Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಇಬ್ಬರು ಪುಟ್ಟ ಮಕ್ಕಳೊಡನೆ ಆತ್ಮಹತ್ಯೆಗೆ ಶರಣಾದ ತಾಯಿ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿಯ ಹೊರ ವಲಯದ ಪಂಪ್ ಸೆಟ್ ಜಮೀನಿನಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಡನೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಗುರುವಾರ ರಾತ್ರಿ ನಡೆದಿದೆ.

ಗ್ರಾಮದ ಧನಂಜಯ್ ಎಂಬುವರ ಪತ್ನಿ ಮೇಘ (24), ಮಕ್ಕಳಾದ ಪುನ್ವಿತಾ (6), ಮನ್ವಿತಾ (3) ಸಾವಿಗೆ ಶರಣಾದವರು.

ಪತಿ ಧನಂಜಯ್ ರಾತ್ರಿ ಗ್ರಾಮದಲ್ಲಿ ನಡೆದಿದ್ದ ಅಮಾವಾಸ್ಯೆ ಪೂಜೆಯಲ್ಲಿ ಭಾಗಿಯಾಗಿದ್ದರು. ಅತ್ತೆ ನಿರ್ಮಲಮ್ಮ, ಮಾವ ಮಲ್ಲಿಕಾರ್ಜುನ ಕಳೆದ ಒಂದು ವಾರದಿಂದ ಬೇರೊಬ್ಬರ ತೋಟದಲ್ಲಿ ವಾಸವಿದ್ದರು. ಯಾರು ಇಲ್ಲದ ವೇಳೆ ಇಬ್ಬರು ಮಕ್ಕಳಿಗೆ ಮೊದಲು ನೇಣು ಹಾಕಿ ನಂತರ. ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಭಿ ಉರುಫ್ ಧನಂಜಯ ಎಂಬಾತ ತನ್ನ ತಾಯಿ ನಿರ್ಮಲಮ್ಮ, ತಂದೆ ಮಲ್ಲಿಕಾರ್ಜುನ ಮತ್ತು ತಮ್ಮ ಪುಟ್ಟು ಜೊತೆಗೆ ಸೇರಿ ತನ್ನ ಹೆಂಡತಿ ಮೇಘ ಮತ್ತು ಇಬ್ಬರೂ ಹೆಣ್ಣು ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದಿದ್ದಾನೆ ಎಂದು ಮೃತ ಮೇಘಳ ಸಂಬಂಧಿಕರು ಆರೋಪಿಸಿದ್ದಾರೆ.

ಅಭಿ ಉರುಫ್ ಧನಂಜಯ ಮತ್ತು ಮೇಘ ಅವರ ಮದುವೆಯಾಗಿ ಎಂಟು ವರ್ಷಗಳಾಗಿತ್ತು. ಪ್ರಾರಂಭದ ದಿನಗಳಿಂದಲೂ ಕುಟುಂಬದವರೆಲ್ಲಾ ಸೇರಿ ಚಿತ್ರಹಿಂಸೆ ನೀಡುತ್ತಿದ್ದರು. ಆದರೂ ಮೇಘಳ ಕುಟುಂಬದವರು ಮಗಳು ಗಂಡನ ಮನೆಯಲ್ಲಿಯೇ ಗೌರವದಿಂದ ಜೀವನ ‌‌ಸಾಗಿಸಬೇಕು ಎಂದು ಬುದ್ಧಿ ಮಾತುಗಳನ್ನು ಹೇಳಿ ಗಂಡನ ಮನೆಯಲ್ಲಿಯೇ ಇರಿಸಿದ್ದರು.

ಗುರುವಾರ ಬೆಳಿಗ್ಗೆಯಿಂದಲೂ ಮನೆಯಲ್ಲಿ ಗಲಾಟೆ ನಡೆದಿತ್ತು ಎಂಬುದು ಮೇಘಳ ಮೊಬೈಲ್ ಅಲ್ಲಿ ರೇಕಾರ್ಡ್ ಆಗಿರುವ ವಿಡಿಯೋ ದಾಖಲೆ ಪೊಲೀಸರಿಗೆ ದೊರತಿದ್ದೂ, ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ, ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ ಪಿ ಲಕ್ಷ್ಮಯ್ಯ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ವನರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮೃತರ ತಂದೆ ಅಳಿಯನ ಕುಟುಂಬದವರನ್ನು ಬಂಧಿಸಿ, ನಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡದೇ ಪ್ರತಿಭಟನೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ, ಪೊಲೀಸ್ ಇನ್ಸ್ ಪೆಕ್ಟರ್ ವನರಾಜು ಭೇಟಿ ನೀಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ