Mysore
23
overcast clouds
Light
Dark

ಲೋಕಸಭಾ ಚುನಾವಣೆ: ಎಕ್ಸಿಟ್‌ಪೋಲ್‌ ಸಮೀಕ್ಷೆ, ಯಾರಿಗೆ ಎಷ್ಟು ಸ್ಥಾನ

ಮೈಸೂರು: ಲೋಕಸಭಾ ಚುನಾವಣೆಯ ಕೊನೆಯ ಹಂತದ ಚುನಾವಣೆ ಇಂದು(ಜೂ.1) ಮುಕ್ತಾಯವಾಗಿದೆ. ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ವಿವಿಧ ಸಂಸ್ಥೆಗಳು ಮತ್ತು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ನಡೆಸಿವೆ. ಸತತ ಮೂರನೇ ಬಾರಿ ಎನ್‌ಡಿಎ ಸರ್ಕಾರ ರಚಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆಡಳಿತ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟಗಳೂ ಎಷ್ಟು ಸ್ಥಾನ ಗಳಿಸಲಿವೆ ಎಂಬ ಮಾಹಿತಿ ಇಲ್ಲಿದೆ.

ಆಜ್‌ತಕ್‌, ಎಬಿಸಿ ನ್ಯೂಸ್‌, ಝೀ ನ್ಯೂಸ್‌, ಇಂಡಿಯಾ ಟಿವಿ, ಸಿಎನ್‌ಎಕ್ಸ್‌, ನ್ಯೂಎಕ್ಸ್‌, ನ್ಯೂಸ್‌18, ಟೈಮ್ಸ್‌ ನೌ ಸೇರಿದಂತೆ ಅನೇಕ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ. ಈ ಸಮೀಕ್ಷೆಗಳು ಕರ್ನಾಟಕದಲ್ಲಿ ಎನ್‌ಡಿಎ ಒಕ್ಕೂಟ ಹೆಚ್ಚಿನ ಸ್ಥಾನಗಳನ್ನೂ ಗೆಲ್ಲುವುದಾಗಿ ಹೇಳಿವೆ.

ಎಕ್ಸಿಟ್‌ ಪೋಲ್‌ ಸಮೀಕ್ಷೆ ಇಂತಿದೆ.

ಲೋಕ್‌ ಪೋಲ್
ಎನ್ ಡಿಎ: 325-335
ಇಂಡಿಯಾ ಕೂಟ: 155-165
ಇತರೆ: 48-55

ಮ್ಯಾಟ್ರೀಜ್‌ ಸಮೀಕ್ಷೆ
ಎನ್ ಡಿಎ: 353-336
ಇಂಡಿಯಾ ಕೂಟ: 118-133
ಇತರೆ: 43-48

ಇಂಡಿಯಾ ನ್ಯೂಸ್
ಎನ್ ಡಿಎ: 371
ಇಂಡಿಯಾ ಕೂಟ: 125
ಇತರೆ: 47

ರಿಪಬ್ಲಿಕ್‌ ಟಿವಿ-ಪಿ ಮಾರ್ಕ್‌
ಎನ್ ಡಿಎ: 359
ಇಂಡಿಯಾ ಕೂಟ: 154
ಇತರೆ: 30

ಜನ್‌ ಕೀ ಬಾತ್‌
ಎನ್ ಡಿಎ: 362-392
ಇಂಡಿಯಾ ಕೂಟ: 141-161
ಇತರೆ:10-20

ಕರ್ನಾಟಕದ ಸಮೀಕ್ಷೆ

ಒಟ್ಟು 28 ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದವು. ಇದೀಗ ಕರ್ನಾಟಕ ಸಮೀಕ್ಷ ಕೂಡ ಹೊರಬಿದ್ದಿದೆ. ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವುದಾಗಿ ಸಮೀಕ್ಷೆಗಳು ಹೇಳುತ್ತಿವೆ.

ಸಿ ವೋಟರ್‌
ಬಿಜೆಪಿ: 23
ಕಾಂಗ್ರೆಸ್:‌ 3-5
ಜೆಡಿಎಸ್:‌ 2

ಇಂಡಿಯಾ ಟಿವಿ:
ಬಿಜೆಪಿ: 18-22
ಜೆಡಿಎಸ್:‌ 1-3
ಕಾಂಗ್ರೆಸ್:‌ 4-8

ಇಂಡಿಯಾ ಟುಡೇ:
ಬಿಜೆಪಿ: 20-22
ಜೆಡಿಎಸ್: 2-3
ಕಾಂಗ್ರೆಸ್:‌ 3-7