Mysore
33
overcast clouds

Social Media

ಶನಿವಾರ, 12 ಸೆಪ್ಟೆಂಬರ್ 2026
Light
Dark

ಮೈಸೂರಿನಲ್ಲಿ ಹಾಡಹಗಲೇ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಕೊಲೆಗೆ ಯತ್ನ!

ಸಾಂಸ್ಕೃತಿಕ ನಗರಿ ಮೈಸೂರಿನ ಜನರನ್ನು ಹಾಡ ಹಗಲೇ ನಡೆದ ಮತ್ತೊಂದು ಹಲ್ಲೆ ಬೆಚ್ಚಿ ಬೀಳಿಸಿದೆ. ಇಂದು ( ಡಿಸೆಂಬರ್‌ 12 ) ಯುವಕರ ಗುಂಪೊಂದು ಮಾರಕಾಸ್ತ್ರಗಳನ್ನು ಹಿಡಿದು ಕೊಲೆ ಯತ್ನ ನಡೆಸಿದ ಘಟನೆ ನಡೆದಿದೆ.

ಮರಿಮಲ್ಲಪ್ಪ – ಅರಸು ರಸ್ತೆ ಮಾರ್ಗದಲ್ಲಿನ ಟೀ ಕ್ಯಾಂಟೀನ್‌ ಒಂದರಲ್ಲಿ ಸ್ನೇಹಿತರೊಂದಿಗೆ ಟೀ ಕುಡಿಯುತ್ತಾ ಕುಳಿತಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಯುವಕನ ಮೂಲತಃ ಉದಯಗಿರಿಯ ನಿವಾಸಿ ಎನ್ನಲಾಗಿದ್ದು, ಹಬೀಬ್‌ ಎಂದು ಗುರುತಿಸಲಾಗಿದೆ. ಇನೋವಾ ಕಾರಿನಲ್ಲಿ ಬಂದ ಏಳೆಂಟು ಜನರ ಗುಂಪು ಹಲ್ಲೆ ನಡೆಸಿ ಪರಾರಿಯಾಗಿದೆ. ಗಾಯಾಳುವಿನ ಜತೆಗಿದ್ದ ಸ್ನೇಹಿತ ಸ್ಥಳೀಯರ ಸಹಾಯದೊಂದಿಗೆ ಗಾಯಾಳುವನ್ನು ಕೆಆರ್‌ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಾಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ದೇವರಾಜ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!