ರಿಷಭ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ಭರ್ಜರಿ ಕಮಾಯಿ ಮಾಡಿತು. 400+ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಈ ಚಿತ್ರ ವಿಮರ್ಶಕರಿಂದಲೂ ಮೆಚ್ಚುಗೆ ಪಡೆಯಿತು.
ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಡಬ್ ಆಗಿದ್ದ ಈ ಚಿತ್ರ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಯಿತು. ಅನೇಕ ಸಿನಿಮೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಈಗ ‘ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವ 2023’ರಲ್ಲಿ ಹಲವು ವಿಭಾಗಗಳಲ್ಲಿ ಈ ಸಿನಿಮಾ ಆಯ್ಕೆ ಆಗಿದೆ ಅನ್ನೋದು ವಿಶೇಷ.
ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವದ 14ನೇ ಆವೃತ್ತಿಯ ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ವಿದೇಶದಲ್ಲಿ ನಡೆಯುವ ಭಾರತದ ಸಿನಿಮೋತ್ಸವ ಎನ್ನುವ ಕಾರಣಕ್ಕೂ ಇದು ವಿಶೇಷ ಎನಿಸಿಕೊಂಡಿದೆ. ಇಲ್ಲಿ ಪ್ರಶಸ್ತಿ ಗೆಲ್ಲಬೇಕು ಎಂಬುದು ಅನೇಕರ ಕನಸಾಗಿರುತ್ತದೆ. ಈಗ ‘ಕಾಂತಾರ’ ಚಿತ್ರಕ್ಕೆ ಅಂಥದ್ದೊಂದು ಅವಕಾಶ ಸಿಕ್ಕಿದೆ.
ಅತ್ಯುತ್ತಮ ಸಿನಿಮಾ
ಕಾಂತಾರ-ಕನ್ನಡ
ಭೇಡಿಯಾ-ಹಿಂದಿ
ಬ್ರಹ್ಮಾಸ್ತ್ರ-ಹಿಂದಿ
ಡಾರ್ಲಿಂಗ್ಸ್-ಹಿಂದಿ
ಜೋಗಿ-ಪಂಜಾಬಿ
ಮೋನಿಕಾ, ಓ ಮೈ ಡಾರ್ಲಿಂಗ್-ಹಿಂದಿ
ಪಠಾಣ್-ಹಿಂದಿ
ಪೊನ್ನಿಯಿನ್ ಸೆಲ್ವನ್ 1,2-ತಮಿಳು
ಸೀತಾ ರಾಮಂ-ತೆಲುಗು
ಬೆಸ್ಟ್ ಇಂಡಿಪೆಂಡೆಂಟ್ ಫಿಲ್ಮ್
ಆತ್ಮ ಪಾಫ್ಲೆಟ್-ಮರಾಠಿ
ಆಗ್ರ-ಹಿಂದಿ
ಆಲ್ ಇಂಡಿಯಾ ರ‍್ಯಾಂಕ್ -ಹಿಂದಿ
ಫ್ಯಾಮಿಲಿ-ಮಲಯಾಳಂ
ಗುಲ್ಮೊಹರ್-ಹಿಂದಿ
ಹದಿನೇಳೆಂಟು-ಕನ್ನಡ
ಪಿನ್ಕೋಡ್-ಹಿಂದಿ
ದಿ ಸ್ಟೋರಿ ಟೆಲ್ಲರ್-ಹಿಂದಿ
ಜ್ವಿಗಾಟೋ-ಹಿಂದಿ
ಅತ್ಯುತ್ತಮ ನಿರ್ದೇಶಕ
ಅನಂತ್ ಮಹದೇವನ್- ದಿ ಸ್ಟೋರಿಟೆಲ್ಲರ್
ಅನುರಾಗ್ ಕಶ್ಯಪ್-ಕೆನ್ನಡಿ
ಆಶಿಶ್ ಅವಿನಾಶ್ ಬೆಂಡೆ-ಆತ್ಮ ಪಾಂಫ್ಲೆಟ್
ಕಣು ಬೆಹ್ಲ್-ಆಗ್ರ
ಮಣಿ ರತ್ನಮ್- ಪೊನ್ನಿಯಿನ್ ಸೆಲ್ವನ್1ಆ್ಯಂಡ್2
ನಂದಿತಾ ದಾಸ್- ಜ್ವಿಗಾಟೋ
ರೀಮಾ ದಾಸ್-ಟೋರಾಸ್ ಹಸ್ಬಂಡ್
ಸಿದ್ದಾರ್ಥ್ ಆನಂದ್-ಪಠಾಣ್
ಅತ್ಯುತ್ತಮ ನಟ
ರಿಷಬ್ ಶೆಟ್ಟಿ-ಕಾಂತಾರ
ದುಲ್ಖರ್ ಸಲ್ಮಾನ್-ಸೀತಾ ರಾಮಂ
ಕಪಿಲ್ ಶರ್ಮಾ- ಜ್ವಿಗಾಟೋ
ಮನೋಜ್ ಬಾಜ್ಪಾಯೀ-ಜೋರಂ
ಮನೋಜ್ ಬಾಜ್ಪಾಯೀ-ಗುಲ್ಮೊಹರ್
ಮೋಹಿತ್ ಅಗರ್ವಾಲ್-ಆಗ್ರ
ಪರೇಶ್ ರಾವಲ್-ದಿ ಸ್ಟೋರಿಟೆಲ್ಲರ್
ರಾಜ್ಕುಮಾರ್ ರಾವ್-ಮೋನಿಕಾ, ಓ ಮೈ ಡಾರ್ಲಿಂಗ್
ಶಾರುಖ್ ಖಾನ್-ಪಠಾಣ್
ವಿಜಯ್ ವರ್ಮಾ-ಡಾರ್ಲಿಂಗ್ಸ್
ವಿಕ್ರಮ್- ಪೊನ್ನಿಯಿನ್ ಸೆಲ್ವನ್ 1 ಆ್ಯಂಡ್ 2
ಅತ್ಯುತ್ತಮ ನಟಿ
ಐಶ್ವರ್ಯಾ ರೈ- ಪೊನ್ನಿಯಿನ್ ಸೆಲ್ವನ್ 1 ಆ್ಯಂಡ್ 2
ಅಕ್ಷತಾ ಪಾಂಡವಪುರ-ಕೋಳಿ ಎಸ್ರು
ಆಲಿಯಾ ಭಟ್-ಡಾರ್ಲಿಂಗ್ಸ್
ಭೂಮಿ ಪಡ್ನೇಕರ್-ಭೀಡ್
ಕಾಜೋಲ್-ಸಲಾಂ ವೆಂಕಿ
ಮೃಣಾಲ್ ಠಾಕೂರ್-ಸೀತಾ ರಾಮಂ
ನೀನಾ ಗುಪ್ತಾ-ವಧ್
ರಾಣಿ ಮುಖರ್ಜೀ- ಮಿಸಸ್ ಚಟರ್ಜೀ Vs ನಾರ್ವೇ
ಸಾಯಿ ಪಲ್ಲವಿ-ಗಾರ್ಗಿ
ಅತ್ಯುತ್ತಮ ವೆಬ್ ಸೀರಿಸ್
ದಹಾಡ್
ಡೆಲ್ಲಿ ಕ್ರೈಮ್ ಸೀಸನ್ 2
ಫರ್ಜಿ
ಜುಬ್ಲೀ
ಶಿ ಸೀಸನ್ 2
ದಿ ಬ್ರೋಕನ್ ನ್ಯೂಸ್