Mysore
25
overcast clouds

Social Media

ಮಂಗಳವಾರ, 24 ಜೂನ್ 2025
Light
Dark

IND vs SA 2nd Test: ಎರಡನೇ ಇನ್ನಿಂಗ್ಸ್‌ನಲ್ಲಿ ದ.ಆಫ್ರಿಕಾ 176 ರನ್‌ಗೆ ಆಲ್‌ಔಟ್;‌ ಭಾರತಕ್ಕೆ 79 ರನ್‌ ಗುರಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಮುಕ್ತಾಯಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ ಕೇವಲ 55 ರನ್‌ಗೆ ಆಲ್‌ಔಟ್‌ ಆಗಿದ್ದ ದಕ್ಷಿಣ ಆಫ್ರಿಕಾ ಬಳಿಕ ಭಾರತ ತಂಡವನ್ನು 153 ರನ್‌ಗಳಿಗೆ ಆಲ್‌ ಔಟ್‌ ಮಾಡಿತ್ತು.

ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ 98 ರನ್‌ಗಳ ಮುನ್ನಡೆಯನ್ನು ಸಾಧಿಸಿತ್ತು. ಸದ್ಯ ತನ್ನ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಅನ್ನು ಮುಗಿಸಿರುವ ಹರಿಣಗಳು 36.5 ಓವರ್‌ಗಳಲ್ಲಿ 176 ರನ್‌ಗೆ ಆಲ್‌ಔಟ್‌ ಆಗಿದ್ದು, 78 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡು ಭಾರತಕ್ಕೆ ಗೆಲ್ಲಲು 79 ರನ್‌ಗಳ ಗುರಿಯನ್ನು ನೀಡಿದೆ. ಮೊದಲ ಇನ್ನಿಂಗ್ಸ್‌ ರೀತಿ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಸಹ ದಕ್ಷಿಣ ಆಫ್ರಿಕಾ ತೀರ ಅಲ್ಪಮೊತ್ತಕ್ಕೆ ಆಲ್‌ಔಟ್‌ ಆಗುವುದನ್ನು ಏಡನ್‌ ಮಾರ್ಕ್ರಮ್‌ ತಮ್ಮ ಅಮೋಘ ಶತಕದ ಆಟದಿಂದ ತಪ್ಪಿಸಿದರು. ಮಾರ್ಕ್ರಮ್‌ 103 ಎಸೆತಗಳಲ್ಲಿ 106 ರನ್‌ ಗಳಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ಸಿರಾಜ್‌ 6 ವಿಕೆಟ್‌ ಪಡೆದು ಉತ್ತಮ ಪ್ರದರ್ಶನ ನೀಡಿದರೆ, ಈ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ 6 ವಿಕೆಟ್‌ ಪಡೆದು ಗಮನ ಸೆಳೆದರು. ಇನ್ನುಳಿದಂತೆ ಮುಖೇಶ್‌ ಕುಮಾರ್‌ 2 ವಿಕೆಟ್‌, ಮೊಹಮ್ಮದ್‌ ಸಿರಾಜ್‌ ಹಾಗೂ ಪ್ರಸಿದ್ಧ್‌ ಕೃಷ್ಣ ತಲಾ ಒಂದೊಂದು ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!