ಕಚ್ : ನಿರೀಕ್ಷಿತ ಬಿಪರ್ ಜಾಯ್ ಚಂಡಮಾರುತ ಅಪ್ಪಳಿಸಲಿರುವ ಒಂದು ದಿನ ಮೊದಲು ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಬುಧವಾರ 3.5 ತೀವ್ರತೆಯ ಭೂಕಂಪನ ಸಂಭವಿಸಿವೆ.
ಬಿಪರ್ ಜಾಯ್ ಚಂಡಮಾರುತದ ಹಿನ್ನೆಲೆಯಲ್ಲಿ ಗುಜರಾತ್‌ನ ಸೌರಾಷ್ಟ್ರ, ದ್ವಾರಕಾ ಮತ್ತು ಕಚ್ ಕರಾವಳಿಯಲ್ಲಿ ಭಾರತೀಯ ಹವಾಮಾನ ಇಲಾಖೆ ಈಗಾಗಲೇ ರೆಡ್ ಅಲರ್ಟ್ ಘೋಷಿಸಿದೆ. ಸೈಕ್ಲೋನಿಕ್ ಚಂಡಮಾರುತ ಭಾರಿ ಹಾನಿಯನ್ನುಂಟುಮಾಡುವ ನಿರೀಕ್ಷೆಯಿದ್ದು, ಹಲವು ರಾಜ್ಯಗಳಿಗೆ ಭಾರೀ ಮಳೆಯ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
ಚಂಡಮಾರುತವು ಕಚ್ ಕರಾವಳಿಗೆ ಅಪ್ಪಳಿಸುತ್ತಿರುವುದರಿಂದ ಗುಜರಾತ್‌ನ ಎಂಟು ಜಿಲ್ಲೆಗಳಲ್ಲಿ ಸಮುದ್ರದ ತೀರದಲ್ಲಿ ವಾಸಿಸುತ್ತಿದ್ದ ಸುಮಾರು 50,000 ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಹದಿನೆಂಟು ಎನ್‌ಡಿಆರ್‌ಎಫ್ ತಂಡಗಳನ್ನು ಗುಜರಾತ್‌ನಲ್ಲಿ ಇರಿಸಲಾಗಿದ್ದು, ಕಚ್ ಜಿಲ್ಲೆಯಲ್ಲಿ ನಾಲ್ಕು ಎನ್‌ಡಿಆರ್‌ಎಫ್ ತಂಡಗಳು, ರಾಜ್‌ಕೋಟ್ ಮತ್ತು ದ್ವಾರಕಾದಲ್ಲಿ ತಲಾ ಮೂರು, ಜಾಮ್‌ನಗರದಲ್ಲಿ ಎರಡು, ಪೋರಬಂದರ್, ಜುನಾಗಢ್, ಗಿರ್ ಸೋಮನಾಥ್, ಮೋರ್ಬಿ, ವಲ್ಸಾದ್ ಮತ್ತು ಗಾಂಧಿನಗರದಲ್ಲಿ ತಲಾ ಒಂದು ತಂಡಗಳನ್ನು ನಿಯೋಜಿಸಲಾಗಿದೆ.