Mysore
31
scattered clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ : ಕೆಳಗೆ ಬಿದ್ದವನ ಮೇಲೆ ಜೆಸಿಬಿ ಹರಿದು ಸ್ಥಳದಲ್ಲೇ ಸಾವು

ಹಲಗೂರು : ಹಲಗೂರು ಸಮೀಪದ ಎಚ್.ಬಸಾಪುರ ಗ್ರಾಮದ ಬಳಿ ಎರಡು ಬೈಕ್‌ಗಳ ನಡುವೆ ನಡೆದ ಡಿಕ್ಕಿಯಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶನಿವಾರ ಸಂಭವಿಸಿದೆ.

ಹಲಗೂರು ಸಮೀಪದ ಕುಲುಮೆದೊಡ್ಡಿ ಗ್ರಾಮದ ಜನತಾ ಕಾಲೋನಿ ನಿವಾಸಿ ರಾಚಯ್ಯ ಅವರ ಪುತ್ರ ನಿಂಗರಾಜು(33) ಮೃತ ವ್ಯಕ್ತಿ.

ಸ್ವಗ್ರಾಮದಿಂದ ಕನಕಪುರ ತಾಲ್ಲೂಕಿನ ಹಲಸೂರು ಗ್ರಾಮಕ್ಕೆ ತನ್ನ ಮಗುವನ್ನು ತಾಯಿ ಬಳಿ ಬಿಡಲು ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಕನಕಪುರ ಕಡೆಯಿಂದ ವೇಗವಾಗಿ ಬಂದ ಬೈಕ್ ನಿಂಗರಾಜು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಗು ರಸ್ತೆ ಬದಿಗೆ ಬಿದ್ದಿದ್ದು, ಸಣ್ಣಪುಟ್ಡ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದೆ. ನಿಂಗರಾಜು ರಸ್ತೆಗೆ ಬಿದ್ದಿದ್ದು, ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಜೆಸಿಬಿ ನಿಂಗರಾಜು ದೇಹದ ಮೇಲೆ ಹರಿದ ಪರಿಣಾಮ ನಿಂಗರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಡಿಕ್ಕಿ ಹೊಡೆದ ಬೈಕ್ ಸವಾರನಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!