Mysore
25
overcast clouds
Light
Dark

ಚುನಾವಣಾ ಇತಿಹಾಸದಲ್ಲೇ ದಾಖಲೆಯ ನೋಟಾ ಮತಗಳಿಗೆ ಸಾಕ್ಷಿಯಾದ ಇಂದೋರ್ ಕ್ಷೇತ್ರ

ಇಂದೋರ್: ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ನೋಟಾ ಮತಗಳ ಚಲಾವಣೆಗೆ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಿದೆ.

ಇಂದೋರ್‌ನಲ್ಲಿ 2.18 ಲಕ್ಷ ಜನರು NONE OF THE ABOVE (NOTA) ‘ಮೇಲಿನ ಯಾರೂ ಅಲ್ಲ’ ಆಯ್ಕೆಯನ್ನು ಒತ್ತಿದ್ದಾರೆ. ಇದರೊಂದಿಗೆ ಚುನಾವಣಾ ಇತಿಹಾಸದಲ್ಲೇ ಕ್ಷೇತ್ರವೊಂದರಲ್ಲಿ ಅತಿ ಹೆಚ್ಚು ನೋಟಾ ಮತ ಚಲಾವಣೆಯಾದಂತಾಗಿದೆ. ವಿಪರ್ಯಾಸ ಎಂದರೆ ಈ ಕ್ಷೇತ್ರದಲ್ಲಿ ನೋಟಾ ಎರಡನೇ ಸ್ಥಾನ ಪಡೆದಿರುವುದು ಆಶ್ಚರ್ಯವಾಗಿದೆ.

ಬಿಜೆಪಿ ಅಭ್ಯರ್ಥಿ ಶಂಕರ್ ಲಲ್ವಾನಿ ಅವರು 12,26,571 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಬಹುಜನ ಸಮಾಜವಾದಿ ಪಕ್ಷ ಸಂಜಯ್ ಅವರು 51,659 ಮತಗಳನ್ನು ಪಡೆದಿದ್ದಾರೆ. ಸಂಜಯ್ ಅವರಿಗಿಂತಲೂ ಹೆಚ್ಚು (2,18,674) ನೋಟಾ ಮತಗಳು ಚಲಾವಣೆಯಾಗಿರುವುದು ವಿಶೇಷ ಹಾಗೂ ಆಶ್ಚರ್ಯಕರ.

2019ರಲ್ಲಿ ಬಿಹಾರದ ಎಸ್‌ಸಿ ಮೀಸಲು ಕ್ಷೇತ್ರ ಗೋಪಾಲ್‌ಗಂಜ್‌ನಲ್ಲಿ 51,660 ನೋಟಾ ಮತಗಳು ದಾಖಲಾಗಿದ್ದವು. ಇದು ಈವರೆಗಿನ ದಾಖಲೆಯಾಗಿತ್ತು. 2014 ರಲ್ಲಿ ತಮಿಳುನಾಡಿನ ನೀಲಗಿರಿ ಕ್ಷೇತ್ರದಲ್ಲಿ 46,559 ನೋಟಾ ಮತಗಳು ಚಲಾವಣೆಗೊಂಡಿದ್ದವು.