ಬೆಂಗಳೂರು : ಬಿಜೆಪಿಯಿಂದ ವಿಧಾನಸಭಾ ಚುನಾವಣೆಯ ಟಿಕೆಟ್ ಕೊಡುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ ಕೋಟ್ಯಾಂತರ ರೂ. ಹಣ ಪಡೆದು ವಂಚನೆ ಮಾಡಿರುವ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಚೈತ್ರ ಹಾಗೂ ಶ್ರೀಕಾಂತ್ ಅವರಿಗೆ ಶರತ್ತುಬದ್ದ ಜಾಮೀನು ಮಂಜೂರಾಗಿದೆ.
ನಾಳೆ ಆರೋಪಿಗಳಿಬ್ಬರು ನಾಳೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ ಆರೋಪದಡಿಯಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾಳನ್ನು ಸೆಪ್ಟಂಬರ್ 13 ರಂದು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು.
ಟಿಕೆಟ್ ಕೊಡಿಸುವುದಾಗಿ ನಂಬಿಸಿ ಗೋವಿಂದ ಬಾಬು ಪೂಜಾರಿ ಅವರಿಂದ ಚೈತ್ರಾ ಸುಮಾರು 4 ಕೋಟಿ ರೂ. ಹಣ ಪಡೆದಿದ್ದಳು. ಆದರೆ ಗೋವಿಂದ ಬಾಬು ಅವರಿಗೆ ಟಿಕೆಟ್ ಸಿಗಲಿಲ್ಲ ಹಾಗಾಗಿ ಗೋವಿಂದ ಬಾಬು ಚೈತ್ರಾಳಿಗೆ ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ್ದಾರೆ. ಆಗ ಚೈತ್ರಾ ಮತ್ತವಳ ಗ್ಯಾಂಗ್ ಹಣ ವಾಪಸ್ ನೀಡದೇ ವಂಚನೆ ಮಾಡಿತ್ತು. ಈ ಕುರಿತು ಗೋವಿಂದ ಬಾಬು ಪೂಜಾರಿ ದೂರು ನೀಡಿದ್ದರು. ಆ ದೂರಿನ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ಚೈತ್ರಾಳನ್ನು ಅರೆಸ್ಟ್ ಮಾಡಿದ್ದರು.
ಇದೀಗ ಎ1 ಆರೋಪಿ ಚೈತ್ರ ಹಾಗೂ ಎ2 ಆರೋಪಿ ಶ್ರೀಕಾಂತ್ ಗೆ ನ್ಯಾಯಾಲಯ ಶರತ್ತುಬದ್ದ ಜಾಮೀನು ನೀಡಿದ್ದು ನಾಳೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.