Mysore
27
broken clouds
Light
Dark

ಮತದಾನ ಮಾಡಿದ ಮೊದಲ ನಟಿ ಲೀಲಾವತಿ

ನೆಲಮಂಗಲ: ಎಲ್ಲಾ ಪಕ್ಷಗಳು ಮತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಸ್ಟಾರ್‌ ನಟ, ನಟಿಯರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡದ ಹಿರಿಯ ನಟಿ ಲೀಲಾವತಿ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಮೇ.10 ರಂದು ಮತದಾನ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ಆಯೋಗ ಹಿರಿಯ ನಾಗರೀಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಲೀಲಾವತಿ ಮತದಾನ ಮಾಡಿದ್ದಾರೆ. ಈ ಬಾರಿಯ ಮತದಾನ ಮಾಡಿದ ನಟಿ ಎಂಬ ಹೆಗ್ಗಳಿಕೆಗೆ ಲೀಲಾವತಿ ಪಾತ್ರರಾಗಿದ್ದಾರೆ.

80 ವರ್ಷ ತುಂಬಿದ ನಾಗರೀಕರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ಇದರ ಅಡಿಯಲ್ಲಿ ಹಿರಿಯ ನಟಿ ಲೀಲಾವತಿ, ನೆಲಮಂಗಲ ತಾಲೂಕಿನ ಮೈಲನ ಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ. ಪುತ್ರ ವಿನೋದ್‌ ರಾಜ್‌ ಸಹಾಯದಿಂದ ಮನೆಯಲ್ಲಿಯೇ ಮತ ಚಲಾಯಿಸಿದ್ದಾರೆ.

ಮತದಾನ ನಂತರ ಮಾತನಾಡಿ, ಚುನಾವಣಾ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತ ಹಿರಿಯರಿಗೆ ಅನುಕೂಲವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಎಂದು ಹೇಳಿದರು. ಮತದಾನ ಮನೆಯಲ್ಲೇ ಮಾಡಿದ್ದು ಸಂಭ್ರಮ ತಂದಿದೆ ಎಂದಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ