Mysore
27
overcast clouds

Social Media

ಗುರುವಾರ, 14 ಮೇ 2026
Light
Dark

ಮಂಗಳೂರು ಸ್ಫೋಟ: ಮೈಸೂರಿನಲ್ಲಿ ಶಂಕಿತನ ಸಹಚರ ವಶಕ್ಕೆ

ಮೈಸೂರು: ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರ ಶಾರಿಖ್ ಜೊತೆ ವಾಸವಿದ್ದ ಸಹಚರನನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. 

ಶಂಕಿತ ಭಯೋತ್ಪಾಧಕ ಶಾರಿಖ್‌ನೊಂದಿಗೆ ಒಡನಾಟ ಹೊಂದಿದ್ದ ಆತನ ಸಹಚರನನ್ನು ಮೇಟಗಳ್ಳಿಯ ಲೋಕನಾಯಕನಗರದ ರೂಮ್‌ನಲ್ಲೇ ಪೊಲೀಸರು ವಶಕ್ಕೆ ಪಡೆದು, ಮೇಟಗಳ್ಳಿ ಠಾಣೆಯಲ್ಲಿ ವಿಚಾರಣೆ ನಡೆಸಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಸಭ್ಯನಂತೆ ಇದ್ದ ಉಗ್ರ

ಶಂಕಿತ ಉಗ್ರ ತಾನಿದ್ದ ರೂಮ್‌ನಿಂದ ಹೊರ ಬಂದರೂ ನೆರೆಹೊರೆಯವರೊಂದಿಗೆ ಮಾತನಾಡುತ್ತಿರಲಿಲ್ಲ. ನೋಡಲು ವಿದ್ಯಾರ್ಥಿಯಂತೆ ಹಾಗೂ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುವವರಂತೆ ಓಡಾಡುತ್ತಿದ್ದ. ಸಂಜೆ ಮನೆ ಸೇರಿದರೆ ಹೊರಗೆ ಬರುತ್ತಿರಲಿಲ್ಲ. ಸರಿಯಾಗಿ ಬಾಡಿಗೆ ನೀಡುತ್ತಿರಲಿಲ್ಲ ಎಂದು ಸ್ಥಳೀಯರು ಮತ್ತು ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಪೊಲೀಸ್ ಆಯುಕ್ತ ರಮೇಶ್ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್, ಸಿಸಿಬಿ ಬೆಂಗಳೂರಿಂದ ಬಾಂಬ್ ನಿಷ್ಕ್ರೀಯ ದಳ, ಭಯೋತ್ಪಾಧಕ ನಿಗ್ರಹ ದಳದ ಸಿಬ್ಬಂದಿ

ಸೇರಿದಂತೆ ವಿವಿಧ ಘಟಕಗಳ ಪೊಲೀಸರು, ಹಿರಿಯ ಅಧಿಕಾರಿಗಳು ಭಾನುವಾರ ಮುಂಜಾನೆ 3 ಗಂಟೆಯಿಂದ ಮಧ್ಯಾಹ್ನ 3ಗಂಟೆವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. ಶೋಧನೆ ಮಾಡುವ ಸಂದರ್ಭದಲ್ಲಿ ಪೊಲೀಸರು ಸ್ಥಳೀಯರು ಸೇರಿದಂತೆ ಯಾರೊಬ್ಬರೂ ಓಡಾಡದಂತೆ ಮನೆ ಇರುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರು. ಇದರಿಂದ ಕೆಲಕಾಲ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!