಂದ್​ಗೆ ಓಲಾ ಉಬರ್​ ಬೆಂಬಲವಿಲ್ಲ. ಆಟೋ ಸಂಘಟನೆಗಳು ಹಾಗೂ ಓಲಾ, ಉಬರ್ ಸಂಘ ಬೆಂಗಳೂರು ಬಂದ್​ಗೆ ಬೆಂಬಲ ವಾಪಸ್ ಪಡೆದಿದ್ದು, ನಾಳೆ ಬೆಂಗಳೂರಿನಲ್ಲಿ ಓಲಾ ಉಬರ್ ಸೇವೆಗಳು ಯಥಾಸ್ಥಿತಿಯಲ್ಲಿ ಇರುತ್ತವೆ. ಆದರೆ, ಸೆ.29ರ ಕರ್ನಾಟಕ ಬಂದ್​ಗೆ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನು ಕನ್ನಡಪರ ಸಂಘಟನೆಗಳು ಸಹ ಬೆಂಗಳೂರು ಬಂದ್​ಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿವೆ. ಆದರೆ, ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್​ಗೆ ಬೆಂಬಲ ಇದೆ ಎಂದು ಘೋಷಿಸಿವೆ. ಇದರಿಂದ ಬೆಂಗಳೂರು ಹಾಗೂ ಕರ್ನಾಟಕ ಬಂದ್​ ಗೊಂದಲಮಯವಾಗಿದ್ದು, ಸಂಘಟನೆಗಳ ನಡುವೆಯೇ ಗೊಂದಲ ಸೃಷ್ಟಿಯಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ