Mysore
20
overcast clouds
Light
Dark

ಮತದಾನ ಪ್ರಕ್ರಿಯೆಯಲ್ಲಿ ನೂತನ ವಿಶ್ವದಾಖಲೆ ಬರೆದ ಭಾರತ: ಬರೋಬ್ಬರಿ 64.2 ಕೋಟಿ ಮತದಾನ

ನವದೆಹಲಿ: ರಾಷ್ಟ್ರ ರಾಜಕಾರಣದ ಬಹುಮುಖ್ಯ ಅಂಗವಾದ ಚುನಾವಣೆಯಲ್ಲಿ ಈ ಬಾರಿ ಭಾರತ ವಿನೂತನ ವಿಶ್ವ ದಾಖಲೆ ಬರೆದಿದೆ.

ಹೌದು ಒಟ್ಟು ಏಳು ಹಂತಗಳಲ್ಲಿ ನಡೆದಿದ್ದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನ ಮಾಡುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ ಎಂದು ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯಕ್ತ ರಾಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಈ ಬಾರಿ ಒಟ್ಟು 64.2 ಕೋಟಿ ಜನರು ಮತದಾನ ಮಾಡಿದ್ದಾರೆ. ಇದರಲ್ಲಿ ಮಹಿಳೆಯರು 31.2 ಕೋಟಿ ಹಾಗೂ ಪುರುಷರು 33 ಕೋಟಿ ಜನರು ಮತದಾನ ಮಾಡಿದ್ದಾರೆ. ಚುನಾವಣೆ ನಡೆಸಲು 68 ಸಾವಿರ ನಿಗಾ ತಂಡಗಳು ಹಾಗೂ 1.5 ಕೋಟಿ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಚುನಾವಣೆಯಲ್ಲಿ ಬಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಇದರ ಜತೆಗೆ 4 ಲಕ್ಷ ವಾಹನಗಳು 135 ವಿಶೇಷ ರೈಲುಗಳು ಮತ್ತು 1692 ವಿಶೇಷ ವಿಮಾನಗಳನ್ನು ಈ ಚುನಾವಣೆಗೆ ಬಳಸಲಾಗಿದೆ.