Mysore
20
broken clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ಭಾರತ್‌ ಹೆಸರು ಅವಶ್ಯಕತೆ ಇಲ್ಲ : ಸಿದ್ದರಾಮಯ್ಯ

ಬೆಂಗಳೂರು : ಭಾರತ್ ಎಂಬ ಹೊಸ ಹೆಸರು ಅವಶ್ಯಕತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರ ಸರ್ಕಾರ ಇಂಡಿಯಾ ಬದಲು ಭಾರತ್‌ ಎಂಬ ಹೆಸರನ್ನು ಮರು ನಾಮಕರಣ ಮಾಡಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಿಪಬ್ಲಿಕ್ ಆಫ್ ಇಂಡಿಯಾ ಎಂಬ ಪದ ಸಂವಿಧಾನದಲ್ಲಿ ಹೇಳಲಾಗಿದೆ. ಇಂಡಿಯಾ ಎಂಬ ಪದವನ್ನು ನಮ್ಮ ದೇಶ ಒಪ್ಪಿಕೊಂಡಿದೆ. ಹೀಗಾಗಿ ಭಾರತ್ ಎಂಬ ಹೊಸ ಹೆಸರು ಅವಶ್ಯಕತೆ ಇಲ್ಲ ಎಂದು ಉತ್ತರಿಸಿದರು.

ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಿಎಂ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆ ಸಂಬಂಧ ಪ್ರಶ್ನೆಗೆ ಸಿಎಂ ಉತ್ತರಿಸಲು ನಿರಾಕರಿಸಿದರು. ಪ್ರಶ್ನೆ ಕೇಳುತ್ತಲೇ ಪ್ರತಿಕ್ರಿಯೆ ನೀಡದೇ ತೆರಳಿದ ಸಿದ್ದರಾಮಯ್ಯ ತೆರಳಿದರು.

ಬಿಜೆಪಿ ಕೇಂದ್ರ ಸರ್ಕಾರವು ದೇಶದ ಹೆಸರನ್ನು ಇಂಡಿಯಾ ಬದಲಿಗೆ ರಿಪಬ್ಲಿಕ್‌ ಆಫ್‌ ಭಾರತ್‌ ಎಂದು ಮರುನಾಮಕರಣ ಮಾಡುವ ಹೊಸ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ