Mysore
21
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

IPL Retention 2024: ಹಸರಂಗ, ಪಟೇಲ್‌ ಸೇರಿ 11 ಆಟಗಾರರನ್ನು ಕೈಬಿಟ್ಟ ಆರ್‌ಸಿಬಿ!

ಮುಂದಿನ ಮಾರ್ಚ್‌ ತಿಂಗಳಿನಲ್ಲಿ ಆರಂಭವಾಗಲಿರುವ 17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಲುವಾಗಿ ಡಿಸೆಂಬರ್‌ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ. ಇನ್ನು ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ ಹಾಗೂ ಯಾವ ಆಟಗಾರರನ್ನು ಬಿಡುಗಡೆಗೊಳಿಸುತ್ತೆ ಎಂಬುದನ್ನು ಪ್ರಕಟಿಸಲು ಇಂದು ( ನವೆಂಬರ್‌ 26 ) ಸಂಜೆ 4 ಗಂಟೆಯೇ ಡೆಡ್‌ಲೈನ್‌ ಆಗಿತ್ತು.

ಈ ಸಮಯದ ಗಡುವು ಈಗ ಮುಕ್ತಾಯವಾಗಿದ್ದು, ಯಾವ ತಂಡಗಳು ಯಾವ ಆಟಗಾರರನ್ನು ರಿಟೈನ್‌ ಮಾಡಿಕೊಂಡಿವೆ ಹಾಗೂ ಯಾವ ಆಟಗಾರರನ್ನು ರಿಲೀಸ್‌ ಮಾಡಿವೆ ಎಂಬ ಮಾಹಿತಿ ಹೊರಬಿದ್ದಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ನೀಡಿದೆ ಹಾಗೂ ಯಾವೆಲ್ಲಾ ಆಟಗಾರರಿಗೆ ಕೊಕ್‌ ಕೊಟ್ಟಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಉಳಿಸಿಕೊಂಡ ಆಟಗಾರರು: ಫಾಫ್‌ ಡು ಪ್ಲೆಸಿಸ್‌ ( ನಾಯಕ ), ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ರಜತ್‌ ಪಟಿದಾರ್‌, ಅನುಜ್‌ ರಾವತ್‌, ದಿನೇಶ್‌ ಕಾರ್ತಿಕ್‌, ಸುಯಶ್‌ ಪ್ರಭುದೇಸಾಯಿ, ವಿಲ್‌ ಜಾಕ್ಸ್‌, ಮಹಿಪಾಲ್‌ ಲೊಮ್ರರ್‌, ಕರಣ್‌ ಶರ್ಮಾ, ಮನೋಜ್‌ ಬಂಡಂಗೆ, ವೈಶಖ್‌ ವಿಜಯ್‌ ಕುಮಾರ್‌, ಆಕಾಶ್‌ ದೀಪ್‌, ಮೊಹಮ್ಮದ್‌ ಸಿರಾಜ್‌, ರೀಸಿ ಟೊಪ್ಲಿ, ಹಿಮಾನ್ಶು ಶರ್ಮಾ, ರಜನ್‌ ಕುಮಾರ್‌ ಹಾಗೂ ಮಯಾಂಕ್‌ ದಾಗರ್‌. ( ಮಯಾಂಕ್‌ ದಾಗರ್‌ ಅವರನ್ನು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದಿಂದ ಶಹಬಾಜ್‌ ಅಹ್ಮದ್‌ ಬದಲಾಗಿ ವಿನಿಮಯ ಮಾಡಿಕೊಳ್ಳಲಾಗಿದೆ )

ಬಿಡುಗಡೆಗೊಂಡ ಆಟಗಾರರು: ವನಿಂದು ಹಸರಂಗ, ಹರ್ಷಲ್‌ ಪಟೇಲ್‌, ಜೋಶ್‌ ಹೇಜಲ್‌ವುಡ್‌, ಫಿನ್‌ ಅಲೆನ್‌, ಮೈಖೆಲ್‌ ಬ್ರೇಸ್‌ವೆಲ್‌, ಡೇವಿಡ್‌ ವಿಲ್ಲಿ, ವೇಯ್ನ್‌ ಪಾರ್ನೆಲ್‌, ಸೋನು ಯಾದವ್, ಅವಿನಾಶ್‌ ಸಿಂಗ್‌, ಸಿದ್ಧಾರ್ಥ್‌ ಕೌಲ್‌ ಹಾಗೂ ಕೇದಾರ್‌ ಜಾಧವ್.‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!