Mysore
22
overcast clouds
Light
Dark

ರಾಷ್ಟ್ರಪತಿ ಭೇಟಿಯಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಮೋದಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ‌ಮುರ್ಮು ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಧಾನಿ ಹುದ್ದೆಗೆ ಇಂದು (ಜುನ್‌.5) ರಾಜೀನಾಮೆ ಸಲ್ಲಿಸಿದರು.

ಲೋಕಸಭಾ ಚುಣಾವಣೆ ಹೈಡ್ರಾಮ ನಡುವೆ ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ಪ್ರಧಾನಿಯಾಗಿ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

292 ಸಂಖ್ಯಾಬಲ ಹೊಂದಿರುವ ಎನ್‌ಡಿಎ ಮಿತ್ರಪಕ್ಷವೂ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಲಿದ್ದಾರೆ. ಇತ್ತ ಐಎನ್‌ಡಿಐಎ 234 ಸ್ಥಾನ ಪಡೆದು ವಿರೋಧ ಪಕ್ಷವಾಗಿ ಆಡಳಿತ ನಡೆಸಲಿದೆ.

ಜೂನ್‌.8 ರಂದು ರಾತ್ರಿ 8 ಗಂಟೆಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರ ಜತೆಗೆ ಅಮಿತ್‌ ಶಾ ಸೇರಿದಂತೆ ಹಲವು ನಾಯಕರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.