ಕಲಬುರಗಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ ಪ್ರಕರಣದಲ್ಲಿನ ಆರೋಪಿ ಆರ್.ಡಿ. ಪಾಟೀಲ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂರು ದಿನಗಳ ಹಿಂದೆ ಕಲಬುರಗಿಯ ವಾರ್ದಾ ಅಪಾರ್ಟ್‌ಮೆಂಟ್ ಒಂದರ ಗೋಡೆ ಹಾರಿ ಪರಾರಿಯಾಗಿದ್ದ ಆರೋಪಿಯನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ಕಲಬುರಗಿ ಗೆ ಕರೆತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಗೌಪ್ಯ ಜಾಗದಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನ.10 ರಂದು ಜಾಮೀನು ಅರ್ಜಿ ವಿಚಾರಣೆಗೊಳಪಡಿಸಿ, ವಿಚಾರಣೆಯನ್ನು ಮುಂದಕ್ಕೆ ಹಾಕಿತ್ತು. ಗೌಪ್ಯ ಸ್ಥಳ ಭೇದಿಸಿದ ಪೊಲೀಸರು ಆರ್.ಡಿ ಪಾಟೀಲ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ.29 ರಂದು ನಡೆಸಲಾಗಿದ್ದ ಕೆಇಎ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬ್ಲೂಟೂತ್ ಬಳಿ ಉತ್ತರ ಬೆರಯುವಾಗ ಸಿಕ್ಕಿಬಿದ್ದಿದ್ದು, ಅದೊಂದು ದೊಡ್ಡ ಜಾಲವನ್ನೇ ಬಹಿರಂಗಪಡಿಸಿತ್ತು. ಈ ಜಾಲದ ಮುಖ್ಯ ರುವಾರಿ ಆರ್.ಟಿ.ಪಾಟೀಲ್ ಎಂಬುದು ಖಚಿತವಾಯಿತು. ಈ ಆರೋಪಿ ಪಿಎಸ್‌ಐ ಹಗರಣದಲ್ಲಿಯೂ ಶಾಮೀಲಾಗಿದ್ದು ಜಾಮೀನಿನ ಮೇಲೆ ಹೊರ ಬಂದಿದ್ದ.