Mysore
22
overcast clouds

Social Media

ಶನಿವಾರ, 13 ಜೂನ್ 2026
Light
Dark

ಬಡವರ ಹೊಟ್ಟೆ ಮೇಲೆ ಹೊಡೆಯಲು ಬಿಜೆಪಿಯ ಪ್ರತಿ ನಾಯಕರೂ ಟೊಂಕ ಕಟ್ಟಿ ನಿಂತಿದ್ದಾರೆ : ಕಾಂಗ್ರೆಸ್

ಬೆಂಗಳೂರು : ರಾಜ್ಯದ ಬಡವರ ಹೊಟ್ಟೆ ಮೇಲೆ ಹೊಡೆಯಲು ರಾಜ್ಯದಿಂದ ಹಿಡಿದು ಕೇಂದ್ರದವರೆಗೂ ಬಿಜೆಪಿಯ ಪ್ರತಿ ನಾಯಕರೂ ಟೊಂಕ ಕಟ್ಟಿ ನಿಂತಿದ್ದಾರೆ.ಜನ ಇದಕ್ಕೆಲ್ಲಾ ತಕ್ಕ ಉತ್ತರ ನೀಡುತ್ತಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಕಮಿಷನ್ ಹೊಡೆಯುವ ಸಲುವಾಗಿ ನೆರೆರಾಜ್ಯಗಳಿಂದ ರಾಜ್ಯಸರ್ಕಾರ ಅಕ್ಕಿ ಖರೀದಿಸುವ ನಾಟಕವಾಡುತ್ತಿದೆ ಎಂದು ವಿಜಯೇಂದ್ರ ಟೀಕಿಸುವುದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಕಮಿಷನ್ ಹೊಡೆಯುವ ಪೇಟೆಂಟ್ ಬಿಜೆಪಿಯದೇ ಹೊರತು ಕಾಂಗ್ರೆಸ್‍ನದಲ್ಲ, ವಿಜಯೇಂದ್ರ ಅವರ ಸರ್ವಿಸ್ ಟ್ಯಾಕ್ಸ್ ಹೇಗಿತ್ತು ಎಂಬುದನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಅವರೇ ವಿವರಿಸಿದ್ದಾರೆ. ಬೇಕಿದ್ದರೆ ಒಮ್ಮೆ ಕೇಳಿ ನೋಡಿ ಎಂದು ಕಾಂಗ್ರೆಸ್ ಪ್ರತ್ಯುತ್ತರಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!